ಮೇಷ: ಈ ವಾರದಲ್ಲಿ ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಉತ್ತಮ ಅವಕಾಶಗಳು ಲಭಿಸಲಿವೆ. ವಾರದ ಆರಂಭದಲ್ಲಿ ನೀವು ಎಲ್ಲಿಂದಾದರೂ ದೊಡ್ಡ ಮಟ್ಟದ ಹಣವನ್ನು ಪಡೆಯಬಹುದು. ವೃತ್ತಿ ಮತ್ತು ವ್ಯವಹಾರದ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಆಸಕ್ತಿ ಬೆಳೆಯಲಿದೆ. ವ್ಯವಹಾರದಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ. ಆದರೆ ವ್ಯವಹಾರವನ್ನು ನಡೆಸುವಾಗ ಎಚ್ಚರಿಕೆ ವಹಿಸಿ. ಅಲ್ಲದೆ ಯಾರನ್ನೂ ಅಷ್ಟು ಸುಲಭವಾಗಿ ನಂಬಬೇಡಿ. ವಾರದ ಕೊನೆಗೆ ಯಾವುದಾದರೂ ಮಂಗಳಕರ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಲಿದೆ. ಪ್ರೇಮ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಪ್ರೇಮಿಯ ಜೊತೆಗಿನ ಪ್ರೇಮ ಮತ್ತು ಸಾಮರಸ್ಯವು ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ಆರೋಗ್ಯದ ವಿಚಾರದಲ್ಲಿ ಈ ವಾರವು ಸಾಮಾನ್ಯ ವಾರವೆನಿಸಲಿದೆ. ಮಕ್ಕಳಿಗೆ ಸಂಬಂಧಿಸಿದ ಗಂಭೀರ ಚಿಂತೆಯನ್ನು ದೂರ ಮಾಡಿದರೆ ಮನಸ್ಸಿನಲ್ಲಿ ಶಾಂತಿ ನೆಲೆಸಲಿದೆ.
ವೃಷಭ: ವೃಷಭ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಯಾವುದೇ ಹೆಜ್ಜೆ ಇಡುವ ಮೊದಲು ಸಾಕಷ್ಟು ಪರ್ಯಾಲೋಚನೆ ನಡೆಸಬೇಕು. ಇಲ್ಲದಿದ್ದರೆ ಅವರು ಅನಿರೀಕ್ಷಿತ ಸಮಸ್ಯೆಗಳಿಗೆ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ನಿಮ್ಮ ಕೆಲಸವನ್ನು ಸಕಾಲದಲ್ಲಿ ಮುಗಿಸಲು ಹೆಚ್ಚುವರಿ ಶ್ರಮ ಮತ್ತು ಪ್ರಯತ್ನವನ್ನು ಪಡಬೇಕು. ವಾರದ ಆರಂಭದಲ್ಲಿ ಹೆಚ್ಚುವರಿ ಕೆಲಸ ಇರಬಹುದು. ವಿಪರೀತ ಚಟುವಟಿಕೆಯ ನಡುವೆಯೂ ಆಪ್ತ ಮಿತ್ರರಿಂದಲೂ ಸಹಾಯ ದೊರೆಯುವುದು ಕಷ್ಟಕರ. ವಾರದ ಆರಂಭಿಕ ದಿನಗಳು ವ್ಯಾಪಾರೋದ್ಯಮಿಗಳಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಆದರೆ ವಾರದ ಕೊನೆಯಲ್ಲಿ ದೊರೆಯುವ ಅನಿರೀಕ್ಷಿತ ಲಾಭವು ಸಂಭ್ರಮಾಚರಣೆಗೆ ಕಾರಣವೆನಿಸಬಹುದು. ಆಸ್ತಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದ ವಿವಾದವು ಸಾಕಷ್ಟು ಚಿಂತೆಗೆ ಕಾರಣವೆನಿಸಬಹುದು. ಪ್ರೇಮ ಜೀವನದಲ್ಲಿ ಎದುರಾಗುವ ತಪ್ಪು ಗ್ರಹಿಕೆಗಳ ವಿಚಾರದಲ್ಲಿ ವಾದ ಮಾಡುವ ಬದಲಿಗೆ ಸೂಕ್ತ ಸಂವಹನದ ಮೂಲಕ ಬಗೆಹರಿಸಲು ಯತ್ನಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಬೇಕಾದರೆ ಕಠಿಣ ಶ್ರಮ ಪಡಬೇಕು.
ಮಿಥುನ: ಮಿಥುನ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಮಿಶ್ರಫಲ ದೊರೆಯಲಿದೆ. ಆರಂಭದಲ್ಲಿ ಕೆಲಸದಲ್ಲಿ ಸವಾಲುಗಳು ಎದುರಾಗಬಹುದು. ಆದರೆ, ವಾರದ ದ್ವಿತೀಯಾರ್ಧದಲ್ಲಿ ಎಲ್ಲವೂ ಸುಗಮವಾಗಿ ನಡೆಯಲಿದೆ. ವಾರದ ಆರಂಭದಲ್ಲಿ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರದ ಅಥವಾ ಹತ್ತಿರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಈ ಅವಧಿಯಲ್ಲಿ ಋತುಮಾನಕ್ಕೆ ಸಂಬಂಧಿಸಿದ ರೋಗಗಳ ಕುರಿತು ಎಚ್ಚರಿಕೆ ವಹಿಸಿ. ನಿಮ್ಮ ದಿನಚರಿ ಮತ್ತು ಆಹಾರ ಕ್ರಮದ ಕುರಿತು ಎಚ್ಚರಿಕೆ ವಹಿಸಿ. ಈ ಹಂತದಲ್ಲಿ ವಿದ್ಯಾರ್ಥಿಗಳ ಗಮನವು ಶಿಕ್ಷಣದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು. ದೂರದ ಸ್ಥಳದಲ್ಲಿ ಕೆಲಸ ಮಾಡುವವರು, ಹಾಗೂ ಕಮಿಷನ್ ಗಾಗಿ ಕೆಲಸ ಮಾಡುವವರು ಅಥವಾ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುವವರು ಮಾನಸಿಕ ಒತ್ತಡ ಮತ್ತು ತಳಮಳ ಅನುಭವಿಸಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ವಾರದ ಕೊನೆಗೆ ನಿಮ್ಮ ಪ್ರೇಮಿಯು ಉಡುಗೊರೆ ನೀಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಾರದ ಪೂರ್ವಾರ್ಧಕ್ಕೆ ಹೋಲಿಸಿದರೆ ಉತ್ತರಾರ್ಧದಲ್ಲಿ ಸಂತಸ ಮತ್ತು ಯಶಸ್ಸು ದೊರೆಯಲಿದೆ. ಈ ಕ್ಷಣದಲ್ಲಿ, ಪ್ರಭಾವಿ ವ್ಯಕ್ತಿಯ ಸಹಾಯದಿಂದ ಪ್ರಮುಖ ಸಮಸ್ಯೆಯೊಂದು ಬಗೆಹರಿಯುವ ಕಾರಣ ಮನಸ್ಸಿಗೆ ಶಾಂತಿ ಲಭಿಸಲಿದೆ.
ಕರ್ಕಾಟಕ: ಈ ವಾರದಲ್ಲಿ ಕರ್ಕಾಟಕ ರಾಶಿಯಲ್ಲಿ ಹುಟ್ಟಿದವರಿಗೆ ಮಿಶ್ರ ಫಲ ದೊರೆಯಲಿದೆ. ವಾರದ ಆರಂಭದಲ್ಲಿ ಕೆಲಸದ ಸ್ಥಳದಲ್ಲಿ ಅಡ್ಡಿ ಆತಂಕಗಳು ಎದುರಾಗುವ ಕಾರಣ ನಿಮ್ಮ ಮನಸ್ಸಿಗೆ ಮಂಕು ಕವಿಯಬಹುದು. ಎಚ್ಚರಿಕೆಯಿಂದ ವಾಹನ ಚಲಾಯಿಸಿ. ಏಕೆಂದರೆ ದೇಹಕ್ಕೆ ನೋವು ಅಥವಾ ಗಾಯ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಉದ್ಯೋಗದಲ್ಲಿರುವವರ ಆದಾಯದ ಮೂಲಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ವ್ಯವಹಾರದಲ್ಲಿರುವವರು ತಮ್ಮ ಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ. ವಾರದ ಮಧ್ಯದಲ್ಲಿ, ಸಾಕಷ್ಟು ಕೆಲಸ ಇರಬಹುದು. ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ವೃತ್ತಿ ಮತ್ತು ಕೌಟುಂಬಿಕ ಬದುಕನ್ನು ನಿಭಾಯಿಸುವಲ್ಲಿ ಸಮಸ್ಯೆ ಎದುರಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಬೇಕಾದರೆ ನಿಮ್ಮ ಜೀವನ ಸಂಗಾತಿಗಾಗಿ ಸಮಯವನ್ನು ಮೀಸಲಿಡಿ. ಪ್ರಣಯ ಸಂಬಂಧದ ವಿಚಾರದಲ್ಲಿ ಈ ವಾರವು ಅಷ್ಟೊಂದು ಅನುಕೂಲಕರವಾಗಿಲ್ಲ. ಈ ವಾರದಲ್ಲಿ ನಿಮ್ಮ ಪ್ರೇಮ ಸಂಬಂಧದ ಕುರಿತು ಕೊಚ್ಚಿಕೊಳ್ಳಬೇಡಿ ಅಥವಾ ಬಹಿರಂಗವಾಗಿ ಪ್ರದರ್ಶಿಸಬೇಡಿ. ಯಾವುದೇ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಿ. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬಹುದು.
ಸಿಂಹ:ಸಿಂಹ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರದಲ್ಲಿ ಅದೃಷ್ಟದ ಬಲ ದೊರೆಯಲಿದೆ. ವಾರದ ಆರಂಭದಲ್ಲಿ, ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೆ ಸಾಕಷ್ಟು ಅದೃಷ್ಟವು ದೊರೆಯಲಿದೆ. ನೀವು ದೀರ್ಘ ಕಾಲದಿಂದ ಭೂಮಿ ಅಥವಾ ಆಸ್ತಿಯನ್ನು ಮಾರಲು ಇಚ್ಛಿಸುತ್ತಿದ್ದರೆ, ಈ ವಾರದಲ್ಲಿ ನಿಮ್ಮ ಕನಸು ನನಸಾಗಲಿದೆ. ಈ ಅವಧಿಯಲ್ಲಿ ಭಡ್ತಿ ಅಥವಾ ಆರ್ಥಿಕ ಲಾಭಕ್ಕಾಗಿ ಅವಕಾಶ ದೊರೆಯಬಹುದು. ಉನ್ನತಾಧಿಕಾರಿಗಳ ಜೊತೆಗಿನ ಸಂಪರ್ಕವು ಹೆಚ್ಚಲಿದೆ. ಆದಾಯದ ಹೊಸ ಮೂಲವು ಸೃಷ್ಟಿಯಾಗಲಿದೆ. ಅಲ್ಲದೆ ಸಂಪತ್ತಿನಲ್ಲಿ ವೃದ್ಧಿಯಾಗಲಿದೆ. ರಾಜಕಾರಣಿಗಳಿಗೆ ಉನ್ನತ ಸ್ಥಾನ ಲಭಿಸುವ ಸಾಧ್ಯತೆ ಇದೆ. ವಾರದ ಉತ್ತರಾರ್ಧದಲ್ಲಿ ನೀವು ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಲಿದ್ದು, ಆರ್ಥಿಕ ಯಶಸ್ಸು ಮತ್ತು ಪ್ರಗತಿ ಗಳಿಸಲು ಅವರಿಂದ ನಿಮಗೆ ನೆರವು ದೊರೆಯಲಿದೆ. ಆರೋಗ್ಯವು ಎಂದಿನಂತೆ ಇರಲಿದೆ. ನಿಮ್ಮ ಮನೆಯಲ್ಲಿ ಹಿರಿಯ ವ್ಯಕ್ತಿಯೊಬ್ಬರ ಆರೋಗ್ಯದ ಕುರಿತ ಚಿಂತೆ ನಿಮ್ಮನ್ನು ಕಾಡಬಹುದು. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧದಿಂದ ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆ ಇದೆ.
ಕನ್ಯಾ:ಈ ವಾರದಲ್ಲಿ, ಕನ್ಯಾ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು ತಮ್ಮ ಸಹೋದ್ಯೋಗಿಗಳ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಬೇಖು. ವೃತ್ತಿ ಅಥವಾ ವಾಣಿಜ್ಯ ಕಾರ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ನಿಮ್ಮಲ್ಲಿ ಖಚಿತತೆ ಇಲ್ಲದೆ ಹೋದಲ್ಲಿ ಗೆಳೆಯರು ಅಥವಾ ಕುಟುಂಬದ ಸದಸ್ಯರ ಸಲಹೆಯನ್ನು ಪಡೆಯಿರಿ ಅಥವಾ ಅಂತಹ ನಿರ್ಧಾರವನ್ನು ಮುಂದೂಡಿ. ಆದಾಯದಲ್ಲಿ ಕುಂಠಿತ ಉಂಟಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ಖರ್ಚುವೆಚ್ಚದಲ್ಲಿ ಹೆಚ್ಚಳ ಉಂಟಾಗಬಹುದು. ಇದರ ಪರಿಣಾಮವಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ ಉಂಟಾಗಬಹುದು. ಈ ವಾರದಲ್ಲಿ ಕನ್ಯಾ ರಾಶಿಯವರ ಆರೋಗ್ಯದಲ್ಲಿ ಕುಸಿತ ಉಂಟಾಗಲಿದೆ. ಋತುಮಾನಕ್ಕೆ ಸಂಬಂಧಿಸಿದ ಬದಲಾವಣೆಗಳು ಅಥವಾ ದೀರ್ಘಕಾಲೀನ ಸಮಸ್ಯೆಯು ಉಂಟಾಗುವ ಕಾರಣ ಅನನುಕೂಲತೆ ಉಂಟಾಗಬಹುದು. ಈ ಹಂತದಲ್ಲಿ ವಿದ್ಯಾರ್ಥಿಗಳ ಗಮನವು ಶಿಕ್ಷಣದಿಂದ ಬೇರೆಡೆಗೆ ವರ್ಗಾವಣೆಯಾಗಬಹುದು. ವ್ಯಾಪಾರೋದ್ಯಮಿಗಳು ಯಾವುದೇ ಹೊಸ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಕಷ್ಟಕರ ಸಂದರ್ಭದಲ್ಲಿ ನಿಮ್ಮ ನೆಚ್ಚಿನ ಸಂಗಾತಿಯು ನಿಮ್ಮ ಜೊತೆಗೆ ಇರಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ.