ಬೆಂಗಳೂರು:ಕ್ರಿಕೆಟ್ ಇದು ಕೇವಲ ಕ್ರೀಡೆ ಮಾತ್ರ ಅಲ್ಲ, ನೂರಾರು ಕೋಟಿ ರೂ. ವಹಿವಾಟಿನ ಉದ್ಯಮ ಕೂಡಾ. ಇಂಥ ಕ್ರಿಕೆಟ್ ಪಂದ್ಯಗಳಿಗೆ ಭದ್ರತೆಗಾಗಿ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.
ಬೆಂಗಳೂರಿನಲ್ಲಿ ಆಯೋಜನೆಯಾಗುವ ಚುಟುಕು ಕ್ರಿಕೆಟ್, ಏಕದಿನ, ಟೆಸ್ಟ್ ಹೀಗೆ ಪ್ರತಿಯೊಂದು ಮಾದರಿಯ ಪಂದ್ಯಕ್ಕೂ ಪ್ರತ್ಯೇಕ ಶುಲ್ಕವಿದ್ದು, ಪೊಲೀಸ್ ಸಿಬ್ಬಂದಿಯ ಭದ್ರತೆಗೆ ಪ್ರತಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಾವತಿಸುವ ಹಣದ ಮಾಹಿತಿ ಇಲ್ಲಿದೆ.
1. ಭದ್ರತೆಗೆ ಪಾವತಿಯಾಗುವ ವೆಚ್ಚ
- ಟೆಸ್ಟ್ ಪಂದ್ಯ - ದಿನಕ್ಕೆ 5 ಲಕ್ಷದಂತೆ 5 ದಿನಗಳಿಗೆ 25 ಲಕ್ಷ
- ಅಂತಾರಾಷ್ಟ್ರೀಯ ಏಕದಿನ ಹಾಗೂ T-20 ಪಂದ್ಯ - 20 ಲಕ್ಷ
- ಐಪಿಎಲ್ ಪಂದ್ಯ - 25 ಲಕ್ಷ
- ಒಂದು ದಿನಕ್ಕೆ ಖಾಸಗಿ ವ್ಯಕ್ತಿಗೆ ಎಕ್ಸ್ ಶ್ರೇಣಿ ಭದ್ರತೆಗೆ - 5,000/-
- ಖಾಸಗಿ ವ್ಯಕ್ತಿ ವೈ ಶ್ರೇಣಿ - 25,000/-
- ಖಾಸಗಿ ವ್ಯಕ್ತಿ ಜೆಡ್ ಶ್ರೇಣಿ - 50,000/-
- ಆಟಗಾರರ ಎಸ್ಕಾರ್ಟ್ ಡ್ಯೂಟಿಗೆ ಒಂದು ತಂಡಕ್ಕೆ - 10,000/-
- ವಸೂಲಿಯಾಗುವ ಹಣದಲ್ಲಿ ಶೇ50ರಷ್ಟು ಅಥವಾ 10 ಕೋಟಿ (ಎರಡರಲ್ಲಿ ಕಡಿಮೆ ಪ್ರಮಾಣ) ಹಣವನ್ನ ನಗರ ಪೊಲೀಸ್ ಕಲ್ಯಾಣನಿಧಿಗೆ ಸರ್ಕಾರದ ವತಿಯಿಂದ ಸಲ್ಲಿಕೆಯಾಗುತ್ತದೆ.
2. ಅಧಿಕಾರಿ ಹಾಗೂ ಸಿಬ್ಬಂದಿಗೆ ದಿನದ 8 ಗಂಟೆ ಭದ್ರತಾ ಕರ್ತವ್ಯಕ್ಕೆ ನಿಗದಿಯಾಗಿರುವ ವೆಚ್ಚ
- ಎಸಿಪಿ - 7784/-
- ಇನ್ಸ್‌ಪೆಕ್ಟರ್ - 6641/-
- ಪಿಎಸ್ಐ - 5841/-
- ಎಎಸ್ಐ - 4802/-
- ಹೆಡ್ ಕಾನ್ಸ್‌ಟೇಬಲ್ - 4418/-
- ಕಾನ್ಸ್‌ಟೇಬಲ್ - 4001/-
ಓದಿ:ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy