ಹೈದರಾಬಾದ್: 16ನೇ ಶತಮಾನದಲ್ಲಿ ಆರಂಭವಾದ ಕ್ರಿಕೆಟ್ ಇಂದು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ಕ್ರೀಡೆಯಾಗಿದೆ. ದಿನ ಕಳೆದಂತೆ ಕ್ರಿಕೆಟ್ ಅನ್ನು ಆರಾಧಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತದಲ್ಲೂ ಕ್ರಿಕೆಟ್‌ಪ್ರಿಯರ ಸಂಖ್ಯೆಯೇನೂ ಕಡಿಮೆ ಇಲ್ಲ. ಆದ್ರೆ, ಕ್ರಿಕೆಟ್‌ನಲ್ಲಿ ಎಷ್ಟು ವಿಧಾನಗಳ ಮೂಲಕ ವಿಕೆಟ್ ಪಡೆಯಬಹುದು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ.
ಒಬ್ಬ ಬ್ಯಾಟರ್‌ನ ವಿಕೆಟ್ ಪಡೆಯಲು 10 ವಿಧಾನಗಳಿವೆ. ಇದರಲ್ಲಿ ಹೆಚ್ಚಿನ ಜನರಿಗೆ ತಿಳಿದಿರುವುದು ಕ್ಯಾಚೌಟ್, ಎಲ್‌ಬಿಡಬ್ಲ್ಯೂ, ಸ್ಟಂಪ್ ಔಟ್, ರನ್ಔಟ್ ಮತ್ತು ಬೌಲ್ಡ್. ಆದ್ರೆ, ಇದನ್ನೂ ಹೊರತುಪಡಿಸಿಯೂ ಇನ್ನೂ 5 ವಿಧಾನಗಳ ಮೂಲಕ ವಿಕೆಟ್ ಪಡೆಯಬಹುದು.
ಬೌಲ್ಡ್: ಬೌಲರ್ ಎಸೆದ ಚೆಂಡು ನೇರವಾಗಿ ಬ್ಯಾಟರ್ ಹಿಂದಿರುವ ಸ್ಟಂಪ್‌ಗಳಿಗೆ ತಾಗಿದರೆ ಅದನ್ನು ಕ್ಲೀನ್ ಬೌಲ್ಡ್ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಚೆಂಡು ಕೈ ಅಥವಾ ಹೆಲ್ಮೆಟ್ ಮತ್ತಿತರ ವಸ್ತುಗಳಿಗೆ ತಾಕಿದ ಬಳಿಕ ವಿಕೆಟ್ಗೆ ತಾಗಿದರೆ ಅದನ್ನು ಬೌಲ್ಡ್ ಎಂದು ಕರೆಯಲಾಗುತ್ತದೆ. ನೋ ಬಾಲ್ ಮತ್ತು ಡೆಡ್ಬಾಲ್ನಿಂದ ಬ್ಯಾಟರ್ ಅನ್ನು ಬೌಲ್ಡ್ ಮಾಡಲಾಗುವುದಿಲ್ಲ. ಬೌಲ್ಡ್ ಕ್ರಿಕೆಟ್ ನಿಯಮಗಳ 32ನೇ ವಿಧಿಯಿಂದ ರೂಪುಗೊಂಡಿದೆ.
ಕ್ಯಾಚ್ ಔಟ್: ಕ್ರಿಕೆಟ್‌ನಲ್ಲಿ ಔಟಾಗುವ ಸಾಮಾನ್ಯ ವಿಧಾನಗಳಲ್ಲಿ ಕ್ಯಾಚ್ ಔಟ್ ಕೂಡ ಒಂದು. ಆಟಗಾರನು ಬ್ಯಾಟ್‌ನಿಂದ ಹೊಡೆದ ಚೆಂಡು ನೆಲ ಮುಟ್ಟುವ ಮೊದಲು ಫೀಲ್ಡರ್ ಅಥವಾ ವಿಕೆಟ್‌ಕೀಪರ್ ಹಿಡಿದರೆ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ. ಕ್ಯಾಚ್ ಔಟ್ನಲ್ಲಿ ವಿಭಿನ್ನ ರೂಪಾಂತರಗಳಿವೆ. ಉದಾಹರಣೆಗೆ, ಬೌಲರ್ ಸ್ವತಃ ಕ್ಯಾಚ್ ತೆಗೆದುಕೊಂಡರೆ, ಅದನ್ನು ಕ್ಯಾಚ್ ಮತ್ತು ಬೌಲ್ಡ್ ಎಂದು ಪರಿಗಣಿಸಲಾಗುತ್ತದೆ. ವಿಕೆಟ್ ಕೀಪರ್ ಅಥವಾ ಸ್ಲಿಪ್ ಕಾರ್ಡನ್‌ನಿಂದ ಕ್ಯಾಚ್ ಪಡೆದರೆ ಅದನ್ನು ಕೀಪರ್ ಅಥವಾ ಸ್ಲಿಪ್ ಕ್ಯಾಚ್ ಎಂದು ಹೇಳಲಾಗುತ್ತದೆ.
ಹಿಟ್ ವಿಕೆಟ್:ಚೆಂಡನ್ನು ಹೊಡೆಯಲು ಯತ್ನಿಸಿದ ವೇಳೆ ಬ್ಯಾಟರ್ ತನ್ನ ಬ್ಯಾಟ್ ಅಥವಾ ಇತರ ಯಾವುದೇ ದೇಹದ ಭಾಗ ಮತ್ತು ಸಲಕರಣೆಗಳಿಂದ ಅಜಾಗರೂಕತೆಯಿಂದ ಹಿಂಬದಿಯ ಸ್ಟಂಪ್‌ಗಳನ್ನು ಉರುಳಿಸಿದರೆ ಹಿಟ್ ವಿಕೆಟ್ ನೀಡಿ ಬ್ಯಾಟರ್ನನ್ನು ಪೆವಿಲಿಯನ್‌ಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಬ್ಯಾಟರ್‌ನ ಹೆಲ್ಮೆಟ್‌ಗೆ ಮತ್ತು ಬ್ಯಾಟ್ಗೆ ಚೆಂಡು ಬಡಿದು ಸ್ಟಂಪ್‌ನ ಮೇಲೆ ಬಿದ್ದರು. ಅದನ್ನು ಹಿಟ್ ವಿಕೆಟ್ ಎಂದೇ ಪರಿಗಣಿಸಲಾಗುತ್ತದೆ.
ಬಾಲ್ ಹಿಟ್ ದಿ ಟ್ವೈಸ್:ಚೆಂಡನ್ನು ಬ್ಯಾಟ್‌ನಿಂದ ಎರಡು ಬಾರಿ ಹೊಡೆಯುವುದು ಕೂಡ ಅಪರೂಪದ ವಜಾ ವಿಧಾನ. ಬ್ಯಾಟರ್ ಚೆಂಡನ್ನು ಎರಡು ಬಾರಿ ಅಚಾತುರ್ಯದಿಂದ ಅಥವಾ ಅಜಾಗರೂಕತೆಯಿಂದ ಹೊಡೆದರೆ ಈ ರೀತಿಯ ಔಟ್ ಸಂಭವಿಸುತ್ತದೆ.
ಎಲ್‌ಬಿಡಬ್ಲ್ಯೂ:ಬ್ಯಾಟರ್ಗಳು ಔಟಾಗುವ ಸಾಮಾನ್ಯ ವಿಧಾನಗಳಲ್ಲಿ LBW ಕೂಡ ಒಂದು. ಬ್ಯಾಟರ್ ಸ್ಟಂಪ್‌ಗಳಿಗೆ ಅಡ್ಡಲಾಗಿ ನಿಂತು ಚೆಂಡನ್ನು ಹೊಡೆಯಲು ಯತ್ನಿಸಿದಾಗ ಚೆಂಡು ಬ್ಯಾಟ್ಗೆ ತಾಗದೇ ಬ್ಯಾಟರ್‌ನ ಕಾಲಿಗೆ ತಾಗಿದರೆ ಅದನ್ನು ಲೆಗ್ ಬಿಫೋರ್ ವಿಕೆಟ್ ಅಥವಾ ಎಲ್‌ಬಿಡಬ್ಲ್ಯೂ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಚೆಂಡು ಬ್ಯಾಟರ್‌ನ ಪ್ಯಾಡ್ ಅಥವಾ ಗ್ಲೌಸ್‌ಗೆ ತಾಗದಿದ್ದರೂ ಸ್ಟಂಪ್‌ಗೆ ತಾಗುತ್ತದೆಯೋ ಇಲ್ಲವೋ ಎಂದು ಅಂಪೈರ್ಗಳು ನಿರ್ಣಯಿಸುತ್ತಾರೆ. ಒಂದು ವೇಳೆ ಅಂಪೈರ್ ನಿರ್ಧಾರದಿಂದ ಬ್ಯಾಟರ್ಗೆ ಅಸಮಾಧಾನವಿದ್ದಲ್ಲಿ ತಮ್ಮ ಬಳಿಯಿರುವ ರಿವ್ಯೂ ಆಯ್ಕೆ ಮೂಲಕ ಮತ್ತೊಮ್ಮೆ ಪರಿಶೀಲಿಸಲು ಮೂರನೇ ಅಂಪೈರ್ ಬಳಿಗೆ ಕೊಂಡೊಯ್ಯಬಹುದು.
ಫೀಲ್ಡರ್ಗೆ ಅಡ್ಡಿ ಪಡಿಸುವುದು:ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ (MCC) ಸ್ಥಾಪಿಸಿದ ಕ್ರಿಕೆಟ್ ನಿಯಮಗಳ ಕಾನೂನು 37ರ ಪ್ರಕಾರ, ಬ್ಯಾಟರ್ ಉದ್ದೇಶಪೂರ್ವಕವಾಗಿ ಕ್ಷೇತ್ರ ರಕ್ಷಣೆಯಲ್ಲಿರುವ ಫೀಲ್ಡರ್ಗೆ ಕ್ಯಾಷ್ ಹಿಡಿಯುವಾಗ ಅಡ್ಡಿಪಡಿಸಿದರೆ ಈ ನಿರ್ಧಾರ ನೀಡಲಾಗುತ್ತದೆ. ಉದಾಹರಣೆಗೆ, ಬೌಲರ್ ಚೆಂಡನ್ನು ಕ್ಯಾಚ್ ಹಿಡಿಯಲು ಯತ್ನಿಸುವಾಗ ಅದನ್ನು ತಪ್ಪಿಸಲು ರನ್ ತೆಗೆಯುವ ನೆಪದಲ್ಲಿ ಉದ್ದೇಶಪೂರ್ವಕವಾಗಿ ಬ್ಯಾಟರ್ ಅವನಿಗೆ ಡಿಕ್ಕಿ ಹೊಡೆಯುವುದು ಅಥವಾ ಕ್ಯಾಚ್ ಹಿಡಿಯದಂತೆ ತಪ್ಪಿಸುವುದು ಮಾಡಿದಲ್ಲಿ ಈ ನಿಯಮ ಮೂಲಕ ಬ್ಯಾಟರ್ನನ್ನು ವಜಾಗೊಳಿಸಬಹುದು.
ರನ್ ಔಟ್:ಒಬ್ಬ ಬ್ಯಾಟರ್ ರನ್ ಕದಿಯುವ ವೇಳೆ ಕ್ರೀಸ್ಗೂ ತಲುಪುವ ಮುನ್ನವೇ ಫೀಲ್ಡಿಂಗ್ ತಂಡವು ಚೆಂಡನ್ನು ಸ್ಟಂಪ್‌ಗೆ ಹೊಡೆದರೆ ಅದನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದಷ್ಟೇ ಅಲ್ಲದೇ ಬ್ಯಾಟರ್ ಸ್ಟಂಪ್‌ಗೆ ಚೆಂಡು ತಾಕದಂತೆ ಉದ್ದೇಶಪೂರ್ವಕವಾಗಿ ಚೆಂಡನ್ನು ದೇಹಕ್ಕೆ ತಾಗಿಸಿಕೊಂಡರೆ ಅದನ್ನು ರನ್ಔಟ್ ಎಂದೇ ನಿರ್ಧರಿಸಲಾಗುತ್ತದೆ. ಮೂರನೇ ಅಂಪೈರ್ ಮೂಲಕ ತಂತ್ರಜ್ಞಾನದ ಬಳಕೆಯಿಂದ ಇದರ ತೀರ್ಪು ಪಡೆಯಲಾಗುತ್ತದೆ.
ರಿಟೈರ್ಡ್ ಔಟ್:ಬ್ಯಾಟರ್ ಕಾರಣಾಂತರಗಳಿಂದ ಆಟದ ಮಧ್ಯದಲ್ಲೇ ಕ್ರೀಸ್‌ನಿಂದ ಪೆವಿಲಿಯನ್‌ಗೆ ಹಿಂತಿರುಗಲು ನಿರ್ಧರಿಸಿದಾಗ ರಿಟೈರ್ಡ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದು ಹೆಚ್ಚಾಗಿ ಬ್ಯಾಟರ್ ಗಾಯಕ್ಕೆ ತುತ್ತಾದಾಗ ಅಥವಾ ದೇಹದ ನೋವಿನಿಂದ ಬಳಲುತ್ತಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಈ ನಿಯಮದಲ್ಲಿ ಬ್ಯಾಟರ್ ಮಧ್ಯದಲ್ಲಿ ಪಂದ್ಯಕ್ಕೆ ಪುನರಾಗಮನ ಮಾಡಬಹುದು. ಒಂದು ವೇಳೆ ಸ್ವತಃ ಬ್ಯಾಟರ್ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ನಿವೃತ್ತಿ ತೆಗೆದುಕೊಂಡರೆ ಅದನ್ನು ರಿಟೈರ್ ಔಟ್ ಅಡಿಯಲ್ಲಿ ಪರಿಗಣಿಸಲಾಗುತ್ತದೆ.
ಸ್ಟಂಪ್ಡ್ ಔಟ್:ಸ್ಟಂಪ್ಡ್ ಔಟ್ ವಿಧಾನವು ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿದೆ. ಬ್ಯಾಟರ್ ಕ್ರೀಸ್‌ನಿಂದ ಹೊರಬಂದು ಚೆಂಡನ್ನು ಹೊಡೆಯಲು ಯತ್ನಿಸಿದ ವೇಳೆ ಮಿಸ್ ಆಗಿ ಚೆಂಡು ವಿಕೆಟ್‌ಕೀಪರ್‌ನ ಕೈಗೆ ಸೇರಿದರೆ ಬ್ಯಾಟರ್ ಕ್ರೀಸ್‌ನೊಳಗೆ ಸೇರುವ ಮೊದಲು ಕೀಪರ್ ಚೆಂಡನ್ನು ವಿಕೆಟ್‌ಗಳಿಗೆ ಹಚ್ಚಿದರೆ ಅದನ್ನು ಸ್ಟಂಪ್ ಔಟ್ ಎಂದು ಪರಿಗಣಿಸಲಾಗುತ್ತದೆ. ಸ್ಟಂಪಿಂಗ್ ಅನ್ನು ಕಾರ್ಯಗತಗೊಳಿಸಲು ಸ್ಪಿನ್ನರ್ ಅಥವಾ ನಿಧಾನಗತಿಯ ಬೌಲರ್ಗಳನ್ನು ಬಳಸಲಾಗುತ್ತದೆ.
ಟೈಮ್ ಔಟ್:ಟೈಮ್ ಔಟ್ ಅಪರೂಪವಾಗಿ ಸಂಭವಿಸುವ ವಿಧಾನವಾಗಿದೆ. ವಿಶೇಷವಾಗಿ, ಅಂತಾರಾಷ್ಟ್ರೀಯ ರಂಗದಲ್ಲಿ ಇದನ್ನು ಹೆಚ್ಚಾಗಿ ಕಾಣಲು ಆಗಲ್ಲ. ಟೈಮ್ ಔಟ್ ಎಂದರೆ ಬ್ಯಾಟರ್ ಒಬ್ಬ ಕ್ರೀಸ್‌ನಿಂದ ನಿರ್ಗಮಿಸಿದ ಬಳಿಕ ಮತ್ತೊಬ್ಬ ಬ್ಯಾಟರ್ 3 ನಿಮಿಷಗಳಲ್ಲಿ ಕ್ರೀಸ್ಗೆ ಆಗಮಿಸಬೇಕು. ಒಂದು ವೇಳೆ ಬ್ಯಾಟರ್ ಕ್ರೀಸ್ಗೆ ಬರಲು 3 ನಿಮಿಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಎದುರಾಳಿ ತಂಡ ಅಂಪೈರ್ಗೆ ಅಪೀಲ್ ಮಾಡಬಹುದು. ಬಳಿಕ ಔಟ್ ನೀಡಲಾಗುತ್ತದೆ. ಇದು ಪ್ರಥಮ ದರ್ಜೆ ಮಟ್ಟದ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಸಂಭವಿಸುತ್ತದೆ.