India vs Australia, 5th Test: ಭಾರತ-ಆಸ್ಟ್ರೇಲಿಯಾ ತಂಡಗಳ ಮಧ್ಯೆ ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಇಂದಿನಿಂದ ಸಿಡ್ನಿಯಲ್ಲಿ ನಡೆಯುತ್ತಿದೆ. ಸರಣಿಯಲ್ಲಿ ಸತತ ವೈಫಲ್ಯ ಪ್ರದರ್ಶಿಸಿ ತಂಡಕ್ಕೆ ಹೊರೆಯಾಗಿದ್ದ ರೋಹಿತ್ ಶರ್ಮಾ ಪಂದ್ಯದಿಂದ ದೂರ ಉಳಿದಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಟೀಂ ಇಂಡಿಯಾ ಎರಡು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದಿದೆ. ರೋಹಿತ್ ಶರ್ಮಾ ಬದಲು ಯುವ ಬ್ಯಾಟರ್ ಶುಭಮನ್ ಗಿಲ್ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಓಪನರ್ ಆಗಿ ಬ್ಯಾಟಿಂಗ್‌ಗಿಳಿದು ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದೆಡೆ, ಬೆನ್ನು ನೋವಿನಿಂದ ಬಳಲುತ್ತಿರುವ ಆಕಾಶ್ ದೀಪ್ ಅವರ ಸ್ಥಾನವನ್ನು ಕರ್ನಾಟಕದ ಯುವ ವೇಗಿ ಪ್ರಸಿದ್ಧ ಕೃಷ್ಣ ತುಂಬಿದ್ದಾರೆ.
ಪಂದ್ಯಕ್ಕೂ ಮುನ್ನ ಮಾತನಾಡಿದ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ, "ರೋಹಿತ್ ಶರ್ಮಾ ಅವರೇ ನಮ್ಮ ಕ್ಯಾಪ್ಟನ್. ಆದರೆ ಇಂದಿನ ಟೆಸ್ಟ್ ಪಂದ್ಯವನ್ನು ಅವರು ಆಡದಿರಲು ನಿರ್ಧರಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಮ್ಮ ತಂಡದಲ್ಲಿ ಒಗ್ಗಟ್ಟಿದೆ" ಎಂದರು.