Cricketer Died: ಪಂದ್ಯ ಆಡುವಾಗಲೇ ಕ್ರಿಕೆಟಗರೊಬ್ಬರು ಸಾವನ್ನಪ್ಪಿರುವ ಘಟನೆ ಘಟನೆ ಜೈಪುರದಲ್ಲಿ ನಡೆದಿದೆ. ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಹಠಾತ್ ಆಗಿ ಕುಸಿದು ಬಿದ್ದ ಆಟಗಾರ ಕೊನೆಯುಸಿರೆಳೆದಿದ್ದಾರೆ.
ಮಾಜಿ ರಣಜಿ ಆಟಗಾರ ಆಗಿದ್ದ ಯಶ್ ಗೌರ್ ಜೈಪುರದ ಕಲ್ವಾಡ್ ರಸ್ತೆಯ ವಿನಾಯಕ್ ಕ್ರಿಕೆಟ್ ಮೈದಾನದಲ್ಲಿ ಕೊನೆಯುಸಿರೆಳೆದಿದ್ದಾರೆ. ವಾಸ್ತವವಾಗಿ, 58 ವರ್ಷದ ಯಶ್ ಅವರು ಜೈಪುರದ ವೆಟರನ್ಸ್ ಡಬಲ್ ವಿಕೆಟ್ ಟೂರ್ನಮೆಂಟ್ನ ಪಂದ್ಯದಲ್ಲಿ ಭಾಗಿಯಾಗಿದ್ದರು. ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಅವರು ಕೂಡಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಅಲ್ಲಿದ್ದ ಸಹಾ ಆಟಗಾರರ ಪ್ರಕಾರ, ಯಶ್ ಗೌರ್ ಅವರು ಮೈದಾನದಲ್ಲಿ ಸ್ಕ್ವೇರ್ ಲೆಗ್ನತ್ತ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ನಂತರೆ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣೆವೇ ಅವರನ್ನು ಆಸ್ಪತ್ರಗೆ ಸಾಗಿಸಿಲಾಯಿತು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಹೇಳಿದ್ದಾರೆ.
ಮಾಜಿ ರಣಜಿ ಪ್ಲೇಯರ್:ಯಶ್ ಗೌರ್ 80ರ ದಶಕದಲ್ಲಿ ರಾಜಸ್ಥಾನ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಆಡುವ ಹನ್ನೊಂದರ ತಂಡದಲ್ಲಿ ಸ್ಥಾನಸಿಕ್ಕಿರಲಿಲ್ಲ. ಆದರೂ ಅವರ ಕ್ರಿಕೆಟ್ ಮೇಲಿನ ಕ್ರೇಜ್ ಮಾತ್ರ ಕಡಿಮೆಯಾಗಿರಲಿಲ್ಲ. ಸ್ಥಳೀಯ ಕ್ರಿಕೆಟ್ನಲ್ಲಿ ಭಾಗವಹಿಸಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು. ಆದರೇ ಅವರ ಹಠಾತ್ ನಿಧನದಿಂದಾಗಿ ಜೈಪುರ ಕ್ರಿಕೆಟ್ ಲೋಕದಲ್ಲಿ ಶೋಕ ಆವರಿಸಿದೆ.