Virendra Sehwag: ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸ್ಪೋಟಕ ಬ್ಯಾಟಿಂಗ್ನಿಂದಲೇ ಚಿರಪರಿಚಿತರು. ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ವಿಶ್ವದರ್ಜೆಯ ಬೌಲರ್‌ಗಳಿಗೆ ಕಾಡುತ್ತಿದ್ದ ಇವರು ಕ್ರೀಸ್ನಲ್ಲಿರೊ ತನಕ ಎದುರಾಳಿ ಬೌಲರ್‌ಗಳು ಬೌಲಿಂಗ್ ಮಾಡಲು ನಡುಗುತ್ತಿದ್ದರು. ಸದ್ಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ವೀರೂ ಕಾಮೆಂಟೇಟರ್ ಮತ್ತು ಇತರ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಸೆಹ್ವಾಗ್ ಅವರ ಕುರಿತಾದ ಆಘಾತಕಾರಿ ವಿಷಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಹೌದು, ಸೆಹ್ವಾಗ್ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಬಾರೀ ಸದ್ದು ಮಾಡುತ್ತಿದ್ದು ತಮ್ಮ ಪತ್ನಿ ಆರತಿ ಅಹ್ಲಾವತ್ ಅವರೊಂದಿಗಿನ 20 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆಂಬ ಮಾತುಗಳು ಹರಿದಾಡುತ್ತಿವೆ. ಇನ್ ಸ್ಟಾಗ್ರಾಮ್‌ನಲ್ಲೂ ಇಬ್ಬರು ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದು ವಿಚ್ಚೇದನ ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ.
ಸೆಹ್ವಾಗ್ ಮತ್ತು ಆರತಿ ಅಹ್ಲಾವತ್ ಡಿಸೆಂಬರ್ 2004ರಲ್ಲಿ ವಿವಾಹವಾಗಿದ್ದರು. ಮಾಜಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ಅದ್ಧೂರಿಯಾಗಿ ಇಬ್ಬರ ವಿವಾಹ ಜರುಗಿತ್ತು. ಇವರಿಗೆ ಆರ್ಯವೀರ್ (2007) ಮತ್ತು ವೇದಾಂತ್ (2010) ಎಂಬ ಇಬ್ಬರು ಮಕ್ಕಳಿದಿದ್ದಾರೆ. ಈ ಇಬ್ಬರೂ ತಮ್ಮ ತಂದೆಯ ಹಾದಿಯನ್ನು ಅನುಸರಿಸಿ ಭವಿಷ್ಯದ ದೃಷ್ಟಿಯಿಂದ ಕ್ರಿಕೆಟ್ ಅನ್ನು ಆರಿಸಿಕೊಂಡಿದ್ದಾರೆ.