ಕರ್ನಾಟಕ

karnataka

ETV Bharat / sports

IND VS NZ, 1st Test: 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್​ ಪಂದ್ಯ ಗೆದ್ದ ನ್ಯೂಜಿಲೆಂಡ್​

ಮೂರುವರೆ ದಶಕಗಳ ಬಳಿಕ ನ್ಯೂಜಿಲೆಂಡ್​ ತಂಡ ಭಾರತದಲ್ಲಿ ಟೆಸ್ಟ್​ ಪಂದ್ಯ ಗೆದ್ದುಕೊಂಡಿದೆ.

By ETV Bharat Sports Team

Published : 13 hours ago

Updated : 13 hours ago

ರಚಿನ್​ ರವೀಂದ್ರ
ನ್ಯೂಜಿಲೆಂಡ್ ಬ್ಯಾಟರ್‌ ರಚಿನ್​ ರವೀಂದ್ರ (AP)

INDIA VS NEW ZEALAND, 1st TEST​: ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಐದನೇ ದಿನವಾದ ಇಂದು ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿತು. ಭಾರತ ನೀಡಿದ್ದ 107 ರನ್​ಗಳ ಗುರಿ ಬೆನ್ನತ್ತಿದ ಕಿವೀಸ್​, ಕೇವಲ 2 ವಿಕೆಟ್​ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಇದರೊಂದಿಗೆ 36 ವರ್ಷಗಳ ಬಳಿಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಗೆಲುವಿನ ಸಿಹಿ ಕಂಡಿದೆ. 1988ರಲ್ಲಿ ಭಾರತದಲ್ಲಿ ನ್ಯೂಜಿಲೆಂಡ್​ ಟೆಸ್ಟ್​ ಪಂದ್ಯ ಗೆದ್ದಿತ್ತು.

ಪಂದ್ಯದ ವಿವರ:ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್​ 462 ರನ್​ಗಳನ್ನು ಕಲೆಹಾಕಿ 356 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿತ್ತು.

ಎರಡನೇ ಇನ್ನಿಂಗ್ಸ್​ನಲ್ಲಿ ಭಾರತದ ಸರ್ಫರಾಜ್ ಖಾನ್ (150) ಮತ್ತು ರಿಷಭ್ ಪಂತ್ (99) ಬ್ಯಾಟಿಂಗ್​ ನೆರವಿನಿಂದ 462 ರನ್‌ ದಾಖಲಿಸಿತು. ಆದರೆ, 356 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದ ಟೀಂ ಇಂಡಿಯಾ ನ್ಯೂಜಿಲೆಂಡ್​ಗೆ ಕೇವಲ 107 ರನ್‌ಗಳ ಗುರಿ ನೀಡಲಷ್ಟೇ ಶಕ್ತವಾಯಿತು.

ಇದಕ್ಕುತ್ತರವಾಗಿ, ಎರಡನೇ ಇನ್ನಿಂಗ್ಸ್​ನಲ್ಲಿ ಕಿವೀಸ್​ ತಂಡ ಡೆವೋನ್​ ಕಾನ್ವೆ (17), ವಿಲ್​ ಯಂಗ್​ (37), ರಚಿನ್​ ರವೀಂದ್ರ (38) ಅವರ ಬ್ಯಾಟಿಂಗ್​ ನೆರವಿನಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಇನ್ನಿಂಗ್ಸ್​ನಲ್ಲಿ ಬುಮ್ರಾ 2 ವಿಕೆಟ್​ ಪಡೆದರು.

ಅ.26 ರಿಂದ ಎರಡನೇ ಟೆಸ್ಟ್​: ಭಾರತ ಮತ್ತು ನ್ಯೂಜಿಲೆಂಡ್​​ ನಡುವಿನ 2ನೇ ಟೆಸ್ಟ್​ ಪಂದ್ಯ ಅ.26ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಸ್ಟೇಡಿಯಂ ಆತಿಥ್ಯ ವಹಿಸಿಕೊಂಡಿದೆ.

ಇದನ್ನೂ ಓದಿ:ಡ್ಯಾಶಿಂಗ್​ ಕ್ರಿಕೆಟರ್‌​ ವೀರೇಂದ್ರ ಸೆಹ್ವಾಗ್​ಗೆ 46ನೇ ಹುಟ್ಟುಹಬ್ಬ: ವೀರೂ ಬರೆದ ದಾಖಲೆಗಳಿವು!

Last Updated : 13 hours ago

ABOUT THE AUTHOR

...view details