ಪ್ಯಾರಿಸ್(ಫ್ರಾನ್ಸ್):ಗ್ರೇಟ್ ಬ್ರಿಟನ್‌ನ ಹೆನ್ರಿ ಫೀಲ್ಡ್‌ಮ್ಯಾನ್ ಅವರು ರೋಯಿಂಗ್ನ ಕಾಕ್ಸ್‌ವೈನ್ ( ರೋಯಿಂಗ್ ಮಾರ್ಗದರ್ಶಕ) ಆಗಿ ಪುರುಷ ಮತ್ತು ಮಹಿಳೆ ಎರಡೂ ವಿಭಾಗಗಳಲ್ಲಿ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಗ್ರೇಟ್ ಬ್ರಿಟನ್ ಮಹಿಳೆ ಮತ್ತು ಪುರುಷರ 8 ಸದಸ್ಯರ ರೋಯಿಂಗ್ ತಂಡದ ಮಾರ್ಗದರ್ಶಕರಾಗಿದ್ದರು. ಹೆನ್ರಿ ಮಾರ್ಗದರ್ಶನದಲ್ಲಿ ಎರಡೂ ತಂಡಗಳು ಕಂಚು ಪದಕ ಗೆದ್ದುಕೊಂಡಿವೆ.
ಫೀಲ್ಡ್‌ಮ್ಯಾನ್ 3 ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು ಎಂಬುದು ಗಮನಾರ್ಹ. 2016ರ ಒಲಿಂಪಿಕ್ಸ್ ನಂತರ ವರ್ಲ್ಡ್ ರೋಯಿಂಗ್ ನಿಯಮ ಬದಲಾವಣೆ ಬ್ರಿಟಿಷ್ ಅಥ್ಲೀಟ್‌ಗೆ ಈ ದಾಖಲೆ ಬರೆಯಲು ಸಾಧ್ಯವಾಗಿಸಿದೆ. ಹೊಸ ನಿಯಮದ ಪ್ರಕಾರ, ರೋಯಿಂಗ್ ಮಾರ್ಗದರ್ಶಕ ಮಹಿಳಾ ಮತ್ತು ಪುರುಷ ಸ್ಪರ್ಧೆಯ ಎರಡೂ ತಂಡಗಳಲ್ಲಿ ಭಾಗವಹಿಸಬಹುದು.