ಬಾರ್ಬಡೋಸ್:ಇಂದಿನ ಪಂದ್ಯ ಎಂದೆಂದಿಗೂ ಅವಿಸ್ಮರಣೀಯ. ಇಂದು ವಿರಾಟ್ ಕೊಹ್ಲಿ ಹಿಂದೆಂದೂ ಇಲ್ಲದಂತೆ ಗರ್ಜಿಸಿದರು, ಶರ್ಮಾ ಗೆಲುವಿನ ನಗೆ ಬೀರಿದರು. ಯುವ ಬ್ರಿಗೇಡ್ ಅಂತೂ ಕುಣಿದು ಕುಪ್ಪಳಿಸಿತು. ಕೋಚ್ ರಾಹುಲ್ ದ್ರಾವಿಡ್ ಮೊಗದಲ್ಲಿ ಮಂದ ಹಾಸ ಇತ್ತು. ಹಲವು ಫೈನಲ್ ಗಳ ಸೋಲಿನ ಎಲ್ಲ ನೋವನ್ನು ಈ ಗೆಲುವು ಮರೆಸಿತು. ಇನ್ನು ಡ್ರೆಸ್ಸಿಂಗ್ ರೂಮ್ ನಲ್ಲಿ ತ್ರಿವರ್ಣ ಧ್ವಜ ಹಾರಾಡಿತು. 17 ವರ್ಷಗಳ ದೀರ್ಘ ಕಾಯುವಿಕೆಯ ನಂತರ T20 ವಿಶ್ವಕಪ್ ಅನ್ನು ಮನೆಗೆ ತರಲು ಅಸಾಧ್ಯವೆಂದು ತೋರುತ್ತಿರುವುದನ್ನು ಸಾಧಿಸಿ ತೋರಿಸಿದೆ ಭಾರತ ತಂಡ. ಭಾರತದ ಸಂಭ್ರಮಾಚರಣೆಯ ಕ್ಷಣದಲ್ಲಿ ಒಂದು ಶತಕೋಟಿ ಭಾರತೀಯರು ಸೇರಿಕೊಂಡಿದ್ದಾರೆ.
ಅದು ಆಗುವುದಿಲ್ಲ ಎಂದು ತೋರುತ್ತಿತ್ತು, ಭಾರತೀಯ ಕ್ರಿಕೆಟ್ ಕಥೆ ಇದೆ ಎಂದು ಬಹುತೇಕರು ಅಂದುಕೊಂಡಿದ್ದರು. ಪತ್ರಿಕಾ ಕೊಠಡಿಯಲ್ ನಿರಾಸೆಯ ಕಾರ್ಮೋಡ ಕವಿದಿತ್ತು.ಟೀಮ್ ಇಂಡಿಯಾವನ್ನು ಹೊರತುಪಡಿಸಿ ಎಲ್ಲರೂ ಪಂದ್ಯ ಕೈಕೊಟ್ಟಿತು ಅಂತಾನೇ ಎಂದುಕೊಂಡಿದ್ದರು. ಆದರೆ, ಟೀಂ ಇಂಡಿಯಾ ತನ್ನ ಹೋರಾಟವನ್ನು ಬಿಡದೇ ಕೊನೆವರೆಗೂ ಹೋರಾಡಿ ಗೆದ್ದರು.
ಪಂದ್ಯಕ್ಕಾಗಿ ಮೋಡಗಳನ್ನು ಹಿಡಿದಿಟ್ಟುಕೊಂಡಿದ್ದ ಆಕಾಶ ಕೊನೆಗೂ ಸಂಭ್ರಮಾಚರಣೆಯ ಆನಂದಬಾಷ್ಪ ಸುರಿಯುವಂತೆ ಮಾಡಿದರು. ಅಂತಿಮವಾಗಿ ಟೂರ್ನಿಯ ಕೊನೆಯ ಎಸೆತದಲ್ಲಿ ಭಾರತ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಕಿಕ್ಕಿರಿದು ತುಂಬಿದ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ಭಾವನೆಗಳ ಆಗರವೇ ಆಗಿತ್ತು. ಎರಡೂ ತಂಡಗಳು ಜಿದ್ದಿಗೆ ಬಿದ್ದವರಂತೆ ಕಾದಾಟಕ್ಕೆ ಇಳಿದಿದ್ದವು. ಪಂದ್ಯದ ಆರಂಭದಿಂದಲೂ ಎರಡೂ ತಂಡಗಳಿಂದ ಅತ್ಯುತ್ತಮ ಆಟವೇ ಮೂಡಿ ಬಂತು. ಅಷ್ಟೊಂದು ರೋಚಕತೆ ಹೊಂದಿತ್ತು ಈ ಪಂದ್ಯ.
ವಾಸ್ತವವಾಗಿ, ಇದು ದಕ್ಷಿಣ ಆಫ್ರಿಕಾದ ಕ್ಷಣವಲ್ಲ, ಏಕೆಂದರೆ ಅವರು ಮತ್ತೆ ನಿರಾಸೆಗೆ ಒಳಗಾದರು. ಚೋಕರ್‌ನ ಟ್ಯಾಗ್ ಅನ್ನು ಅಳಿಸಲು ಸಾಧ್ಯವಾಗಲಿಲ್ಲ.
ಭಾರತ ನೀಡಿದ 177 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಎಚ್ಚರಿಕೆಯಿಂದ ಇನಿಂಗ್ಸ್ ಆರಂಭಿಸಿತು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ಅಸಾಧಾರಣ ಬೌಲಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ದಕ್ಷಿಣ ಆಫ್ರಿಕಾದಲ್ಲಿ ಒತ್ತಡ ಹೇರಿದರು. ರೀಜಾ ಹೆಂಡ್ರಿಕ್ಸ್ ಬೌಂಡರಿಯೊಂದಿಗೆ ಪ್ರಾರಂಭಿಸಿದರು. ಆದರೆ ಬುಮ್ರಾ ಅವರ ಔಟ್‌ಸ್ವಿಂಗರ್‌ನಿಂದ ಬೌಲ್ಡ್ ಆದರು. ಈ ಆರಂಭಿಕ ವಿಕೆಟ್ ಭಾರತದ ಶಿಸ್ತಿನ ಬೌಲಿಂಗ್ ದಾಳಿಗೆ ಉತ್ತಮ ನಿದರ್ಶನವಾಯ್ತು.
ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಇನ್ನಿಂಗ್ಸ್ ಬಲಗೊಳಿಸಲು ಮುಂದಾದರು. ಆದರೆ, ಭಾರತದ ಬೌಲರ್‌ಗಳು ಒತ್ತಡವನ್ನು ಹಾಕುತ್ತಲೇ ಸಾಗಿದರು. ಡಿ ಕಾಕ್ ಕೆಲವು ನಿರ್ಣಾಯಕ ಬೌಂಡರಿಗಳನ್ನು ಬಾರಿಸಿ ಗೆಲುವಿನ ಕಡೆ ತಂಡವನ್ನು ತೆಗೆದುಕೊಂಡು ಹೋಗುವಂತೆ ಕಂಡು ಬಂದರು. ಆದರೆ ಮತ್ತೊಂದು ಕಡೆ ಭಾರತೀಯ ಬೌಲರ್ ಗಳು ನಿರ್ಣಾಯಕ ಘಟ್ಟಗಳಲ್ಲಿ ಪಾಲುದಾರಿಕೆಗಳನ್ನು ಮುರಿಯುತ್ತಲೇ ಬಂದರು.
ಬುಮ್ರಾ ಬೌಲಿಂಗ್ ಕ್ಷಣಗಳು: ಟಿ20 ಬೌಲಿಂಗ್‌ನಲ್ಲಿ ಬುಮ್ರಾ ಅವರ ಸ್ಪೆಲ್ ಮಾಸ್ಟರ್‌ಕ್ಲಾಸ್ ಆಗಿತ್ತು. 52 ರನ್ ಗಳಿಸಿ ಅಪಾಯಕಾರಿಯಾಗಿ ಕಾಣುತ್ತಿದ್ದ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡಿದರು.ಈ ವಿಕೆಟ್ ಪ್ರಮುಖವಾಗಿತ್ತು, ಏಕೆಂದರೆ ಚೇಸಿಂಗ್‌ನಲ್ಲಿ ಕ್ಲಾಸೆನ್ ದಕ್ಷಿಣ ಆಫ್ರಿಕಾದ ಅತ್ಯುತ್ತಮ ಭರವಸೆಯಾಗಿದ್ದರು. ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಅಣಿಯಾಗಿದ್ದ ಮಾರ್ಕೊ ಜಾನ್ಸೆನ್ ಅವರನ್ನು ಬುಮ್ರಾ ಬೌಲ್ಡ್ ಮಾಡುವ ಮೂಲಕ ಪೆವಿಲಿಯನ್ ದಾರಿ ತೋರಿಸಿದರು.