Virat Kohli Fitness Secret:ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಫಿಟ್ನೆಸ್ ವಿಚಾರದಲ್ಲಿ ಸಾಕಷ್ಟು ಆಟಗಾರರೂ ಸೇರಿದಂತೆ ಯುವ ಜನತೆ ಅವರನ್ನು ಫಾಲೋ ಮಾಡುತ್ತಾರೆ. ಇದಷ್ಟೇ ಅಲ್ಲದೇ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಲು ಅವರ ಫಿಟ್‌ನೆಸ್ ಕೂಡಾ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಮಾತನಾಡಿದ್ದಾರೆ.
10 ವರ್ಷಗಳಲ್ಲಿ ಕೊಹ್ಲಿ ಒಮ್ಮೆಯೂ ಬಟರ್ ಚಿಕನ್ ಸೇವಿಸಿಲ್ಲ: ಕೊಹ್ಲಿ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಬೆಳಿಗ್ಗೆ ಬೇಗ ಏಳುತ್ತಾರೆ. ಎದ್ದ ತಕ್ಷಣ ಸಮಯ ವ್ಯರ್ಥ ಮಾಡದೇ ಕಾರ್ಡಿಯೋ ವ್ಯಾಯಾಮ ಮಾಡುತ್ತಾರೆ. ನಂತರ ನನ್ನೊಂದಿಗೆ ಸ್ವಲ್ಪ ಹೊತ್ತು ಕಳೆದು ಬಳಿಕ ಕ್ರಿಕೆಟ್ ಅಭ್ಯಾಸ ನಡೆಸುತ್ತಾರೆ. ಊಟದಲ್ಲಿ ಜಂಕ್ ಮತ್ತು ಸಕ್ಕರೆರಹಿತ ಪಾನಿಯ ಆಹಾರ ಸೇವನೆ ಮಾಡುತ್ತಾರೆ. ಕಳೆದ 10 ವರ್ಷಗಳಿಂದ ಒಮ್ಮೆಯೂ ಬಟರ್ ಚಿಕನ್ ಸೇವಿಸಿಲ್ಲ. ಇದು ನಂಬಲಸಾಧ್ಯವಾದರೂ ನಿಜ. ಕೂಲ್ ಡ್ರಿಂಕ್ಸ್ ಕೂಡ ಕೊಹ್ಲಿ ಸೇವಿಸಲ್ಲ ಎಂದು ಅವರು ತಿಳಿಸಿದ್ದಾರೆ.