ಕರ್ನಾಟಕ

karnataka

ETV Bharat / sports

ನನ್ನ ಪುತ್ರಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ; ಅಳಲು ತೋಡಿಕೊಂಡ ವೇಗಿ ಶಮಿ - ಮೊಹಮ್ಮದ್ ಶಮಿ

ಭಾರತದ ವೇಗದ ಬೌಲರ್​​ ಮೊಹಮ್ಮದ್ ಶಮಿ ಸಂದರ್ಶನವೊಂದರಲ್ಲಿ ತಮ್ಮ ನೋವು ಹೊರಹಾಕಿದ್ದಾರೆ.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ

By ETV Bharat Karnataka Team

Published : Feb 10, 2024, 9:03 AM IST

ಹೈದರಾಬಾದ್:"ತಮ್ಮ ಪುತ್ರಿಯನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ" ಎಂದು ಭಾರತದ ವೇಗದ ಬೌಲರ್​​ ಮೊಹಮ್ಮದ್ ಶಮಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಶಮಿ, ಪತ್ನಿ ಹಸಿನ್ ಜಹಾನ್‌ ಅವರಿಂದ ದೂರುವಾದ ಬಗ್ಗೆ ಮಾತನಾಡುತ್ತಾ ಕೆಲವು ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

"ಮಗಳು ಐರಾಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ತನ್ನೊಂದಿಗೆ ಮಾತನಾಡಲು ಪುತ್ರಿ ಐರಾಗೆ ಅವಕಾಶವಿದೆ. ಆದರೆ, ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಅವರೊಂದಿಗೆ ಮಾತುಕತೆ ಇಲ್ಲದ ಕಾರಣ ಐರಾಳನ್ನು ಭೇಟಿ ಮಾಡಲು ಅವಕಾಶ ಸಿಗುತ್ತಿಲ್ಲ. ಹಸಿನ್ ಜಹಾನ್ ಅವರು ನನಗೆ ಅವಕಾಶ ನೀಡಿದರೆ ಮಾತ್ರ ನಾನು ಐರಾ ಜೊತೆ ಮಾತನಾಡಲು ಸಾಧ್ಯ. ನನ್ನ ಮಗಳು ನನ್ನೊಂದಿಗೆ ಮಾತನಾಡಲು ಅವಳ ಮೇಲೆ ಅವಲಂಬಿತಳಾಗಿದ್ದಾಳೆ. ನಾನು ಅವನನ್ನು ಬಹಳ ದಿನಗಳಿಂದ ನೋಡಿಲ್ಲ. ಅವರು ಆರೋಗ್ಯದಿಂದರಲು ಮತ್ತು ಎಲ್ಲದರಲ್ಲೂ ಯಶಸ್ವಿಯಾಗಲೆಂದು ಬಯಸುವೆ. ಹಸಿನ್ ಮತ್ತು ನನ್ನ ನಡುವಿನ ಜಗಳ ನಮಗೆ ಮಾತ್ರ ಸೀಮಿತವಾಗಲಿ. ನಮ್ಮ ನಡುವಿನ ಕಲಹದಲ್ಲಿ ಪುತ್ರಿ ಐರಾ ಬಲಿಯಾಗಬಾರದು. ನನ್ನ ಮಗಳು ಜೀವನದ ಉದ್ದಕ್ಕೂ ಖುಷಿಯಾಗಿರಬೇಕು ಎಂದು ಭಾವಿಸುತ್ತೇನೆ" ಎಂದರು.

"ಯಾರೂ ತನ್ನ ಕುಟುಂಬ ಮತ್ತು ಮಕ್ಕಳನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ, ಕೆಲವು ಸನ್ನಿವೇಶಗಳು ನಮ್ಮ ಕೈ ಮೀರುತ್ತವೆ. ನಾನು ಅವಳನ್ನು ತುಂಬಾ ಮಿಸ್​ ಮಾಡುಕೊಳ್ಳುತ್ತೇನೆ" ಎಂದು ಶಮಿ ಇದೇ ವೇಳೆ ಭಾವುಕರಾದರು. ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ದಂಪತಿಯು ದೂರವಾಗಿದ್ದು, ಪುತ್ರಿ ಐರಾ ಸದ್ಯ ತಾಯಿಯ ಜೊತೆಗೆ ವಾಸವಾಗಿದ್ದಾರೆ. ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾನ್ 2014 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ 2015 ರಲ್ಲಿ ಐರಾ ಜನಿಸಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಸದ್ಯ ಇಬ್ಬರು ಬೇರೆ ಬೇರೆಯಾಗಿ ಜೀವಿಸುತ್ತಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​​ನಲ್ಲಿ​ ಆಡಿದ್ದ ಮೊಹಮ್ಮದ್ ಶಮಿ, ಗಾಯದ ಸಮಸ್ಯೆಯಿಂದಾಗಿ ಇದೀಗ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾದ ವಾರ್ನರ್, ಝಂಪಾ ಅಬ್ಬರಕ್ಕೆ ವೆಸ್ಟ್ ಇಂಡೀಸ್ ತತ್ತರ

ABOUT THE AUTHOR

...view details