ಹೈದರಾಬಾದ್:ಟೆಸ್ಟ್ ಕ್ರಿಕೆಟ್ಗೆ ತನ್ನದೇ ಆದ ಇತಿಹಾಸವಿದೆ. ದೀರ್ಘ ಸ್ವರೂಪದ ಕ್ರಿಕೆಟ್ ಆದ ಇದರಲ್ಲಿ ದಾಖಲೆಗಳು ನಿರ್ಮಾಣವಾಗುತ್ತಿರು ಮತ್ತು ಮುರಿಯಲ್ಪಡುತ್ತವೆ. ಆದ್ರೆ ಕೆಲ ಅಪರೂಪದ ದಾಖಲೆಗಳು ಇಂದಿಗೂ ಯಾರಿಂದಲು ಮುರಿಯಲು ಸಾಧ್ಯವಾಗಿಲ್ಲ. ಇದರಲ್ಲಿ ಅತ್ಯಂತ ವೇಗದ ಮತ್ತು ನಿಧಾನಗತಿಯಲ್ಲಿ ಶತಕ-ಅರ್ಧಶತಕ ಸಿಡಿಸಿರುವುದು ಸೇರಿದೆ.
ಹೌದು, ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ ಶತಕ, ಅರ್ಧಶತಕ ಸಿಡಿಸಿ ಬ್ಯಾಟರ್ಗಳು ದಾಖಲೆ ಬರೆದಿದ್ದರೇ, ಮತ್ತಿಬ್ಬರು ಅತ್ಯಂತ ನಿಧಾನಗತಿಯಲ್ಲಿ ಶತಕ-ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಹಾಗಾದ್ರೆ ಅವರು ಯಾರು ಎಂದು ಇದೀಗ ತಿಳಿಯಿರಿ.
ವೇಗದ ಶತಕ:ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿರುವ ಬ್ಯಾಟರ್ ಎಂಬ ದಾಖಲೆ ನ್ಯೂಜಿಲೆಂಡ್ನ ಸ್ಪೋಟಕ ಆಟಗಾರ ಬ್ರೆಂಡಮ್ ಮೆಕ್ಕಲಮ್ ಹೆಸರಲ್ಲಿದೆ. 2015-16ರಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಮೆಕ್ಕಲಂ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ವೇಗದ ಶತಕವಾಗಿದೆ. ಈ ಪಟ್ಟಿಯಲ್ಲಿ ವಿವಿ ರಿಚರ್ಡ್ಸನ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 56 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಉಳಿದಂತೆ ಮಿಸ್ಬಾ ಉಲ್ ಹಖ್ (56), ಗಿಲ್ಕ್ರಿಸ್ಟ್ (57) ಕ್ರಮವಾಗಿ ನಂತರ ಸ್ಥಾನದಲ್ಲಿದ್ದಾರೆ.
ವೇಗದ ಅರ್ಧಶತಕ:ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ್ದು ಪಾಕಿಸ್ತಾನದ ಮಿಸ್ಭಾ-ಉಲ್-ಹಖ್. ಇವರು ಆಸ್ಟ್ರೇಲಿಯಾ ವಿರುದ್ದ 2014ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 21 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ್ದರು. ಉಳಿದಂತೆ ಡೆವಿಡ್ ವಾರ್ನರ್ (23), ಜಾಕ್ ಖಲ್ಲಿಸ್ (24), ಬೆನ್ ಸ್ಟೋಕ್ಸ್ (24) ಕ್ರಮವಾಗಿ ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.