ಕರ್ನಾಟಕ

karnataka

ETV Bharat / sports

IPL Auction: ಐಪಿಎಲ್​ ಮೆಗಾ ಹರಾಜಿನಲ್ಲಿ ಕನ್ನಡಿಗನಿಗೆ ಭಾರೀ ನಿರಾಸೆ: Unsold ಆದ ಸ್ಟಾರ್​ ಆಟಗಾರ! - DEVDUTT PADIKKAL

ಐಪಿಎಲ್​ ಮೆಗಾ ಹರಾಜಿನಲ್ಲಿ ಸ್ಟಾರ್​ ಆಟಗಾರನಿಗೆ ಭಾರೀ ನಿರಾಸೆ ಮೂಡಿದ್ದು ಯಾವುದೇ ತಂಡಗಳು ಖರೀದಿ ಮಾಡಿಲ್ಲ.

IPL Mega Auction 2025
IPL Mega Auction 2025 (IANS)

By ETV Bharat Sports Team

Published : Nov 24, 2024, 6:55 PM IST

Updated : Nov 24, 2024, 7:26 PM IST

IPL Mega Auction 2025: ಅಬುಧಾಬಿಯ ಜೆಡ್ಡಾದಲ್ಲಿ ಇಂದು ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಬಾರಿ ಒಟ್ಟು ಒಟ್ಟು 1577 ಆಟಗಾರರು ಹರಾಜಿಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. aಂತಿಮಾವಗಿ 577 ಆಟಗಾರರ ಹೆಸರುಗಳು ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಇವರಲ್ಲಿ 367 ಭಾರತೀಯರು ಮತ್ತು 210 ವಿದೇಶಿ ಆಟಗಾರರು ಸೇರಿದ್ದಾರೆ. ಈ ಬಾರಿ ಐಪಿಎಲ್​ನಲ್ಲಿ ಹೆಚ್ಚಿನ ಸ್ಟಾರ್​ ಆಟಗರಾರರು ಕಣದಲ್ಲಿದ್ದು ಭಾರೀ ನಿರೀಕ್ಷೆಗಳೊಂದಿಗೆ ಅದೃಷ್ಟದ ಪರೀಕ್ಷೆಗಿಳಿದಿದ್ದಾರೆ. ಈಗಾಗಲೇ ನಡೆಯುತ್ತಿರುವ ಹರಾಜಿನಲ್ಲಿ ರಿಷಭ್​ ಪಂತ್​ ಮತ್ತು ಶ್ರೇಯಸ್​ ಅಯ್ಯರ್​ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

8 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಆಡಿದ್ದ ರಿಷಭ್​ ಪಂತ್​ ಈ ಬಾರಿ ಹೊಸ ಫ್ರಾಂಚೈಸಿಗಾಗಿ ಮೆಗಾ ಹರಾಜಿಗೆ ಎಂಟ್ರಿ ಕೊಟ್ಟಿದ್ದರು. ನಿರೀಕ್ಷೆಯಂತೆ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಜಿದ್ದಾಜಿದ್ದಿನ ಹರಾಜಿನಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಬರೋಬ್ಬರಿ 27 ಕೋಟಿಗೆ ಮಣೆಹಾಕಿ ತಂಡಕ್ಕೆ ಸೇರಿಸಿಕೊಂಡಿತು. ಇದರೊಂದಿಗೆ ಮೊದಲ ದಿನದ ಹರಾಜಿನಲ್ಲಿ ಅತಿ ಹೆಚ್ಚು ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಶ್ರೇಯಸ್​ ಅಯ್ಯರ್​ ಕೂಡ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾಗಿದ್ದರು. ಅವರು ಒಟ್ಟು 26.75 ಕೋಟಿಗೆ ಪಂಜಾಬ್​ ಕಿಂಗ್ಸ್​ ತಂಡ ಖರೀದಿಸಿದೆ. ಏತನ್ಮದೇ ಕನ್ನಡಿಗ ಆಟಗಾರನೊಬ್ಬ ಅನ್​ಸೋಲ್ಡ್​ ಆಗಿದ್ದಾರೆ.

ಹೌದು, ಮೊದಲ ದಿನ ನಡೆದ ಐಪಿಎಲ್​ ಮೆಗಾ ಹರಾಜಿನಲ್ಲಿ ಕನ್ನಡಿಗೆ ದೇವದತ್​ ಪಡಕ್ಕಲ್​ ಅವರನ್ನು ಯಾವುದೇ ತಂಡಗಳು ಹರಾಜಿನಲ್ಲಿ ಖರೀದಿಸಲು ಮುಂದೆ ಬಾರಲಿಲ್ಲ. ಇದರಿಂದಾಗಿ ಅವರು ಮೊದಲ ದಿನ ಅನ್​ಸೋಲ್ಡ್​ ಆಗಿದ್ದಾರೆ. ಪಡಿಕ್ಕಲ್ ಮೂಲ ಬೆಲೆ 2 ಕೋಟಿ ರೂ. ಆಗಿದ್ದರು ಯಾವುದೇ ಫ್ರಾಂಚೈಸಿಗಳು ಖರೀದಿಗೆ ಮುಂದೆ ಬರಲಿಲ್ಲ. ಕಳೆದ ಋತುವಿನಲ್ಲಿ ಪಡಿಕ್ಕಲ್​ LSG ತಂಡವನ್ನು ಪ್ರತಿನಿಧಿಸಿದ್ದರು. ಈ ವೇಳೆ ಅವರು 7 ಪಂದ್ಯಗಳಲ್ಲಿ ಕೇವಲ 38 ರನ್ ಗಳಿಸಿದ್ದರು. ಕಳೆದ ಸೀಸನ್‌ನಲ್ಲಿ ಲಕ್ನೋ 7.75 ಕೋಟಿ ರೂಪಾಯಿ ನೀಡಿ ಪಡಿಕ್ಕಲ್​ ಅವರನ್ನು ತಂಡಕ್ಕೆ ಸೇರಿಕೊಂಡಿ ತ್ತು.

ಇದರೊಂದಿಗೆ ಆಸ್ಟ್ರೇಲಿಯಾದ ಸ್ಟಾರ್​ ಆಟಗಾರ ಡೇವಿಡ್​ ವಾರ್ನರ್​ ಕೂಡ ಅನ್​ಸೋಲ್ಡ್​ ಆಗಿದ್ದಾರೆ. ಇದರೊಂದಿಗೆ ಮೊದಲ ದಿನ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಇಬ್ಬರು ಅನ್​ಸೋಲ್ಡ್​ ಆಗಿದ್ದಾರೆ.

ಐಪಿಎಲ್​ ದಾಖಲೆ:ಇದುವರೆಗೂ 64 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 1559 ರನ್​ ಗಳಿಸಿದ್ದಾರೆ. ಇದರಲ್ಲಿ 1 ಶತಕ 9 ಅರ್ಧಶತಕ ಸೇರಿವೆ. ಇವರು ಹೈಸ್ಕೋರ್​ 101 ರನ್​ ಆಗಿದೆ.

ಇದನ್ನೂ ಓದಿ:ಮತ್ತೆ ಹುಸಿಯಾಯ್ತು RCB ಅಭಿಮಾನಿಗಳ ನಿರೀಕ್ಷೆ: ಡೆಲ್ಲಿ ಸೇರಿದ ಕನ್ನಡಿಗ KL​ ರಾಹುಲ್

Last Updated : Nov 24, 2024, 7:26 PM IST

ABOUT THE AUTHOR

...view details