ಕರ್ನಾಟಕ

karnataka

ETV Bharat / sports

ಟೀಂ ಇಂಡಿಯಾ ಅಭಿಮಾನಿಗಳಿಗೆ ಬ್ಯಾಡ್​ನ್ಯೂಸ್​: ಉಳಿದ ಎರಡು ಪಂದ್ಯಗಳಿಗೂ ಸ್ಟಾರ್​ ಬೌಲರ್​ ಅಲಭ್ಯ! - IND VS AUS TEST

ಆಸ್ಟ್ರೇಲಿಯಾ ವಿರುದ್ಧ ಉಳಿದ ಎರಡು ಪಂದ್ಯಗಳಲ್ಲಿ ಬೌಲರ್​ ಮೊಹಮ್ಮದ್​ ಶಮಿ ಆಡುವ ಕುರಿತು ಬಿಸಿಸಿಐ ಅಪ್​ಡೇಟ್​ ನೀಡಿದೆ.

IND VS AUS TEST SERIES  MOHMMED SHAMI UPDATE  BCCI  IND VS AUS 4TH TEST
ಭಾರತ ತಂಡ (IANS)

By ETV Bharat Sports Team

Published : Dec 24, 2024, 10:40 AM IST

Mohmmed Shami: ಸಧ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್​ ಗವಾಸ್ಕರ್​ ಟ್ರೋಫಿ ಭಾಗವಾಗಿ 5 ಪಂದ್ಯಗಳ ಟೆಸ್ಟ್​ ಸರಣಿ ನಡೆಯುತ್ತಿದೆ. ಈಗಾಗಲೇ ಮೂರು ಪಂದ್ಯಗಳು ಮುಕ್ತಾಯಗೊಂಡಿದ್ದು ಇನ್ನೆರಡು ಪಂದ್ಯಗಳು ಬಾಕಿ ಇವೆ.

WTC ದೃಷ್ಟಿಯಿಂದ ಭಾರತ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಏತನ್ಮಧ್ಯೆ, ಉಳಿದ ಎರಡು ಪಂದ್ಯಗಳಿಗೆ ಮೊಹಮ್ಮದ್​ ಶಮಿ ಭಾರತ ತಂಡದ ಭಾಗವಾಗಲಿದ್ದಾರೆ ಎಂಬು ಸುದ್ದಿ ಭಾರಿ ಸದ್ದು ಮಾಡಿತ್ತು. ಇದೀಗ ಬಿಸಿಸಿಐ ಅವರ ಕುರಿತು ಬಿಗ್​ ಅಪ್​ಡೇಟ್​ ನೀಡಿದೆ.

ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಮುಂದಿನ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಶಮಿ ಎಡ ಮೊಣಕಾಲಿನ ಊತದಿಂದ ಬಳಲುತ್ತಿದ್ದು, ಅವರು ಉಳಿದ ಎರಡು ಟೆಸ್ಟ್‌ಗಳಿಗೆ ಲಭ್ಯ ಇರುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

ಈ ಹಿಂದೆ ಶಮಿ ಬಲ ಹಿಮ್ಮಡಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರಿಗೆ ಯಾವುದೇ ತೊಂದರೆಯಾಗಿಲ್ಲ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ಆದರೆ, ಇದೀಗ ಅವರ ಬಲ ಮೊಣಕಾಲಿನಲ್ಲಿ ಸಣ್ಣ ಊತ ಕಾಣಿಸಿಕೊಂಡಿದ್ದಾಗಿ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಬಿಸಿಸಿಐ, "ಸುಧೀರ್ಘ ಅವಧಿಯ ನಂತರ ಶಮಿ ಹೆಚ್ಚು ಬೌಲಿಂಗ್ ಮಾಡುತ್ತಿದ್ದಾರೆ, ಇದು ಊತಕ್ಕೆ ಕಾರಣವಾಗಿದೆ. ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ತಂಡವು ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ." ಎಂದು ತಿಳಿಸಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚಿದ ಕೆಲಸದ ಹೊರೆ:ಶಸ್ತ್ರಚಿಕಿತ್ಸೆ ಬಳಿಕ ಶಮಿ ಕೆಲ ಕಾಲ ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದರು. ಆದರೆ ಇತ್ತೀಚೆಗೆ ಆ ಸಮಸ್ಯೆಯಿಂದ ಚೇತರಿಸಿಕೊಂಡು ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ನವೆಂಬರ್‌ನಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಶಮಿ ಬಂಗಾಳ ಪರ ಆಡಿದ್ದರು. ಅವರು ಮಧ್ಯಪ್ರದೇಶ ವಿರುದ್ಧ 43 ಓವರ್‌ಗಳನ್ನು ಬೌಲ್ ಮಾಡಿದ್ದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (SMAT) ಒಂಬತ್ತು ಪಂದ್ಯಗಳನ್ನು ಸಹ ಆಡಿದ್ದರು. ಟೆಸ್ಟ್ ಸರಣಿಗೆ ತಯಾರಾಗಲು ಅವರು ಹೆಚ್ಚು ಓವರ್‌ಗಳನ್ನು ಬೌಲ್ ಮಾಡಿದ್ದರು.

ಈ ಪ್ರಯತ್ನಗಳಿಂದ ಅವರ ಫಿಟ್ನೆಸ್ ಸುಧಾರಿಸಿದರೂ, ಅವರ ಮೇಲೆ ಹೆಚ್ಚಿದ ಹೊರೆಯಿಂದಾಗಿ ಮಂಡಿ ಊತಕ್ಕೆ ಕಾರಣವಾಗಿದೆ. ಇದರೊಂದಿಗೆ ಶಮಿಯನ್ನು ಪರೀಕ್ಷಿಸಿದ ಬಿಸಿಸಿಐ ವೈದ್ಯಕೀಯ ತಂಡ, ಶಮಿ ಅವರು ಕಾರ್ಯಭಾರವನ್ನು ನಿರ್ವಹಿಸಲು ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕು ಎಂದು ತಿಳಿಸಿದೆ.

ಕೊನೆಯ ಎರಡು ಟೆಸ್ಟ್‌ಗಳಿಗೂ ಅವಕಾಶವಿಲ್ಲ:ಈ ಹಿನ್ನೆಲೆ ಶಮಿ ಸರಣಿಯ ಉಳಿದ ಎರಡು ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಎಂದು ಬಿಸಿಸಿಐ ಘೋಷಿಸಿದೆ. ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿರುವ ವೈದ್ಯಕೀಯ ತಂಡದ ಮಾರ್ಗದರ್ಶನದಲ್ಲಿ ಅವರು ಚೇತರಿಕೆಯ ಮೇಲೆ ಕೇಂದ್ರೀಕರಿಸುತ್ತಾರೆ. ಹೀಗಾಗಿ ಶಮಿ ಕ್ರಿಕೆಟ್‌ಗೆ ಮರಳುವುದು ಅವರ ಚೇತರಿಕೆಯ ಪ್ರಗತಿಯನ್ನು ಅವಲಂಬಿಸಿರುತ್ತದೆ.

ಏತನ್ಮಧ್ಯೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಮುಂದಿನ ಎರಡು ಟೆಸ್ಟ್‌ಗಳನ್ನು ಗೆಲ್ಲಬೇಕು. ಈ ಸರಣಿಯಲ್ಲಿ, ಬೌಲಿಂಗ್‌ಗಾಗಿ ತಂಡವು ಹೆಚ್ಚಾಗಿ ಬುಮ್ರಾ ಅವರನ್ನು ಅವಲಂಬಿಸಿದೆ. ಇತರ ಬೌಲರ್‌ಗಳು ಹೆಚ್ಚು ಪ್ರಭಾವ ಬೀರುತ್ತಿಲ್ಲ. ಟ್ರೋಫಿಯಲ್ಲಿ ಮಹತ್ವದ ಪಂದ್ಯಗಳಿಗೆ ಟೀಂ ಇಂಡಿಯಾ ಸಿದ್ಧತೆ ನಡೆಸುತ್ತಿರುವ ಈ ಹೊತ್ತಿನಲ್ಲಿ ಶಮಿ ಅಲಭ್ಯತೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇದನ್ನೂ ಓದಿ:ಭಾರತದ ಯುವ ಕ್ರಿಕೆಟರ್​ಗೆ ಒಲಿದ ಜಾಕ್​ಪಾಟ್​: ಅಮೆರಿಕ ತಂಡಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ

ABOUT THE AUTHOR

...view details