ಹೈದರಾಬಾದ್: ಕ್ರಿಕೆಟ್ನಲ್ಲಿ ದಾಖಲೆಗಳು ನಿರ್ಮಿಸುವುದು ಮತ್ತು ಮುರಿಯುವುದು ಸಾಮಾನ್ಯ ಸಂಗತಿ ಆಗಿದೆ. ಆದ್ರೆ ಕೆಲವೊಮ್ಮೆ ನಿರ್ಮಾಣಗೊಂಡ ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ. ಇದರಲ್ಲೊಂದು ಈ ಐವರು ಕ್ರಿಕೆಟರ್ಗಳು ಇದುವರೆಗೆ ಒಂದೇ ಒಂದು ಶತಕ ಸಿಡಿಸದೇ ಕ್ರಿಕೆಟ್ನಲ್ಲಿ ಹೆಚ್ಚು ರನ್ಗಳನ್ನು ಕಲೆಹಾಕಿ ದಾಖಲೆ ನಿರ್ಮಿಸಿದ್ದಾರೆ. ಆ ಆಟಗಾರರು ಯಾರೆಂದು ಈ ಸುದ್ದಿಯಲ್ಲಿ ತಿಳಿಯಿರಿ.
ಶೇನ್ ವಾರ್ನ್:ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದು ಬಾರಿಯೂ ಶತಕ ಸಿಡಿಸದೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಅವರು ಒಟ್ಟು 339 ಪಂದ್ಯಗಳಲ್ಲಿ 306 ಇನ್ನಿಂಗ್ಸ್ಗಳನ್ನು ಆಡಿ 4172 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ. ಜತೆಗೆ 145 ಟೆಸ್ಟ್ ಪಂದ್ಯಗಳನ್ನು ಆಡಿ 3154 ರನ್ ಗಳಿಸಿದ್ದಾರೆ. 2001ರಲ್ಲಿ ನ್ಯೂಜಿಲೆಂಡ್ ವಿರುದ್ಧ 99 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಅಲ್ಲದೇ 194 ಏಕದಿನ ಪಂದ್ಯಗಳಲ್ಲಿ 1018 ರನ್ ಗಳಿಸಿದ್ದಾರೆ.
ಕಾಲಿನ್ಸ್ ಒಬುಯಾ:ಕೀನ್ಯಾದ ಮಾಜಿ ಆಲ್ರೌಂಡರ್ ಕಾಲಿನ್ಸ್ ಒಬುಯಾ 179 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 159 ಇನ್ನಿಂಗ್ಸ್ಗಳನ್ನು ಆಡಿ 3786 ರನ್ ಗಳಿಸಿದ್ದಾರೆ. ಎರಡು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಆಡಿದ್ದರೂ ಒಂದೂ ಶತಕ ಸಹ ಸಿಡಿಸಲಾಗಿಲ್ಲ. ಆದರೆ 20 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಜತೆಗೆ 104 ಏಕದಿನ ಪಂದ್ಯಗಳಲ್ಲಿ 2044 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 98* ಆಗಿದೆ. 75 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿ 1742 ರನ್ ಗಳಿಸಿದ್ದಾರೆ. 96* ಈ ಸ್ವರೂಪದಲ್ಲಿ ದಾಖಲಾಗಿರುವ ಅತ್ಯುತ್ತಮ ಸ್ಕೋರ್ ಆಗಿದೆ.