ನವದೆಹಲಿ:IPL 2024 ರ ಪ್ಲೇಆಫ್ ಪಂದ್ಯಗಳು ಪ್ರಾರಂಭವಾಗಿವೆ. ಎಲಿಮಿನೇಟರ್ ಪಂದ್ಯ ಇಂದು ಅಂದರೆ ಮೇ 22 ರಂದು ನಡೆಯಲಿದೆ. ಈ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ಮೇ 24 ರಂದು ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕ್ವಾಲಿಫೈಯರ್ 2 ಪಂದ್ಯವನ್ನು ಆಡಲಿದೆ. ಆದರೆ ಎಲಿಮಿನೇಟರ್‌ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು ಬೆಂಗಳೂರು ತಂಡಕ್ಕೆ ಶುಭ ಹಾರೈಸಿದ್ದಾರೆ.
IPL 2024 Eliminator RR vs RCB:ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಸತತ 6 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ತಲುಪಿದೆ. ಒಂದು ಸಮಯದಲ್ಲಿ ತಂಡವು ಮೊದಲ 8 ಪಂದ್ಯಗಳಲ್ಲಿ 7 ರಲ್ಲಿ ಸೋತಿತ್ತು. ಆದರೆ ನಂತರ ಅವರು ಉತ್ತಮ ಪುನರಾಗಮನ ಮಾಡಿದೆ.
ಆರ್‌ಸಿಬಿ ಎಷ್ಟು ಬಾರಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ?: ಸತತ ಆರು ಗೆಲುವು ಸಾಧಿಸುವ ಮೂಲಕ ಈ ಬಾರಿ ಬೆಂಗಳೂರು ತಂಡ ಐಪಿಎಲ್ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಐಪಿಎಲ್ 2024 ರ ಮೊದಲು ಬೆಂಗಳೂರು 9 ಬಾರಿ ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವುದು ಗಮನಾರ್ಹ. ಬೆಂಗಳೂರು ಕೂಡ ಮೂರು ಬಾರಿ ಫೈನಲ್ ಪಂದ್ಯ ಆಡಿದೆ. ಆದರೆ ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ.
ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಅತೀ ಹೆಚ್ಚು ರನ್ ಗಳಿಸಿದ ಸೀಸನ್ ಯಾವುದು ಗೊತ್ತಾ?:ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ ಇದುವರೆಗೆ 14 ಪಂದ್ಯಗಳನ್ನು ಆಡಿದ್ದಾರೆ. ಈ 14 ಪಂದ್ಯಗಳಲ್ಲಿ ಅವರು 155.60 ಸ್ಟ್ರೈಕ್ ರೇಟ್‌ನಲ್ಲಿ 708 ರನ್ ಗಳಿಸಿದ್ದಾರೆ. ಇದರಲ್ಲಿ ಐದು ಅರ್ಧ ಶತಕ ಮತ್ತು ಒಂದು ಶತಕ ಸೇರಿದೆ. ವಿರಾಟ್ ಕೊಹ್ಲಿ ಈ ಸೀಸನ್ನಲ್ಲಿ ಇದುವರೆಗೆ 59 ಬೌಂಡರಿ ಮತ್ತು 37 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದು ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ. ಐಪಿಎಲ್ 2016ರಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದರು. ಇದರಲ್ಲಿ ಏಳು ಅರ್ಧ ಶತಕ ಹಾಗೂ ನಾಲ್ಕು ಶತಕಗಳು ಸೇರಿರುವುದು ಗಮನಾರ್ಹ.
ಓದಿ:ಇಂದು 'ರಾಯಲ್ಸ್' ಎಲಿಮಿನೇಟರ್ ಫೈಟ್: ಆರ್ಆರ್ ವಿರುದ್ಧ ಆರ್‌ಸಿಬಿ ದಾಖಲೆ ಹೇಗಿದೆ ಗೊತ್ತಾ? - RR vs RCB Eliminator