IPL Mega Auction KL Rahul:ಈ ಬಾರಿ ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದ RCB ಫ್ರಾಂಚೈಸಿ ಮೊದಲ ದಿನವೇ ಅಭಿಮಾನಗಳಿಗೆ ನಿರಾಸೆ ಮೂಡಿಸಿದೆ. ಭಾನವಾರ (ಇಂದು) ಅಬುಧಾಬಿಯ ಜೆಡ್ಡಾದಲ್ಲಿ ನಡೆದ ಮೊದಲ ದಿನದ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿಗೆ ಖರೀದಿಸಿತು.
ಕೆಎಲ್ ರಾಹುಲ್ರನ್ನು ಈ ಬಾರಿ ಆರ್ಸಿಬಿ ಖರೀದಿಸುತ್ತದೆ ಎಂದು ಕನ್ನಡಿಗರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಹರಾಜು ಪ್ರಕ್ರಿಯೆಯ ಒಂದು ಹಂತದಲ್ಲಿ ಆರ್ಸಿಬಿ ಕೂಡ ರಾಹುಲ್ ಮೇಲೆ ಬಿಡ್ಡಿಂಗ್ ಮಾಡಿತು. ಆದರೇ ಉಳಿದ ಫ್ರಾಂಚೈಸಿಗಳು ಪೈಪೋಟಿ ನೀಡಿದ್ದರಿಂದ ಖರೀದಿಸಲು ಹಿಂದೇಟು ಹಾಕಿತು. ಅಂತಿಮವಾಗಿ ಕನ್ನಡಿಗ ರಾಹುಲ್ ಡೆಲ್ಲಿ ಪಾಲಾದರು. ಈ ಹಿಂದೆ ಲಕ್ನೋ ಸೂಪರ್ ಜೈಂಟ್ಸ್ ಪ್ರತಿನಿಧಿಸಿದ್ದ ರಾಹುಲ್ ಕೆಲಕಾಲ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಆದರೆ ಈ ಬಾರಿ ಲಕ್ನೋ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಆಸಕ್ತಿ ತೋರಿದ್ದರು ರಾಹುಲ್ ನಿರಾಕರಿಸಿ ಹರಾಜಿಗೆ ಎಂಟ್ರಿ ಕೊಟ್ಟಿದ್ದಾರೆ.
ಕಳೆದ ಸೀಸನ್ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಲಕ್ನೋ ಹೀನಾಯವಾಗಿ ಸೋಲನ್ನು ಕಂಡಿತ್ತು. ಈ ವೇಳೆ ಲಕ್ನೋ ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿಯೇ ರಾಹುಲ್ ವಿರುದ್ಧ ಕೋಪ ಹೊರಹಾಕಿದ್ದರು. ಈ ಘಟನೆಯಿಂದಾಗಿ ಗೋಯೆಂಕಾ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು. ಈ ಘಟನೆ ಬಳಿಕ ರಾಹುಲ್ ಲಕ್ನೋ ಫ್ರಾಂಚೈಸಿಯಿಂದ ದೂರವಿರಲು ನಿರ್ಧರಿಸಿದ್ದರು ಎಂದು ವರದಿಗಳಾಗಿತ್ತು. ಅದಾಗ್ಯೂ ರಾಹುಲ್ ಅವರು ಈ ಬಾರಿ ಹೊಸ ಫ್ರಾಂಚೈಸಿ ಪರ ಆಡಲು ಬಯಸಿದ್ದು ನನಗೆ ಆಟವಾಡಲು ತಂಡದಲ್ಲಿ ಸ್ವಾತಂತ್ರ್ಯ ಬೇಕು ಎಂದು ತಿಳಿಸಿದ್ದರು.