ಕರ್ನಾಟಕ

karnataka

ETV Bharat / sports

IND vs ENG: ವಿಶ್ವದಾಖಲೆ ಬರೆದ ಹರ್ಷಿತ್​ ರಾಣಾ, ಶ್ರೇಯಸ್​ ಅಯ್ಯರ್​! - SHREYAS IYER HARSHIT RANA RECORD

IND vs ENG ODI Series: ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್​ ಅಯ್ಯರ್​ ಮತ್ತು ಹರ್ಷಿತ್​ ರಾಣಾ ವಿಶ್ವದಾಖಲೆ ಬರೆದಿದ್ದಾರೆ.

IND VS ENG 1ST ODI RECORDS  IND VS ENG ODI SERIES  SHREYAS IYER  HARSHIT RANA
Harshit Rana and Shreyas Iyer (IANS)

By ETV Bharat Sports Team

Published : Feb 7, 2025, 1:38 PM IST

IND vs ENG ODI Series: ಗುರುವಾರ ನಡೆದ ಇಂಗ್ಲೆಂಡ್​ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿರುವುದು ಗೊತ್ತೇ ಇದೆ. ಆದರೆ, ಈ ಪಂದ್ಯದಲ್ಲಿ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್, ಅಕ್ಷರ್​ ಪಾಟೆಲ್​ ಬ್ಯಾಟಿಂಗ್​ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದರೇ, ಬೌಲಿಂಗ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಹರ್ಷಿತ್​ ರಾಣಾ ತಲಾ 3 ವಿಕೆಟ್​ಗಳನ್ನು ಕಬಳಿಸುವುದರ ಮೂಲಕ ಮಿಂಚಿದರು. ಇದೇ ಪಂದ್ಯದಲ್ಲಿ ಅಯ್ಯರ್​ ಮತ್ತು ಹರ್ಷಿತ್ ರಾಣಾ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಶ್ರೇಯಸ್​ ಅಯ್ಯರ್​ ದಾಖಲೆ:ಈ ಪಂದ್ಯದಲ್ಲಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಅಯ್ಯರ್​ ಉತ್ತಮ ಬ್ಯಾಟಿಂಗ್​ ಮಾಡಿ ವೇಗವಾಗಿ ಅರ್ಧಶತಕ ಸಿಡಿಸಿದರು. ತಮ್ಮ ಈ ಇನ್ನಿಂಗ್ಸ್​ನಲ್ಲಿ 36 ಎಸೆತಗಳನ್ನು ಎದುರಿಸಿದ ಅಯ್ಯರ್​ 9 ಬೌಂಡರಿ ಮತ್ತು 2 ಸಿಕ್ಸರ್​ ಸಹಾಯದಿಂದ 59 ರನ್​ ಚಚ್ಚಿದರು. ಇದರೊಂದಿಗೆ ದಾಖಲೆಯನ್ನು ಬರೆದರು.

ಏಕದಿನ ಕ್ರಿಕೆಟ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 50ಕ್ಕಿಂತ ಹೆಚ್ಚು ಸರಾಸರಿ ಮತ್ತು 100ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 1000ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಮೊದಲ ಬ್ಯಾಟರ್​ ಎಂಬ ಅಪರೂಪದ ದಾಖಲೆ ಬರೆದರು. ಹಿಂದೆಯೂ ಈ ಸಾಧನೆ ಮಾಡಿದ ಬ್ಯಾಟರ್​ಗಳಲ್ಲಿ ಗಿಲ್ ಎರಡನೇ ಸ್ಥಾನದಲ್ಲಿದ್ದರೆ, ಎಬಿ ಡಿವಿಲಿಯರ್ಸ್ ಐದನೇ ಸ್ಥಾನದಲ್ಲಿದ್ದಾರೆ.

ಹರ್ಷಿತ್​ ರಾಣಾ ದಾಖಲೆ:ಇಂಗ್ಲೆಂಡ್​ ವಿರುದ್ಧದ ಮೊದಲ ಪಂದ್ಯದೊಂದಿಗೆ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಹರ್ಷಿತ್ ರಾಣಾ ಪಂದ್ಯದ ಆರಂಭದಲ್ಲಿ ಹೆಚ್ಚಿನ ರನ್​ ಬಿಟ್ಟುಕೊಟ್ಟರು. ಅದರಲ್ಲೂ ಓವರ್​ ಒಂದರಲ್ಲೇ 26 ರನ್​ ಹೊಡಿಸಿಕೊಂಡು ದುಬಾರಿ ಬೌಲರ್​ ಎನಿಸಿಕೊಂಡರು.

ಬಳಿಕ ಕಮ್​ಬ್ಯಾಕ್​ ಮಾಡಿದ ರಾಣಾ ಉತ್ತಮ ಬೌಲಿಂಗ್​ ಮಾಡಿದರು. ಒಟ್ಟು 7 ಓವರ್‌ಗಳನ್ನು ಬೌಲ್ ಮಾಡಿ 53 ರನ್‌ಗಳನ್ನು ಬಿಟ್ಟುಕೊಟ್ಟು 3 ವಿಕೆಟ್‌ಗಳನ್ನು ಪಡೆದರು. ಇದರೊಂದಿಗೆ ರಾಣಾ ಅಪರೂಪದ ದಾಖಲೆ ನಿರ್ಮಿಸಿದರು. ಟೆಸ್ಟ್, ಏಕದಿನ, ಟಿ20 ಮೂರು ಸ್ವರೂಪಗಳಲ್ಲಿ ಚೊಚ್ಚಲ ಪಂದ್ಯದಲ್ಲೇ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ:IND vs ENG​ ಮೊದಲ ಪಂದ್ಯದಿಂದ ಹೊರಗುಳಿದ ವಿರಾಟ್​ ಕೊಹ್ಲಿ: ಕಾರಣ ಏನು?

ಇತ್ತೀಚೆಗೆ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಣಾ, ಮೊದಲ ಪಂದ್ಯದಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಇದಾದ ಬಳಿಕ, ಇಂಗ್ಲೆಂಡ್​ ವಿರುದ್ಧ ನಡೆದ T20 ಚೊಚ್ಚಲ ಪಂದ್ಯದಲ್ಲೂ ಮೂರು ವಿಕೆಟ್ ಉರುಳಿಸಿದರು. ನಿನ್ನೆ ನಡೆದ ಏಕದಿನ ಪಂದ್ಯದಲ್ಲೂ 3 ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಕಳಪೆ ದಾಖಲೆ ಬರೆದ ರಾಣಾ:ಈ ದಾಖಲೆ ಜೊತೆಗೆ ಕಳಪೆ ದಾಖಲೆಯನ್ನು ರಾಣಾ ಬರೆದಿದ್ದಾರೆ ಚೊಚ್ಚಲ ಏಕದಿನ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಮೊದಲ ಭಾರತೀಯ ಬೌಲರ್ ಎಂಬ ಅತ್ಯಂತ ಕೆಟ್ಟ ದಾಖಲೆಯನ್ನೂ ಬರೆದಿದ್ದಾರೆ.

ಇದನ್ನೂ ಓದಿ:ಟಿ20 ಕ್ರಿಕೆಟ್​ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ರಶೀದ್​ ಖಾನ್!

ABOUT THE AUTHOR

...view details