ಹೈದರಾಬಾದ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಖಾತೆಗೆ ಕೆಟ್ಟ ದಾಖಲೆಯೊಂದು ಸೇರ್ಪಡೆಗೊಂಡಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಕೊಹ್ಲಿ ಡಕ್ ಔಟ್ ಆಗಿ ಪೆವಿಲಿಯನ್ ಸೇರಿದ್ದಾರೆ. ಒಂಬತ್ತು ಎಸೆತಗಳನ್ನು ಎದುರಿಸಿದ ಅವರು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ವಿಲಿಯಂ ರೌರ್ಕಿ ಬೌಲಿಂಗ್ನಲ್ಲಿ ಕೊಹ್ಲಿ ಕ್ಯಾಚೌಟ್ ಆಗಿ ಪೆವಿಲಿಯನ್ ಹಾದಿ ಹಿಡಿದರು.
ಸಾಮಾನ್ಯವಾಗಿ ಸೆಕೆಂಡ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬರುವ ಕೊಹ್ಲಿ ಈ ಬಾರಿ ಯುವ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಅನುಪಸ್ಥಿತಿಯಿಂದಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಆದರೆ ಈ ಒನ್ ಡೌನ್ ಅವರಿಗೆ ಮತ್ತೊಮ್ಮೆ ಕೂಡಿ ಬರಲಿಲ್ಲ. ವಿರಾಟ್ ಕೊನೆಯ ಬಾರಿಗೆ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಒನ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆ ಪಂದ್ಯದಲ್ಲೂ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 3 ಮತ್ತು 4 ರನ್ ಗಳಿಸಿದ್ದರು. ಕಳೆದ 8 ವರ್ಷಗಳಲ್ಲಿ ಟೆಸ್ಟ್ ನಲ್ಲಿ ನಾಲ್ಕು ಪಂದ್ಯಗಳಲ್ಲಿ ಒನ್ ಡೌನ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಕೊಹ್ಲಿ ಈ ಕ್ರಮಾಂಕದಲ್ಲಿ ಕನಿಷ್ಠ ಒಂದು ಅರ್ಧಶತಕವನ್ನೂ ಸಿಡಿಸಿಲ್ಲ. ಅವರು ಆಡಿರುವ ಆರು ಇನ್ನಿಂಗ್ಸ್‌ಗಳಲ್ಲಿ ಒಟ್ಟು 97 ರನ್ ಮಾತ್ರ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 41 ರನ್ ಆಗಿದೆ.
38ನೇ ಡಕ್:ಇದು ಕೊಹ್ಲಿಯ 38ನೇ ಅಂತಾರಾಷ್ಟ್ರೀಯ ಡಕ್ ಆಗಿದೆ. ಇದು ಸದ್ಯ ಭಾರತ ವಿರುದ್ಧ ಆಡುತ್ತಿರುವ ಟಿಮ್ ಸೌಥಿ (38) ಅವರೊಂದಿಗೆ ಸಮಾನಾಗಿದೆ. ಇವರಿಬ್ಬರ ನಂತರ ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ (33) ಕೂಡ ಸೇರಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಮುತ್ತಯ್ಯ ಮುರಳಿಧರನ್ ಮುಂದಿದ್ದಾರೆ. ಅವರೂ ಆಡಿರುವ ಎಲ್ಲಾ ಸ್ವರೂಪದ ಕ್ರಿಕೆಟ್ಗಳಲ್ಲಿ ಒಟ್ಟು 59 ಬಾರಿ ಡಕ್ಔಟ್ ಆಗಿದ್ದಾರೆ.