ನವದೆಹಲಿ:ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರ ಅದ್ಭುತ ಪ್ರದರ್ಶನ ಈ ಭಾರಿ ಭಾರತ 17 ವರ್ಷಗಳ ನಂತರ ಜೂನ್ 29 ರಂದು ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿತು. ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತು. ಈ ಪಂದ್ಯ ರೋಚಕವಾಗಿದ್ದು, ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಅವರ ಕೊಡುಗೆ ದೊಡ್ಡದಿದೆ. ಅವರು 3 ಓವರ್‌ಗಳಲ್ಲಿ 20 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದಿದ್ದರು.
ವಡೋದರಾದಲ್ಲಿ ಹಾರ್ದಿಕ್ ಪಾಂಡ್ಯ ಉತ್ಸವ: ಟಿ20 ವಿಶ್ವಕಪ್ ಗೆದ್ದ 16 ದಿನಗಳ ನಂತರ ಹಾರ್ದಿಕ್ ಪಾಂಡ್ಯ ಅವರು ಬರೋಡಾ ತಲುಪಿದರು. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಹಾರ್ದಿಕ್ ಪಾಂಡ್ಯ ಸ್ಥಳೀಯ ಆಟಗಾರನಾಗಿ ನಗರದ ಬೀದಿಗಳಲ್ಲಿ ಗೆಲುವಿನ ಉತ್ಸವ ನಡೆಸಿದರು. ಈ ವೇಳೆ ಹಾರ್ದಿಕ್‌ರನ್ನು ನೋಡಲು ರಸ್ತೆಯಲ್ಲಿ ಜನಸಾಗರವೇ ನೆರೆದಿತ್ತು. ಹಾರ್ದಿಕ್ ಅವರ ಮೆರವಣಿಗೆಯ ಸಮಯದಲ್ಲಿ ನಗರದ ಬೀದಿಗಳಲ್ಲಿ 3.5 ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಮೆರವಣಿಗೆಯನ್ನು 5.5 ಕಿಲೋಮೀಟರ್ ಉದ್ದಕ್ಕೂ ನಡೆಸಲಾಯಿತು.