ಕರ್ನಾಟಕ

karnataka

ETV Bharat / sports

ಪ್ಯಾರಾಲಿಂಪಿಕ್ಸ್​ನಲ್ಲಿ ಇತಿಹಾಸ ನಿರ್ಮಿಸಿದ 7 ತಿಂಗಳ ತುಂಬು ಗರ್ಭಿಣಿ: ನೋವಿನೊಂದಿಗೆ ಹೋರಾಡಿ ಪದಕ ಗೆದ್ದ ಗಟ್ಟಿಗಿತ್ತಿ! - Paris Paralympics 2024 - PARIS PARALYMPICS 2024

ಪ್ಯಾರಾಲಿಂಪಿಕ್ಸ್​ನಲ್ಲಿ 7 ತಿಂಗಳ ಗರ್ಭಿಣಿ ಬಿಲ್ಲುಗಾರ್ತಿ ಯಾರೂ ಮಾಡದ ಸಾಧನೆ ಮಾಡಿ ಇತಿಹಾಸವನ್ನು ನಿರ್ಮಿಸಿದ್ದಾರೆ.

ಜೂಡಿ ಗ್ರಿನ್‌ಹ್ಯಾಮ್
ಜೂಡಿ ಗ್ರಿನ್‌ಹ್ಯಾಮ್ ((AP))

By ETV Bharat Sports Team

Published : Sep 2, 2024, 8:37 PM IST

ಪ್ಯಾರಿಸ್​: ಪ್ಯಾರಾಲಿಂಪಿಕ್ಸ್‌ನಂತಹ ದೊಡ್ಡ ವೇದಿಕೆಯಲ್ಲಿ ಪದಕ ಗೆಲ್ಲುವುದು ಸುಲಭದ ಮಾತಲ್ಲ. ಇದಕ್ಕಾಗಿ ಕ್ರೀಡಾಪಟುಗಳು ಹಗಲು ರಾತ್ರಿ ಎನ್ನದೇ ಬೆವರು ಹರಿಸುತ್ತಾರೆ. ಎಷ್ಟೇ ಕಷ್ಟವಾದರೂ ಸರಿ ಪದಕ ಜಯಿಸಿಬೇಕೆಂದು ಪಣತೊಟ್ಟು ಈ ವೇದಿಕೆಯಲ್ಲಿ ಭಾಗಿಯಾಗುತ್ತಾರೆ. ಅಂಥವರಲ್ಲಿ ಗ್ರೇಟ್​ ಬ್ರಿಟನ್​ನ ಬಿಲ್ಲುಗಾರ್ತಿ ಕೂಡ ಒಬ್ಬರಾಗಿದ್ದಾರೆ.

ಹೌದು, ಗ್ರೇಟ್ ಬ್ರಿಟನ್​ನ ಬಿಲ್ಲುಗಾರ್ತಿ ಜೂಡಿ ಗ್ರಿನ್‌ಹ್ಯಾಮ್ 7 ತಿಂಗಳ ಗರ್ಭಿಣಿಯಾಗಿದ್ದರೂ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಧೈರ್ಯ ತೋರಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಇದರೊಂದಿಗೆ ಗರ್ಭಾವಸ್ಥೆಯಲ್ಲಿ ಪದಕ ಗೆದ್ದ ಮೊದಲ ಪ್ಯಾರಾಲಿಂಪಿಕ್ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರಾರಾಗಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ, ಮಗು ಹೊಟ್ಟೆಯೊಳಗೆ ಚಲಿಸುತ್ತಿದ್ದ ಕಾರಣ ನೋವಿನಲ್ಲಿ ಹೋರಾಡಿದ ಇವರು ಪಂದ್ಯವನ್ನು ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

31ರ ಹರೆಯದ ಜೂಡಿ ಗ್ರಿನ್‌ಹ್ಯಾಮ್ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 142 - 141 ಅಂಕಗಳ ಅಂತರದಲ್ಲಿ ಅಮೆರಿಕದ ಬಿಲ್ಲುಗಾರ್ತಿ ಮತ್ತು ತನ್ನ ಗೆಳತಿಯಾದ ಫೋಬೆ ಪ್ಯಾಟರ್ಸನ್ ಪೈನ್ ಅವರನ್ನು ಮಣಿಸಿದ್ದಾರೆ. ಗ್ರಿನ್​​ಹ್ಯಾಮ್​ ಸೋಲಿಸಿರುವ ಅಮೆರಿಕಾದ ಬಿಲ್ಲುಗಾರ್ತಿ ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಗ್ರಿನ್‌ಹ್ಯಾಮ್ ಎಡಗೈಯಲ್ಲಿ ಅಂಗವೈಕಲ್ಯ ಹೊಂದಿದ್ದು, ಹೆಬ್ಬೆರಳಿನ ಅರ್ಧ ಭಾಗ ಕಳೆದುಕೊಂಡಿದ್ದಾರೆ.

ಪದಕ ಗೆದ್ದ ಬಳಿಕ ಪ್ರತಿಕ್ರಿಯೆ ನೀಡಿರು ಗ್ರಿನ್‌ಹ್ಯಾಮ್, ಸೆಮಿಫೈನಲ್​ ಪಂದ್ಯದ ವೇಳೆ ಹೊಟ್ಟೆಯಲ್ಲಿ ಮಗು ಒದೆಯುತ್ತಿದ್ದರಿಂದ ಹೆಚ್ಚಿನ ನೋವನ್ನು ಅನುಭವಿಸಿದೆ. ಆದರೂ ನನ್ನ ಪ್ರದರ್ಶನ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ. ನಾನು ಹಲವಾರು ಕಷ್ಡ ಮತ್ತು ಸವಾಲುಗಳನ್ನು ಎದುರಿಸಿ ಈ ವೇದಿಕೆಗೆ ತಲುಪಿದ್ದೇನೆ. ಆದರೂ ಕೂಡು ನಾನು ಉತ್ತಮವಾಗಿ ಪ್ರದರ್ಶನ ತೋರಿ ಪದಕ ಗೆಲ್ಲ ಬಲ್ಲೆ ಎಂಬ ನಂಬಿಕೆ ನನ್ನಲ್ಲಿತ್ತು. ಸದ್ಯ ಪದಕ ಗೆದ್ದುಕೊಂಡಿದ್ದೇನೆ. ಇದರೊಂದಿಗೆ ನಾನೂ ಆರೋಗ್ಯವಾಗಿದ್ದು ಮತ್ತು ಮಗು ಕೂಡ ಆರೋಗ್ಯಕರವಾಗಿದೆ ಎಂದು ಬರೆದುಕೊಂಡಿದ್ದಾರೆ. ಅವರ ಈ ಅತ್ಯುತ್ತಮ ಪ್ರದರ್ಶನದೊಂದಿಗೆ ಹಲವಾರು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಇದನ್ನೂ ಓದಿ:ಪ್ಯಾರಾಲಿಂಪಿಕ್ಸ್ 2024: ಭಾರತದ ಖಾತೆಗೆ ಎರಡನೇ ಚಿನ್ನ; ಬ್ಯಾಡ್ಮಿಂಟನ್​ನಲ್ಲಿ ನಿತೇಶ್​​ ಕುಮಾರ್​ ಕಮಾಲ್​​ ​ - Nitesh Kumar Clinches Gold

ABOUT THE AUTHOR

...view details