ಕರ್ನಾಟಕ

karnataka

ETV Bharat / sports

ಚೊಚ್ಚಲ ಟೆಸ್ಟ್​ನಲ್ಲೇ ವಿಧ್ವಂಸಕ ಪ್ರದರ್ಶನ: RCB ಬ್ಯಾಟರ್​ನ ಸ್ಫೋಟಕ ಆಟಕ್ಕೆ ಬೆಚ್ಚಿಬಿದ್ದ ನ್ಯೂಜಿಲೆಂಡ್​! - ENG VS NZ 1ST TEST

ನ್ಯೂಜಿಲೆಂಡ್​ ಮತ್ತು ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಟೆಸ್ಟ್​ನಲ್ಲಿ ಗೆಲುವು ಸಾಧಿಸಿದ ಆಂಗ್ಲರು ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

JACOB BETHELL  ENGLAND NEW ZELANAD TEST SERIES  RCB BATTER JACOB BETHELL  JACOB BETHELL TEST RECORD
ಇಂಗ್ಲೆಂಡ್​ ಬ್ಯಾಟರ್​ (AP)

By ETV Bharat Sports Team

Published : Dec 1, 2024, 10:40 AM IST

ENG vs NZ 1st Test: ನ್ಯೂಜಿಲೆಂಡ್​ (New Zealanad) ಮತ್ತು ಇಂಗ್ಲೆಂಡ್​ (England) ನಡುವೆ ಟೆಸ್ಟ್​ ಸರಣಿ (Test Series) ನಡೆಯುತ್ತಿದ್ದು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಭರ್ಜರಿ ಗೆಲುವು ಸಾಧಿಸಿ ಮೇಲುಗೈ ಸಾಧಿಸಿದೆ. ಹ್ಯಾಗ್ಲಿ ಓವಲ್​ನಲ್ಲಿ ನಡೆದ ಈ ಪಂದ್ಯವನ್ನು ಇಂಗ್ಲೆಂಡ್​ ತಂಡ ಟಿ20 ಶೈಲಿಯಲ್ಲಿ ಗೆದ್ದುಕೊಂಡಿದೆ. ಕಿವೀಸ್​ ತಂಡ ನೀಡಿದ್ದ ಗುರಿಯನ್ನು ಕೇವಲ 12.4 ಓವರ್​ಗಳಲ್ಲಿ ತಲುಪಿ ಜಯಭೇರಿ ಬಾರಿಸಿದೆ.

ಪ್ರವಾಸಿ ನ್ಯೂಜಿಲೆಂಡ್​ ತಂಡವು ನಾಲ್ಕನೇ ದಿನದಾಟದಂದು ಕೇವಲ 12.4 ಓವರ್‌ಗಳಲ್ಲಿ 104 ರನ್​ಗಳನ್ನು ಕಲೆ ಹಾಕಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್​ 348ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 499 ರನ್ ಗಳಿಸಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ 171 ರನ್​ಗಳ ಇನ್ನಿಂಗ್ಸ್ ಆಡಿದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ತಂಡ 254 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಇದರಿಂದಾಗಿ ಇಂಗ್ಲೆಂಡ್​ಗೆ ಕೇವಲ 104 ರನ್‌ಗಳ ಗುರಿಯನ್ನು ಪಡೆದು ಬೇಸ್‌ಬಾಲ್‌ ರೀತಿಯಲ್ಲಿ ಬ್ಯಾಟ್​ಬೀಸಿ ಪಂದ್ಯದಲ್ಲಿ ಗೆಲುವು ಸಾಧಿಸಿತು.

ವಿಶ್ವದಾಖಲೆ ಬರೆದ RCBಯ ಯುವ ಆಟಗಾರ: ಎರಡನೇ ಇನ್ನಿಂಗ್ಸ್​ನಲ್ಲಿ RCB ಖರೀದಿಸಿದ ಯುವ ಬ್ಯಾಟರ್​ ಸ್ಫೋಟಕ ಪ್ರದರ್ಶನ ತೋರಿ ವಿಶ್ವದಾಖಲೆ ಬರೆದಿದ್ದಾರೆ. ಹೌದು, 21 ವರ್ಷದ ಯುವ ಬ್ಯಾಟರ್​​ ಜಾಕೋಬ್ ಬೆಥೆಲ್ ಕೇವಲ 37 ಎಸೆತಗಳಲ್ಲಿ ಅಜೇಯವಾಗಿ 50ರನ್ ಸಿಡಿಸಿದ್ದಾರೆ. ಇದರೊಂದಿಗೆ ದಾಖಲೆಯನ್ನು ಬರೆದಿದ್ದಾರೆ. ಪಾದಾರ್ಪಣೆ ಪಂದ್ಯದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್​ ಎನಿಸಿಕೊಂಡಿದ್ದಾರೆ. ಉಳಿದಂತೆ ಜೋ ರೂಟ್ 15 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.

10 ವಿಕೆಟ್​ ಪಡೆದ ಬೌಲರ್​:ಈ ಪಂದ್ಯದಲ್ಲಿ ಇಂಗ್ಲೆಂಡ್​ನ ಬೌಲರ್​ ಅತ್ಯುತ್ತಮ ಪ್ರದರ್ಶನ ತೋರಿ ಗಮನ ಸೆಳೆದರು. ಬ್ರೈಡನ್​ ಕಾರ್ಸೆ ಎರಡು ಇನ್ನಿಂಗ್ಸ್​ಗಳಿಂದ 10 ವಿಕೆಟ್​ ಉರುಳಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್​ ಪಡೆದರೆ ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಬಳಿಸಿದರು. ಇದರೊಂದಿಗೆ ಬ್ರೈಡನ್ ಕಾರ್ಸೆ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೇನ್​ ವಿಲಯಮ್ಸನ್​ ದಾಖಲೆ:ಮೊದಲ ಟೆಸ್ಟ್​ನಲ್ಲಿ ನ್ಯೂಜಿಲೆಂಡ್​ ಪರ ಕೇನ್​ ವಿಲಿಯಮ್ಸನ್​ (Kane Williamson) ದಾಖಲೆ ಬರೆದಿದ್ದಾರೆ. ಮೊದಲು ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿಯಮ್ಸನ್​ ತಂಡದ ಪರ ಹೈಸ್ಕೋರರ್​ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್​ನಲ್ಲಿ 93 ರನ್​, ಎರಡನೇ ಇನ್ನಿಂಗ್ಸ್​ನಲ್ಲಿ 61 ರನ್​ ಗಳಿಸಿದ ಇವರು ಟೆಸ್ಟ್​ನಲ್ಲಿ 9000 ರನ್​ ಪೂರೈಸಿದ ಬ್ಯಾಟರ್​ ಆಗಿ ತಂಡದ ಪರ ದಾಖಲೆ ಬರೆದರು. ನ್ಯೂಜಿಲೆಂಡ್​ ಪರ ಟೆಸ್ಟ್​ನಲ್ಲಿ ಹೆಚ್ಚು ರನ್​ ಗಳಿಸಿದ ಆಟಗಾರರಲ್ಲಿ ವಿಲಿಯಮ್ಸ್​ನ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:WTC ಫೈನಲ್​ ರೇಸ್​ಗೆ ಮತ್ತೊಂದು ತಂಡ ಎಂಟ್ರಿ: 2ನೇ ಸ್ಥಾನದಿಂದ ಕುಸಿದ ಆಸ್ಟ್ರೇಲಿಯಾ; ಭಾರತಕ್ಕೂ ಸಂಕಷ್ಟ!

ABOUT THE AUTHOR

...view details