ಕಟಕ್( ಒಡಿಶಾ): ಒಡಿಶಾದ ಜನಪ್ರಿಯ ರ‍್ಯಾಪರ್ ಅಭಿನವ್ ಸಿಂಗ್ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಪತ್ನಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಭಿನವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿದ್ದ ತಾಯಿ, ಇದೀಗ ಅಭಿನವ್ ಪತ್ನಿ, ಆಕೆಯ ತಂಗಿ, ತಂದೆ ಹಾಗೂ ತಾಯಿಯ ವಿರುದ್ಧ ಒಡಿಶಾದ ಕಟಕ್ ಲಾಲ್‌ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಲಾಲ್‌ಬಾಗ್ ಪೊಲೀಸ್ ಠಾಣೆಯು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ಮತ್ತು 351 ರ ಅಡಿ ಪ್ರಕರಣ ದಾಖಲಿಸಿದೆ. ಮತ್ತೊಂದೆಡೆ, ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತನ ಸಹೋದರ ಅಮಿತ್ ಸಾವನ್ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಭಿನವ್ ಅವರ ತಾಯಿ ಬಿದ್ಯುತ್ ಪ್ರಧಾನ್ ಅವರ ದೂರಿನ ಪ್ರಕಾರ, "ಅವನ ಪತ್ನಿ, ಅತ್ತೆ ಹಾಗೂ ಅವರ ಕುಟುಂಬಸ್ಥರು ಅಬಿನವ್ನನ್ನು ಯಾವಾಗಲು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಅವರು ಅಭಿನವ್ ವಿರುದ್ಧ ಸುಳ್ಳು ಪ್ರಕರಣವನ್ನೂ ದಾಖಲಿಸಿದ್ದರು. ಇದಿರಂದಾಗಿ ಮಗ ಖಿನ್ನತೆಗೆ ಒಳಗಾಗಿದ್ದ. ಮದುವೆಯಾದಾಗಿನಿಂದ ಸೊಸೆ ಹೊಂದಾಣಿ ಇದ್ದಿಲ್ಲ. ಕುಟುಂಬದಲ್ಲಿ ಹಲವು ಅವ್ಯವಸ್ಥೆಯನ್ನು ಸೃಷ್ಟಿಸಿದ್ದಳು ಎಂದು ದೂರಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಜನಪ್ರಿಯ ರ‍್ಯಾಪರ್ ಆತ್ಮಹತ್ಯೆ; ಅಸಹಜ ಸಾವು ಪ್ರಕರಣ ದಾಖಲು