ಚೆನ್ನೈ(ತಮಿಳುನಾಡು): ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF)ನಲ್ಲಿ ದೇಶದ ಮೊದಲ ನೈಟ್ ಸ್ಟ್ರೀಟ್ ರೇಸ್ ಅನ್ನು ಆಗಸ್ಟ್ 30 ಮತ್ತು ಸೆಪ್ಟೆಂಬರ್ 1 ರಂದು ಚೆನ್ನೈನಲ್ಲಿ ಆಯೋಜಿಸಲಾಗಿದೆ. ಈ ಮೂಲಕ ಚೆನ್ನೈನ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್ನಲ್ಲಿ ನೈಟ್ ಸ್ಟ್ರೀಟ್ ರೇಸ್ ಉದ್ಘಾಟಿಸಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೂರು ದಿನಗಳಲ್ಲಿ ಕಾಲ ನಡೆಯುವ ರೋಮಾಂಚನಕಾರಿ ರೇಸ್ ಸ್ಪರ್ಧೆಯಲ್ಲಿ, 8 ತಂಡಗಳು ತಮ್ಮ ಹೈ - ಸ್ಪೀಡ್ ಕಾರುಗಳೊಂದಿ ಟ್ರ್ಯಾಕ್ಗೆ ಇಳಿಯಲಿವೆ. ಇದು ಅತ್ಯಂತ ಆಹ್ಲಾದಕರ ಮತ್ತು ಮಹತ್ವಾಕಾಂಕ್ಷೆಯ ಸೀಸನ್ ಆಗಲಿದೆ.
ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (ಆರ್ ಪಿಪಿಎಲ್) ಮತ್ತು ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (ಎಸ್ ಡಿಎಟಿ) ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಲಿವೆ. ಈ ಹಿಂದೆ ಈ ಕಾರ್ಯಕ್ರಮವನ್ನು ಕಳೆದ ವರ್ಷಾಂತ್ಯದಲ್ಲಿ ಯೋಜಿಸಲಾಗಿತ್ತು. ಆದರೆ, ಮೈಚಾಂಗ್ ಚಂಡಮಾರುತದಿಂದಾಗಿ ಕಾರ್ ರೇಸಿಂಗ್ ಫೆಸ್ಟಿವಲ್ ಮುಂದೂಡಲಾಗಿತ್ತು. ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಐಆರ್ಎಫ್ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೋಟಾರ್ ಸ್ಪೋರ್ಟ್ಸ್ ಅನ್ನು ಪ್ರೋತ್ಸಾಹಿಸಲು ಮತ್ತು ಅಭಿಮಾನಿ ಬಳಗವನ್ನು ತಮ್ಮತ್ತ ಸೆಳೆಯಲು ಶ್ರಮಿಸುತ್ತಿವೆ.
ಕಾರ್ ರೇಸ್ ಅಭಿಮಾನಿಗಳಿಗಾಗಿ ಐಆರ್ಎಫ್ ಎರಡು ಚಾಂಪಿಯನ್ಶಿಪ್ಗಳನ್ನು ಆಯೋಜಿಸುತ್ತಿದೆ. ಒಂದು ಇಂಡಿಯನ್ ರೇಸಿಂಗ್ ಲೀಗ್ (ಐಆರ್ಎಲ್). ಮತ್ತೊಂದು ಎಫ್ಐಎ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್ಶಿಪ್ (ಎಫ್ 4ಐಸಿ) ಆಗಿದೆ. ಆರ್ಪಿಪಿಎಲ್ ಮತ್ತು ತಮಿಳುನಾಡು ಸರ್ಕಾರ ಇಂದು ಚೆನ್ನೈನ ತಾಜ್ ಕೋರಮಂಡಲ್ನಲ್ಲಿ ಈ ರೇಸ್ ಸ್ಪರ್ಧೆಗಳನ್ನು ಘೋಷಿಸಿತು. ಈ ಸಮಾರಂಭದಲ್ಲಿ ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ. ಮೇಘನಾಥ ರೆಡ್ಡಿ ಮತ್ತು ಆರ್ಪಿಪಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ. ಮಾಜಿ ಫಾರ್ಮುಲಾ 1 ಚಾಲಕ ನರೇನ್ ಕಾರ್ತಿಕೇಯನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಅತುಲ್ಯ ಮಿಶ್ರಾ , ಎಸ್ಡಿಎಟಿ ಮತ್ತು ಎಫ್ಎಂಎಸ್ಸಿಐ ಅಧ್ಯಕ್ಷ ಅಕ್ಬರ್ ಇಬ್ರಾಹಿಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ದಕ್ಷಿಣ ಏಷ್ಯಾದ ಡೆಟ್ರಾಯಿಟ್ ಎಂದು ಕರೆಯಲ್ಪಡುವ ಚೆನ್ನೈ, ದೇಶದ ಮೋಟಾರ್ ಸ್ಪೋರ್ಟ್ಸ್ ಕೇಂದ್ರವಾಗಿದೆ. ಈ ಮಹಾನಗರವು ಇತರ ರೇಸ್ ಟ್ರ್ಯಾಕ್ಗಳನ್ನು ಹೊಂದಿದೆ ಮತ್ತು ಈ ಹಿಂದೆ ಅನೇಕ ರೇಸ್ ಈವೆಂಟ್ಗಳನ್ನು ನಡೆಸಿದ್ದರೂ, ಮುಂಬರುವ ನೈಟ್ ಸ್ಟ್ರೀಟ್ ರೇಸ್ ಮೋಟಾರ್ಸ್ಪೋರ್ಟ್ಸ್ ಶ್ರೀಮಂತ ಪರಂಪರೆಗೆ ಹೆಚ್ಚುವರಿ ವೈಭವ ನೀಡುತ್ತದೆ. 3.5 ಕಿ.ಮೀ ಉದ್ದದ ಚೆನ್ನೈ ಫಾರ್ಮುಲಾ ರೇಸಿಂಗ್ ಸರ್ಕ್ಯೂಟ್ ಅನ್ನು ಆರ್ಪಿಪಿಎಲ್, ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ (DAT) ಸಹಯೋಗದೊಂದಿಗೆ ಸಿದ್ಧಪಡಿಸಿದೆ. ಟ್ರ್ಯಾಕ್ ಐಲ್ಯಾಂಡ್ ಮೈದಾನದಲ್ಲಿ ರೇಸಿಂಗ್ ಪ್ರಾರಂಭವಾಗುತ್ತದೆ.