ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿ ಕುಡಿಯುವ Black Water ಎಷ್ಟು ದುಬಾರಿ ಗೊತ್ತಾ: ಬೆಲೆ ಕೇಳಿದ್ರೆ ಬೆರಗಾಗ್ತೀರ!

ವಿರಾಟ್​ ಕೊಹ್ಲಿ ಬ್ಲಾಕ್​ ವಾಟರ್​ ಸೇವನೆ ಮಾಡುತ್ತಾರೆ. ನೈಸರ್ಗಿಕವಾಗಿ ಸಿಗುವ ಈ ಕಪ್ಪು ನೀರು ಹೆಚ್ಚು ಶುದ್ಧವಾಗಿದ್ದು ದುಬಾರಿ ಕೂಡ ಆಗಿದೆ.

VIRAT KOHLI DRINKING WATER PRICE  BLACK WATER BENEFITS  BLACK WATER PRICE AND BENEFITS  VIRAT KOHLI FITNESS ROUTINE
ವಿರಾಟ್​ ಕೊಹ್ಲಿ (IANS And ETV Bharat File Image)

By ETV Bharat Sports Team

Published : Dec 3, 2024, 1:23 PM IST

Virat Kohli Drinking water price: ವಿಶ್ವದ ಅಗ್ರ ಬ್ಯಾಟರ್​ಗಳಲ್ಲಿ ಟೀಂ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಕೂಡ ಒಬ್ಬರು. ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಎರಡನೇ ಬ್ಯಾಟರ್​ ಆಗಿದ್ದಾರೆ. ಕೊಹ್ಲಿ ಈವರೆಗೆ ODI, T20, ಟೆಸ್ಟ್​ ಈ ಎಲ್ಲಾ ಮೂರು ಸ್ವರೂಪಗಳಲ್ಲಿ ಒಟ್ಟು 539 ಪಂದ್ಯಗಳನ್ನು ಆಡಿದ್ದಾರೆ.

ಏಕದಿನದಲ್ಲಿ 50 ಶತಕದೊಂದಿಗೆ 13906 ರನ್​ ಗಳಿಸಿದ್ದರೇ, ಟಿ20ಯಲ್ಲಿ ಒಂದು ಶತಕದೊಂದಿಗೆ 4188 ರನ್​, ಟೆಸ್ಟ್​ನಲ್ಲಿ 30 ಶತಕಗಳೊಂದಿಗೆ 9145 ರನ್​ ಗಳಿಸಿದ್ದಾರೆ. ಇದರೊಂದಿಗೆ ಒಟ್ಟಾರೆ 81 ಅಂತಾರಾಷ್ಟ್ರೀಯ ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಕ್ರಿಕೆಟ್​ನಲ್ಲಿ ಇಷ್ಟೆಲ್ಲ ಸಾಲು ಸಾಲು ದಾಖಲೆಗಳನ್ನು ಬರೆಯಲು ಸಾಧ್ಯವಾಗಿರುವುದು ಅವರ ಫಿಟ್ನೆಸ್​ ಇಂದ ಎಂದರೆ ತಪ್ಪಾಗಲ್ಲ.

ಹೌದು, ಕೊಹ್ಲಿ ಕ್ರಿಕೆಟ್​ಗೆ ಕೊಟ್ಟಷ್ಟೇ ಮಹತ್ವವನ್ನು ಫಿಟ್ನೆಸ್​ಗೆ ಕೊಡುತ್ತಾರೆ. ಇತರೆ ಕ್ರಿಕೆಟರ್​ಗೆ ಹೋಲಿಸದರೆ ಕೊಹ್ಲಿ ಹೆಚ್ಚು ಫಿಟ್ನೆಸ್​ ಫ್ರೀಕ್​ ಆಗಿದ್ದಾರೆ. ಈ ಬಗ್ಗೆ ಸ್ವತಃ ಕೊಹ್ಲಿ ಹಲವಾರು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ವ್ಯಾಯಾಮ ಸೇರಿದಂತೆ ಅವರು ಸೇವಿಸುವ ಆಹಾರದ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತಾರೆ. ಹೀಗಾಗಿ ಕೊಹ್ಲಿ ತಿನ್ನುವ ಅಕ್ಕಿಯಿಂದ ಹಿಡಿದು ಕುಡಿಯುವ ನೀರಿನ ವರೆಗೆ ಎಲ್ಲವೂ ದುಬಾರಿ ಬೆಲೆಯದ್ದಾಗಿವೆ. ಅದರಲ್ಲೂ ಅವರು ಕುಡಿಯುವ ನೀರು ವಿಶೇಷವಾಗಿದೆ. ಏಕೆಂದರೆ ಕೊಹ್ಲಿ ಮಿನರಲ್ ವಾಟರ್ ಬದಲಿಗೆ 'ಬ್ಲಾಕ್ ವಾಟರ್' ಸೇವಿಸುತ್ತಾರೆ.

ನೀರಿನ ಪ್ರಯೋಜನೆ:ಈ ನೀರು ಕಪ್ಪು ಬಣ್ಣದ್ದಾಗಿದ್ದು ಸಾಮಾನ್ಯ ನೀರಿಗಿಂತ ಹೆಚ್ಚಿನ pH ಮಟ್ಟವನ್ನು ಹೊಂದಿರುತ್ತದೆ. ಈ pH ಮಟ್ಟ ಎಂದರೆ ನೀರು ಎಷ್ಟು ಶುದ್ಧವಾಗಿದೆ ಎಂಬುದನ್ನು ತಿಳಿಸುತ್ತದೆ. ಅಂದರೆ ಇದು ನೀರಿನ ಗುಣಮಟ್ಟ ಸೂಚಿಸುವ ಪ್ರಮುಖ ಸೂಚಕವಾಗಿದೆ. ಸಾಮಾನ್ಯವಾಗಿ ನೀರಿನ pH ಮಟ್ಟವು 6 ರಿಂದ 7 ಆಗಿರುತ್ತದೆ.

ಆದರೆ ಈ ಕಪ್ಪು ನೀರಿನ ಪಿಹೆಚ್ ಮಟ್ಟವು 8.5 ಆಗಿದೆ. ಅಂದರೆ ಅತೀ ಹೆಚ್ಚು ಶುದ್ಧತೆಯ ನೀರಾಗಿದೆ. ನೈಸರ್ಗಿಕವಾಗಿ ಸಿಗುವ ಈ ಕಪ್ಪು ನೀರಿನಲ್ಲಿ 70ಕ್ಕೂ ಹೆಚ್ಚು ಖನಿಜಗಳಿವೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಕಪ್ಪು ನೀರಿನಲ್ಲಿನ ಅಣುಗಳು ಚಿಕ್ಕದಾಗಿವೆ. ಇವುಗಳನ್ನು ನಮ್ಮ ದೇಹದ ಜೀವಕೋಶಗಳು ಸುಲಭವಾಗಿ ಹೀರಿಕೊಳ್ಳುತ್ತವೆ. ಇದಕ್ಕಿಂತ ಹೆಚ್ಚಾಗಿ, ಈ ಕಪ್ಪು ನೀರಿನ ಅಣುಗಳು ನಮ್ಮ ದೇಹ ವ್ಯವಸ್ಥೆಗೆ ನಾವು ಒದಗಿಸುವ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಬಹಳ ಬೇಗನೆ ಕೆಲಸ ಮಾಡುತ್ತವೆ. ಈ ಕಪ್ಪು ನೀರಿನಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಕಪ್ಪು ನೀರಿನ ಬೆಲೆ:ಸಾಮಾನ್ಯವಾಗಿ ಮಿನರಲ್​ ನೀರಿನ ಬೆಲೆ 20 ರಿಂದ 40 ರೂಪಾಯಿ ಇದ್ದರೆ, ಈ ಕಪ್ಪು ನೀರಿನ ಬೆಲೆ ಲೀಟರ್​ಗೆ ರೂ.600ರಿಂದ ರೂ.3000ರ ವರೆಗೆ ಇರಲಿದೆ. ವಿಶೇಷವಾಗಿ ಈ ನೀರನ್ನು ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕೊರೊನಾ ಆರಂಭವಾದಾಗಿನಿಂದ ಕೊಹ್ಲಿ ಈ ಕಪ್ಪು ನೀರು ಸೇವನೆ ಆರಂಭಿಸಿದ್ದಾರೆ ಎಂದು ವರದಿಗಳಾಗಿವೆ. ಕೊಹ್ಲಿ ಮಾತ್ರವಲ್ಲ, ಬಾಲಿವುಡ್ ನಟಿ ಊರ್ವಶಿ ರೌಟೇಲಾ, ಮಲೈಕಾ ಅರೋರಾ, ಸೌತ್ ಸ್ಟಾರ್ ಶ್ರುತಿ ಹಾಸನ್ ಅವರಂತಹ ಹೆಸರಾಂತ ನಟ, ನಟಿಯರು ಕೂಡ ಫಿಟ್ ಆಗಿರಲು ಈ ಕಪ್ಪು ನೀರನ್ನು ಬಳಸುತ್ತಾರೆ.

ಇದನ್ನೂ ಓದಿ:ವಿರಾಟ್​ ಕೊಹ್ಲಿ ಫಿಟ್ನೆಸ್​ ಗುಟ್ಟೇನು?: ರನ್​ ಮಷಿನ್ ಆಹಾರ ಪದ್ಧತಿ ಹೇಗಿರುತ್ತದೆ?, ಎಷ್ಟು ಗಂಟೆ ವ್ಯಾಯಾಮ ಮಾಡ್ತಾರೆ ಗೊತ್ತಾ? - Virat Kohli Fitness Mantra

ABOUT THE AUTHOR

...view details