ಕರ್ನಾಟಕ

karnataka

ETV Bharat / sports

ಚೆನ್ನೈ ಟೆಸ್ಟ್​: ಭಾರತದ ಮಾರಕ ಬೌಲಿಂಗ್​ ದಾಳಿಗೆ ಬಾಂಗ್ಲಾ ಸರ್ವಪತನ: ಟೀಂ ಇಂಡಿಯಾಗೆ ಇನ್ನಿಂಗ್ಸ್​ ಮುನ್ನಡೆ - IND VS BAN - IND VS BAN

ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​ನ ಪ್ರಥಮ ಇನ್ನಿಂಗ್ಸ್​ ಮುಕ್ತಾಯವಾಗಿದ್ದು ಟೀಂ ಇಂಡಿಯಾ 227 ರನ್​ಗಳ ಮುನ್ನಡೆ ಪಡೆದುಕೊಂಡಿದೆ.

ಭಾರತ ಕ್ರಿಕೆಟ್​ ತಂಡ
ಭಾರತ ಕ್ರಿಕೆಟ್​ ತಂಡ (AP)

By ETV Bharat Sports Team

Published : Sep 20, 2024, 4:38 PM IST

ಚೆನ್ನೈ: ಬಾಂಗ್ಲಾದೇಶ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಬಾಂಗ್ಲಾವನ್ನು 149 ರನ್​ಗಳಿಗೆ ಕಟ್ಟಿ ಹಾಕುವ ಮೂಲಕ ಭಾರತ 227 ರನ್​ಗಳ ಮುನ್ನಡೆ ಸಾಧಿಸಿದೆ.

ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಭಾರತ ಮೊದಲ ದಿನದಾಟ ಮುಕ್ತಾಯದ ವೇಳೆಗೆ 6 ವಿಕೆಟ್​ ನಷ್ಟಕ್ಕೆ 339 ರನ್​ಗಳನ್ನು ಕಲೆಹಾಕಿತ್ತು. ನಂತರ ಎರಡನೇ ದಿನ ಬ್ಯಾಟಿಂಗ್​ ಮುಂದುವರೆಸಿದ ಭಾರತ ಕೇವಲ 37 ರನ್​ಗಳಗೆ ನಾಲ್ಕು ವಿಕೆಟ್​ ಕಳೆದುಕೊಂಡು ತನ್ನ ಇನ್ನಿಂಗ್ಸ್​ ಮುಗಿಸಿತು. ರೋಹಿತ್​ ಪಡೆಯನ್ನು 400ರ ಗಡಿ ದಾಟದಂತೆ ಕಟ್ಟಿ ಹಾಕಿ ಮೊದಲ ಇನ್ನಿಂಗ್​ ಆರಂಭಿಸಿದ ಬಾಂಗ್ಲಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ತಂಡದ ಸ್ಕೋರ್​ 40ಕ್ಕೆ ತಲುಪುವಷ್ಟರಲ್ಲೇ ಭಾರತೀಯ ಬೌಲರ್​ಗಳು 4 ವಿಕೆಟ್​ಗಳನ್ನು ಉರುಳಿಸಿದ್ದರು. ಟೀಂ ಇಂಡಿಯಾದ ಬಿಗಿ ಬೌಲಿಂಗ್​ ದಾಳಿಗೆ ಸಿಲುಕಿದ ಬ್ಯಾಟರ್​ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದರು.

ಆರಂಭಿಕ ಬ್ಯಾಟರ್​ಗಳಾದ ಶದಮನ್​​ ಇಸ್ಲಾಂ 2 ರನ್​ಗಳಿಸಿ ಬುಮ್ರಾಗೆ ವಿಕೆಟ್​​ ಒಪ್ಪಿಸಿದರೇ, ಜಾಕಿರ್​ ಹಸನ್​ 3 ರನ್​ಗೆ ಪೆವಿಲಿಯನ್​ ಸೇರಿದರು. ಬಳಿಕ ಮೊಮಿನುಲ್​, ಮುಶಫಿಕರ್ ರಹಿಮ್​ (8) ಕ್ರೀಸ್​ಗೆ ಒಗ್ಗಿಕೊಳ್ಳಲಾಗದೇ ಪೆವಿಲಿಯನ್​ ಪರೇಡ್​ ಮಾಡಿದರು. ಶಾಂಟೋ (20) ಹೊರತು ಪಡಿಸಿ ಅಗ್ರ ನಾಲ್ವರು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಈ ವೇಳೆ, ಬಾಂಗ್ಲಾ 100 ರ ಗಡಿ ತಲುಪುವುದು ಕಷ್ಟ ಎಂದು ಪರಿಗಣಿಸಲಾಗಿತ್ತು. ಆದರೆ ಶಾಕಿಬ್​ ಅಲ್​ ಹಸನ್​ (32), ಲಿಟನ್​ ದಾಸ್​ (22) ತಂಡಕ್ಕೆ ಆಸರೆಯಾದರು. ​​ಈ ಜೋಡಿ 50 ರನ್​ಗಳ ಜೊತೆಯಾಟವಾಡಿತು. ಈ ಓಟಕ್ಕೆ ಜಡೇಜಾ ಬ್ರೇಕ್​ ಹಾಕಿದರು.

ಈ ಜೋಡಿ ಬೇರ್ಪಟ್ಟ ನಂತರ ಬಂದ ಹಸನ್​ ಮಹ್ಮೂದ್​ (9), ಟಸ್​ಕಿನ್​ ಅಹ್ಮದ್​ (11), ನಹೀದ್​ ರಾಣಾ (11) ಪೆವಿಲಿಯನ್​ ಪರೆಡ್​ ಮಾಡಿದರು. ಮೆಹಿದಿ ಹಸನ್​ ಅಜೇಯವಾಗಿ 27 ರನ್​ಗಳ ಕಲೆ ಹಾಕುವ ಮೂಲಕ ತಂಡದ ಸ್ಕೋರ್​ ಅನ್ನು 149ಕ್ಕೆ ಕೊಂಡೊಯ್ಯಲು ಸಹಾಯ ಮಾಡಿದರು. ಭಾರತದ ಪರ ಬುಮ್ರಾ 4, ಸಿರಾಜ್​, ಆಕಾಶ್​ ದೀಪ್​, ಜಡೇಜಾ ತಲಾ 2 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ:ಐಪಿಎಲ್​ಗೆ​ ವಿಕ್ರಮ್​ ರಾಥೋಡ್​ ರಾಯಲ್​ ಎಂಟ್ರಿ: ಈ ತಂಡ​ದ ಬ್ಯಾಟಿಂಗ್​ ಕೋಚ್​ ಆಗಿ ಸೇರ್ಪಡೆ! - Vikram Rathore

ABOUT THE AUTHOR

...view details