ವಿಶಾಖಪಟ್ಟಣಂ: ಟೀಂ ಇಂಡಿಯಾ ಬ್ಯಾಟರ್ಗಳು ಉತ್ತಮ ಶಾಟ್ ಸ್ವೀಪ್ ಆಡಬಲ್ಲರು. ರಿವರ್ಸ್ ಸ್ವೀಪ್‌ಗಳನ್ನೂ ಹೊಡೆಯಬಲ್ಲರು ಎಂದು ವಿಕೆಟ್‌ಕೀಪರ್ ಕಮ್ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ವಿಶಾಖಪಟ್ಟಣಂನಲ್ಲಿ ಆರಂಭವಾಗಲಿದೆ. ಈಗಾಗಲೇ ಉಭಯ ತಂಡಗಳು ವೈಜಾಗ್ಗೆ ತೆರಳಿ ಅಭ್ಯಾಸ ನಡೆಸಿವೆ. ಎರಡನೇ ಪಂದ್ಯ ಗೆಲ್ಲಲು ಭಾರತ ಕೆಲ ಯೋಜನೆಗಳನ್ನು ರೂಪಿಸಿದೆ. ಇದರ ನಡುವೆ ವಿಕೆಟ್ ಕೀಪರ್ ಶ್ರೀಕರ್ ಭರತ್ ಪೂರ್ವಭಾವಿ ಮಾಧ್ಯಮಗೋಷ್ಠಿಯಲ್ಲಿ ಸ್ವೀಪ್ ಶಾಟ್ ಬಗ್ಗೆ ಮಾತನಾಡಿದ್ದಾರೆ. ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಉತ್ತಮ ಸ್ವೀಪ್ ಶಾಟ್ ಆಡಬಲ್ಲರು. ರಿವರ್ಸ್ ಸ್ವೀಪ್‌ಗಳನ್ನೂ ಹೊಡೆಯಬಲ್ಲರು ಎಂದು ಶ್ರೀಕರ್ ಭರತ್ ಹೇಳಿದ್ದಾರೆ.
ಭಾರತದ ಬ್ಯಾಟ್ಸ್‌ಮನ್‌ಗಳು ಏಕೆ ಪಂದ್ಯದಲ್ಲಿ ಸ್ವೀಪ್ ಶಾಟ್ಗಳನ್ನು ಆಡಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಭರತ್, 'ಭಾರತದಲ್ಲಿ ನಾವು ಇಂತಹ ಪಿಚ್‌ಗಳಲ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಮಗೆ ಸ್ವೀಪ್, ರಿವರ್ಸ್ ಸ್ವೀಪ್ ಅಥವಾ ಪೆಡಲ್ ಶಾಟ್ ಅನ್ನು ಹೇಗೆ ಆಡಬೇಕು ಎಂದು ತಿಳಿದಿಲ್ಲ, ಆದರೆ ನಿರ್ದಿಷ್ಟ ಸಮಯಕ್ಕೆ ತಂಡದ ಪರಿಸ್ಥಿತಿಯನ್ನು ಪರಿಗಣಿಸಿ, ಬ್ಯಾಟ್ಸ್‌ಮನ್‌ಗಳಾಗಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಮೊದಲ ಪಂದ್ಯಕ್ಕೂ ಮುನ್ನ ರಿವರ್ಸ್ ಸ್ವೀಪ್ ಶಾಟ್ಗಳನ್ನು ಅಭ್ಯಾಸ ಮಾಡಿದ್ದೆವು ಎಂದೂ ಭರತ್ ತಿಳಿಸಿದ್ದಾರೆ.