77 Runs In one over: ಕ್ರಿಕೆಟ್ ಲೋಕದಲ್ಲಿ ದಾಖಲೆಗಳನ್ನು ನಿರ್ಮಿಸುವುದು ಮತ್ತು ಮುರಿಯುವುದು ಸಾಮಾನ್ಯ. ಆದರೆ, ಊಹಿಸಲೂ ಸಾಧ್ಯವಾಗದ ಕೆಲ ಅಪರೂಪದ ದಾಖಲೆಗಳು ಕೂಡ ನಿರ್ಮಾಣಗೊಂಡಿವೆ. ಅವುಗಳಲ್ಲಿ ಒಂದು ಬೌಲರ್ ಒಬ್ಬ ಓವರ್ ಒಂದರಲ್ಲಿ 77 ರನ್ಗಳು ಬಿಟ್ಟುಕೊಟ್ಟಿರುವುದು. ಇದು ನಂಬಲು ಅಸಾಧ್ಯವೆನಿಸಿದರೂ ನಿಜ. ಹಾಗಾದರೆ ಬನ್ನಿ ಈ ದಾಖಲೆ ಯಾವಾಗ ನಿರ್ಮಾಣವಾಯಿತು. ಯಾವ ಬೌಲರ್ ಹೆಸರಲ್ಲಿದೆ ಈ ಕಳಪೆ ದಾಖಲೆ ಎಂದು ಇದೀಗ ತಿಳಿಯೋಣ.
ವಾಸ್ತವಾಗಿ, ಫೆಬ್ರವರಿ 20, 1990ರಂದು ನ್ಯೂಜಿಲೆಂಡ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ವೆಲ್ಲಿಂಗ್ಟನ್ಸ್ ಮತ್ತು ಕ್ಯಾಂಟರ್ಬರ್ರಿ ಮಧ್ಯ ಕ್ರೈಸ್ಟ್ ಚರ್ಚ್ನಲ್ಲಿ ವೆಲ್ಲಿಂಗ್ಟನ್ ಶೆಲ್ ಟ್ರೋಫಿ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ವೇಳೆ, ಕ್ಯಾಂಟರ್‌ಬರಿ ತಂಡಕ್ಕೆ ಪಂದ್ಯವನ್ನು ಗೆಲ್ಲಲು 2 ಓವರ್‌ಗಳಲ್ಲಿ 95 ರನ್‌ಗಳ ಅಗತ್ಯವಿತ್ತು. ವೆಲ್ಲಿಂಗ್ಟನ್ ಪರ ಬೌಲಿಂಗ್ ಮಾಡಿದ ಬರ್ಟ್ ವ್ಯಾನ್ಸ್ ಒಂದೇ ಓವರ್‌ನಲ್ಲಿ 22 ಬೌಲ್ಗಳನ್ನು ಎಸೆದಿದ್ದಲ್ಲದೇ 77 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ವೇಳೆ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಲೀ ಜರ್ಮನ್ ಈ ಓವರ್‌ನಲ್ಲಿ 70 ರನ್ ಸಿಡಿಸಿದ್ದರು. ಇದು ಕ್ರಿಕೆಟ್ ಚರಿತ್ರೆಯಲ್ಲೆ ಇದೂವರೆಗೂ ಬ್ಯಾಟ್ಸ್‌ಮನ್ ದಾಖಲಿಸಿದ ಅತ್ಯುತ್ತಮ ಸ್ಕೋರ್ ಆಗಿದೆ.
ಇದನ್ನೂ ಓದಿ:ಸೂಪರ್ ಓವರ್‌ನಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೆ ವಿಶ್ವದಾಖಲೆ ಬರೆದ ಬೌಲರ್ ಯಾರು ಗೊತ್ತಾ?