ಹೈದರಾಬಾದ್:ಸಿಂಗಾಪುರ ಓಪನ್ ಟೂರ್ನಿಯಲ್ಲಿ ತೋರಿದ ಅತ್ಯುತ್ತಮ ಪ್ರದರ್ಶನದ ಬಳಿಕ ಭಾರತದ ನಂಬರ್ 1 ಟೇಬಲ್ ಟೆನ್ನಿಸ್ ಆಟಗಾರ ಅಚಂತ ಶರತ್ ಕಮಲ್ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರೀ ಏರಿಕೆ ಕಂಡಿದ್ದಾರೆ. ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್ (ಐಟಿಟಿಎಫ್) ಈಚೆಗೆ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ 54 ಸ್ಥಾನಗಳನ್ನು ಜಿಗಿದು 34ನೇ ಶ್ರೇಯಾಂಕಕ್ಕೆ ಏರಿದ್ದಾರೆ.
ಭಾರತದ ಹಿರಿಯ ಟೇಬಲ್ ಟೆನ್ನಿಸ್ ಆಟಗಾರ ಸುಧಾರಿತ ಪ್ರದರ್ಶನ ನೀಡಿದ್ದು, ಶ್ರೇಯಾಂಕ ಪಟ್ಟಿಯಲ್ಲಿ ಭರ್ಜರಿ ಏರಿಕೆ ದಾಖಲಿಸಲು ಕಾರಣವಾಗಿದೆ. ಸಿಂಗಾಪುರ ಓಪನ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೂ, ಕ್ವಾರ್ಟರ್ಫೈನಲ್ ಹಂತಕ್ಕೆ ತಲುಪಿದ್ದರು. ಸಿಂಗಲ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶರತ್ ಕಮಲ್ ಅವರು ಭಾರತದ ನಂಬರ್ 1 ಟೇಬಲ್ ಟೆನಿಸ್ ಆಟಗಾರ ಎಂಬುದು ವಿಶೇಷ.
ಸಿಂಗಾಪುರ ಟೂರ್ನಿಯಲ್ಲಿ ವಿಶ್ವದ 13 ನೇ ಆಟಗಾರ ಡಾರ್ಕೊ ಜಾರ್ಜಿಕ್ ಮತ್ತು ವಿಶ್ವ ನಂ. 22 ಒಮರ್ ಅಸ್ಸಾರ್ ಅವರನ್ನು ಸೋಲಿಸುವ ಮೂಲಕ 8 ರ ಸುತ್ತಿಗೆ ತಲುಪಿದ್ದರು. ಆದರೆ, ಕ್ವಾರ್ಟರ್ಫೈನಲ್ನಲ್ಲಿ ಅವರು ಸೋಲು ಕಂಡಿದ್ದರು. ಆದಾಗ್ಯೂ ರ್ಯಾಂಕಿಂಗ್‌ನಲ್ಲಿ ಭಾರೀ ಸುಧಾರಣೆ ಕಂಡಿರುವ ಶರತ್‌ಗೆ ಈ ವರ್ಷ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಹಾದಿಯನ್ನು ಸುಲಭಗೊಳಿಸಿದೆ.