IND vs ENG 3rd ODI:ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಇಂದು ನಡೆಯಲಿದೆ. ಇದಕ್ಕೂ ಮುನ್ನ ನಡೆದಿದ್ದ 2 ಪಂದ್ಯಗಳಲ್ಲಿ ರೋಹಿತ್ ಸೈನ್ಯ ಜಯಭೇರಿ ಭಾರಿಸಿ ಒಂದು ಪಂದ್ಯಕ್ಕೂ ಮುಂಚಿತವಾಗಿಯೇ ಸರಣಿ ಕೈವಶ ಮಾಡಿಕೊಂಡಿದೆ.
ಇದೀಗ ಮೂರನೇ ಪಂದ್ಯದಲ್ಲೂ ಭಾರತ ಗೆದ್ದು ಇಂಗ್ಲೆಂಡ್ ಅನ್ನು ವೈಟ್ವಾಶ್ ಮಾಡಲು ಯೋಜನೆ ರೂಪಿಸಿಕೊಂಡಿದೆ. ಮತ್ತೊಂದೆಡೆ ಭಾರತದ ವಿರುದ್ಧ ಕೊನೆಯ ಪಂದ್ಯ ಗೆದ್ದು ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಆಂಗ್ಲ ಪಡೆ ಸಿದ್ಧತೆ ನಡೆಸಿದೆ.
ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಆತಿಥ್ಯ ವಹಿಸಿಕೊಂಡಿದೆ. 2023ರ ಏಕದಿನ ವಿಶ್ವಕಪ್ ಬಳಿಕ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯ ಇದಾಗಿದೆ.
ಮೋದಿ ಮೈದಾನದ ದಾಖಲೆ:ಈ ಮೈದಾನದಲ್ಲಿ ಭಾರತ ಇಟ್ಟು 20 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 11 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದು, 9 ಪಂದ್ಯಗಳನ್ನು ಕಳೆದುಕೊಂಡಿದೆ.
IND vs ENG ಹೆಡ್ ಟು ಹೆಡ್:ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ವರೆಗೂ ಒಟ್ಟು 109 ಏಕದಿನ ಪಂದ್ಯಗಳನ್ನು ಆಡಿವೆ. ಇದರಲ್ಲಿ ಭಾರತ ಅತೀ ಹೆಚ್ಚು 59 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಸಾಧಿಸಿದೆ. ಆಂಗ್ಲ ಪಡೆ 44 ಬಾರಿ ಭಾರತದ ಮೇಲೆ ಜಯಭೇರಿ ಬಾರಿಸಿದೆ.
IND vs ENG ODI ನೇರಪ್ರಸಾರ, ಲೈವ್ ಸ್ಟ್ರೀಮಿಂಗ್ ವಿವರ