ಜಾರ್ಜ್‌ಟೌನ್ (ಗಯಾನಾ): ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿಯನ್ನು ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ ಸ್ಟೈಲಿಶ್ ಬ್ಯಾಟ್ಸ್‌ಮನ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಟಿ20 ವಿಶ್ವಕಪ್‌ಗೂ ಮುನ್ನ ಐಪಿಎಲ್‌ನಲ್ಲಿ ಗರಿಷ್ಠ 741 ರನ್ ಗಳಿಸಿದ್ದ ಕೊಹ್ಲಿ, ಈ ಟೂರ್ನಿಯಲ್ಲಿ ಇದುವರೆಗೆ ಏಳು ಇನ್ನಿಂಗ್ಸ್‌ಗಳಲ್ಲಿ 75 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 68 ರನ್‌ಗಳ ಜಯ ಸಾಧಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದ್ರಾವಿಡ್, 'ವಿರಾಟ್ ಸ್ವಲ್ಪ ಅಪಾಯಕಾರಿ ಕ್ರಿಕೆಟ್ ಆಡಿದಾಗಲೆಲ್ಲಾ ಅವರು ಕೆಲವು ಸಂದರ್ಭಗಳಲ್ಲಿ ಯಶಸ್ಸನ್ನು ಪಡೆಯುವುದಿಲ್ಲ ಎಂಬುದನ್ನು ನೀವು ನೋಡಿರಬೇಕು. ಇಂಗ್ಲೆಂಡ್ ವಿರುದ್ಧ ಅವರು ನಿಜವಾಗಿಯೂ ಉತ್ತಮ ಸಿಕ್ಸರ್ ಬಾರಿಸಿದರು. ಆದರೆ, ಅದೃಷ್ಟ ಅವರ ಕಡೆ ಇರಲಿಲ್ಲ. ಆದರೆ ವಿರಾಟ್ ಆಡುವ ರೀತಿ ನನಗೆ ಇಷ್ಟ ಎಂದು ದ್ರಾವಿಡ್ ಹೇಳಿದರು.
ಇದಕ್ಕೆ ಯಾವುದೇ ರೀತಿಯ ಇತರ ಹೇಳಿಕೆಯನ್ನು ಸೇರಿಸಲು ನಾನು ಬಯಸುವುದಿಲ್ಲ. ಆದರೆ ಅವರು ಶೀಘ್ರದಲ್ಲೇ ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಎಂಬ ಭರವಸೆ ನನಗಿದೆ. ಅವರ ವರ್ತನೆ ಮತ್ತು ಸಮರ್ಪಣೆ ನನಗೆ ಇಷ್ಟ ಎಂದು ದ್ರಾವಿಡ್ ಹೇಳಿದರು. ನಾಯಕ ರೋಹಿತ್ ಕೂಡ ಕೊಹ್ಲಿ ಫೈನಲ್‌ನಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ರೋಹಿತ್ ಮಾತನಾಡಿ, ಅವರೊಬ್ಬ ಶ್ರೇಷ್ಠ ಆಟಗಾರ. ಅವರು ಎಂತಹ ನುರಿತ ಆಟಗಾರ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ದೊಡ್ಡ ಪಂದ್ಯಗಳಲ್ಲಿ ಅವರ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. 15 ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವಾಗ ಫಾರ್ಮ್ ಸಮಸ್ಯೆಯಾಗುವುದಿಲ್ಲ. ಅವರ ಉದ್ದೇಶಗಳು ಸ್ಪಷ್ಟವಾಗಿವೆ. ಬಹುಶಃ ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಫೈನಲ್‌ಗೆ ಉಳಿಸಿಕೊಂಡಂತೆ ಕಾಣುತ್ತದೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದರು.