ಪ್ಯಾರಿಸ್ (ಫ್ರಾನ್ಸ್):ಪ್ಯಾರಿಸ್ ಒಲಿಂಪಿಕ್ ಮಧುರ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ. ಚೀನಾದ ಬ್ಯಾಡ್ಮಿಂಟನ್ ಆಟಗಾರ ಲಿಯು ಯುಚೆನ್ ಶುಕ್ರವಾರ ಒಲಿಂಪಿಕ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದ ತನ್ನ ಗೆಳತಿ ಹುವಾಂಗ್ ಯಾಕಿಯಾಂಗ್ಗೆ ವೇದಿಕೆ ಮೇಲೆಯೇ ಪ್ರೇಮನಿವೇದನೆ ಮಾಡಿ ರಿಂಗ್ ತೊಡಿಸಿದ್ದಾರೆ. ಚಿನ್ನ ಗೆದ್ದ ಖುಷಿಯಲ್ಲಿದ್ದ ಷಟ್ಲರ್ಗೆ ಗೆಳೆಯನ ಲವ್ ಪ್ರಪೋಸಲ್ ಡಬಲ್ ಖುಷಿ ತಂದಿದೆ.
ಮಿಶ್ರ ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್‌ನಲ್ಲಿ ಹುವಾಂಗ್ ಯಾಕಿಯಾಂಗ್ ಅವರು ದಕ್ಷಿಣ ಕೊರಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸಿದ ನಂತರ ಝೆಂಗ್ ಸಿವೆಯ್ ಅವರೊಂದಿಗೆ ಚಿನ್ನದ ಪದಕ ಪಡೆದರು. ಇದಾದ ಕೆಲವೇ ಕ್ಷಣಗಳಲ್ಲಿ ಆಕೆಯ ಗೆಳೆಯ ಲಿಯು ಪೋಡಿಯಂಗೆ ಆಗಮಿಸಿ ನೆರೆದಿದ್ದ ಜನರ ಮುಂದೆಯೇ ಹೂಗುಚ್ಛ ನೀಡಿದ ಬಳಿಕ ಮಂಡಿಯೂರಿ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು. ಸಂತಸ ಮತ್ತು ಆಶ್ಚರ್ಯದಲ್ಲಿ ಹುವಾಂಗ್ ಇದಕ್ಕೆ ಒಪ್ಪಿಗೆ ಸೂಚಿಸಿದರು.