ಕರ್ನಾಟಕ

karnataka

ETV Bharat / sports

'ಡುಬ್ಕಿ ರೈಡ್' ಕಲಿತದ್ದು ಹೇಗೆ? ಈಟಿವಿ ಭಾರತ ಸಂದರ್ಶನದಲ್ಲಿ ಬೆಂಗಳೂರು ಬುಲ್ಸ್​ ನಾಯಕನ ವಿವರಣೆ ​ - PARDEEP NARWAL

ಬೆಂಗಳೂರು ಬುಲ್ಸ್​ ತಂಡದ ನಾಯಕ ಪರ್ದೀಪ್​ ನರ್ವಾಲ್​ ತಮ್ಮ ಡುಬ್ಕಿ ರೈಡ್​ ಕುರಿತು ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪರ್ದೀಪ್​ ನರ್ವಾಲ್​
ಪರ್ದೀಪ್​ ನರ್ವಾಲ್​ (IANS)

By ETV Bharat Sports Team

Published : Oct 22, 2024, 1:04 PM IST

ಹೈದರಾಬಾದ್:ಸ್ಟಾರ್ ರೈಡರ್, ಡುಬ್ಕಿ ಕಿಂಗ್, ರೈಡ್​ ಮಷಿನ್​ ಎಂದೇ ಖ್ಯಾತಿ ಪಡೆದಿರುವ ಪರ್ದೀಪ್​ ನರ್ವಾಲ್ ಅವರು ತಮ್ಮ ಡುಬ್ಕಿರೈಡ್​ ಸ್ಕಿಲ್​ ಬಗ್ಗೆ ಈಟಿವಿ ಭಾರತ ಜೊತೆ ನಡೆದ ಸಂವಾದದಲ್ಲಿ ಮಾತನಾಡಿದ್ದಾರೆ. ಅಲ್ಲದೆ ಕಬಡ್ಡಿಯ ಅತ್ಯಂತ ಅಪಾಯಕಾರಿ ನಡೆಯಾದ ‘ಡಿಪ್ಪಿಂಗ್’ ಕಲೆಯನ್ನು ಯಾರಿಂದ ಕಲಿತಿದ್ದಾರೆ ಎಂಬುದನ್ನು ಸಹ ಅವರು ಬಹಿರಂಗಪಡಿಸಿದ್ದಾರೆ.

ಪಿಕೆಎಲ್​ನಲ್ಲಿ ಅತಿ ಹೆಚ್ಚು ರೈಡ್​ ಅಂಕ; ಪಿಕೆಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರೈಡ್ ಅಂಕಗಳನ್ನು (1,690) ಗಳಿಸಿದ ಸ್ಟಾರ್ ರೈಡರ್ ಪರ್ದೀಪ್​ ನರ್ವಾಲ್, ಸೀಸನ್ 2ರಲ್ಲಿ ಬೆಂಗಳೂರು ಬುಲ್ಸ್‌ನೊಂದಿಗೆ ಪಿಕೆಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಮತ್ತೆ ನಾಯಕನಾಗಿ ಈ ತಂಡಕ್ಕೆ ಮರಳಿದ್ದಾರೆ. ಈ ಬಗ್ಗೆ ಮಾತನಾಡಿದ ನರ್ವಾಲ್, ಬೆಂಗಳೂರು ತಂಡಕ್ಕೆ ಮರಳಿರುವುದು ಸಂತಸ ತಂದಿದೆ ಎಂದಿದ್ದಾರೆ.

ಬೆಂಗಳೂರು ತಂಡಕ್ಕೂ ಪ್ರಶಸ್ತಿ ತರುವ ವಿಶ್ವಾಸ; ಸತತ 3 ಬಾರಿ ಪಾಟ್ನಾ ಪೈರೇಟ್ಸ್ ಚಾಂಪಿಯನ್ ಆಗುವಲ್ಲಿ ಪರ್ದೀಪ್ ನರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿ ನಾನು ಬೆಂಗಳೂರಿಗೆ ಬಂದಿದ್ದೇನೆ ಮತ್ತು ಈ ಬಾರಿ ಬೆಂಗಳೂರು ತಂಡ ಸಹ ಪ್ರಶಸ್ತಿ ಗೆಲ್ಲಲು ನಾನು ಪ್ರಯತ್ನಿಸುತ್ತೇನೆ ಎಂದು ನರ್ವಾಲ್​ ಭರವಸೆ ನೀಡಿದ್ದಾರೆ. 'ಡುಬ್ಕಿ ಕಿಂಗ್' ಎಂದೇ ಖ್ಯಾತರಾಗಿರುವ ಪರ್ದೀಪ್ ನರ್ವಾಲ್ ಅವರು ಕಬಡ್ಡಿಯ ಈ ಮೂವ್ ಅನ್ನು ಯಾರಿಂದ ಕಲಿತಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಕಲೆಯನ್ನು ಸ್ವತಃ ತಾವೇ ಕಲಿತಿರುವುದಾಗಿ ಹೇಳಿದ್ದಾರೆ. 'ನಾನು ಡುಬ್ಕಿ ರೈಡ್​ ಕೌಶಲ್ಯವನ್ನು ಯಾರ ಬಳಿಯೂ ಕಲಿತಿಲ್ಲ. ಇದನ್ನು ನಾನೇ ಸ್ವಂತ ಅಭ್ಯಾಸದಿಂದ ಕಲಿತಿದ್ದೇನೆ ಎಂದಿದ್ದಾರೆ.

ಪ್ರೊ ಕಬಡ್ಡಿ ಲೀಗ್ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಲೀಗ್ ಆಗಲಿದ್ದು ಐಪಿಎಲ್​ನಂತೆ ಖ್ಯಾತಿ ಪಡೆಯಲಿದೆ. ಸದ್ಯ ಪಿಕೆಎಲ್ ನೋಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನೂ 2-3 ಸೀಸನ್‌ಗಳಲ್ಲಿ ಪಿಕೆಎಲ್‌ ಕೂಡ ಐಪಿಎಲ್‌ನಂತೆ ಫೇಮಸ್ ಆಗಲಿದೆ ಎಂದು ತಿಳಿಸಿದ್ದಾರೆ. ಏತನ್ಮಧ್ಯೆ ಪ್ರೋ ಕಬಡ್ಡಿ 11ನೇ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್​ ತಂಡ ಸೋಲನುಭವಿಸಿದೆ. ಇಂದು ಹೈದರಬಾದ್​ನಲ್ಲಿ ನಡೆಯಲಿರುವ ಯುಪಿ ಯೋಧಾಸ್​ ತಂಡದೊಂದಿಗೆ ಬೆಂಗಳೂರು ತಂಡ ಸೆಣಸಾಟ ನಡೆಸಲಿದೆ. ಇದರಲ್ಲಿ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:’ಕೊಬ್ಬು’ ಜಾಸ್ತಿ.. ತಂಡಕ್ಕೆ ಆಯ್ಕೆ ಮಾಡಲ್ಲ: ಟೀಂ ಇಂಡಿಯಾ ಆರಂಭಿಕ ಬ್ಯಾಟರ್​ಗೆ ಶಾಕ್ ನೀಡಿದ ಆಯ್ಕೆ ಸಮಿತಿ!

ABOUT THE AUTHOR

...view details