ಮೇಷ: ವಾರದ ಆರಂಭದಲ್ಲಿ ನಿಮ್ಮ ಹಣಕಾಸು, ವೃತ್ತಿ, ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಮುಂದೆ ಸಾಗಲು ನಿಮಗೆ ಅದ್ಭುತ ಅವಕಾಶ ಲಭಿಸಲಿದೆ. ನಿಮ್ಮ ಸಮಯ ಮತ್ತು ಶಕ್ತಿಯನ್ನು ಜಾಣ್ಮೆಯಿಂದ ಬಳಸಿದರೆ ನಿಮ್ಮ ಗುರಿಯನ್ನು ಸಾಧಿಸಲಿದ್ದೀರಿ. ನಿಮ್ಮ ಅತ್ಮೀಯ ಗೆಳೆಯರ ಸಹಕಾರದಿಂದ ನಿಮ್ಮ ಎಲ್ಲಾ ಕೆಲಸವನ್ನು ನೀವು ಪೂರ್ಣಗೊಳಿಸಲಿದ್ದೀರಿ. ನೀವು ರಾಜಕೀಯದಲ್ಲಿದ್ದರೆ, ವಾರದ ಕೊನೆಗೆ ನಿಮಗೆ ದೊಡ್ಡ ಸ್ಥಾನ ಅಥವಾ ಹುದ್ದೆ ಲಭಿಸಲಿದೆ. ವಾರದ ದ್ವಿತೀಯಾರ್ಧದಲ್ಲಿ, ವ್ಯಾಪಾರೋದ್ಯಮಿಗಳು ಉತ್ತಮ ಗಳಿಕೆಯನ್ನು ಮಾಡಲಿದ್ದಾರೆ ಹಾಗೂ ತಮ್ಮ ವ್ಯವಹಾರವನ್ನು ಬೆಳೆಸಲು ಅವರಿಗೆ ಅವಕಾಶ ಲಭಿಸಲಿದೆ. ಇದೇ ವೇಳೆ ಉದ್ಯೋಗದಲ್ಲಿರುವ ಜನರಿಗೆ ಹೆಚ್ಚಿನ ಗಳಿಕೆಯನ್ನು ಮಾಡಲು ಅವಕಾಶ ಲಭಿಸಲಿದೆ. ಕಠಿಣ ಪರೀಕ್ಷೆಗಳಿಗಾಗಿ ಅಧ್ಯಯನ ನಡೆಸುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ. ಪ್ರೇಮದಲ್ಲಿ ತೀವ್ರತೆ ಇರಲಿದ್ದು, ವೈವಾಹಿಕ ಬದುಕಿನಲ್ಲಿ ಸಾಕಷ್ಟು ಸಂತಸ ನೆಲೆಸಲಿದೆ. ಗೆಳೆಯರೊಂದಿಗೆ ಸಮಯ ಕಳೆದು ಮೋಜು ಅನುಭವಿಸಲು ಅವಕಾಶ ದೊರೆಯಬಹುದು.
ವೃಷಭ: ಈ ವಾರದಲ್ಲಿ ಮನೆಯಲ್ಲಿ ಹಾಗೂ ಹೊರಗಡೆ ಸ್ವಲ್ಪ ಮೋಜು ಅನುಭವಿಸಲು ಇದು ಸಕಾಲ. ಕೆಲಸದಿಂದ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿರುವ ನಿಮ್ಮ ಸಹೋದ್ಯೋಗಿಗಳ ಹುನ್ನಾರಕ್ಕೆ ನೀವು ಬಲಿಯಾಗಬಹುದು. ನಿಮಗೆ ಇಷ್ಟವಿಲ್ಲದ ಪ್ರಯಾಣವನ್ನು ನೀವು ಕೈಗೊಳ್ಳಬೇಕಾದ ಅನಿವಾರ್ಯತೆ ನಿಮಗೆ ಎದುರಾಗಬಹುದು. ಇದು ನಿಮ್ಮ ಸಮಯ ಮತ್ತು ಹಣವನ್ನು ಹಾಳು ಮಾಡಬಹುದು. ವಾರದ ನಡುವೆ, ಮನೆಯ ದುರಸ್ತಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬಹುದು. ಇದರಿಂದಾಗಿ ನಿಮ್ಮ ಹಣಕಾಸಿನ ಲೆಕ್ಕಾಚಾರಕ್ಕೆ ಧಕ್ಕೆ ಉಂಟಾಗಬಹುದು. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಖರ್ಚುವೆಚ್ಚದ ಮೇಲೆ ನೀವು ಗಮನ ನೀಡಬೇಕು. ಪ್ರೇಮ ಸಂಬಂಧಕ್ಕೆ ಕುರಿತಂತೆ ಪರಿಸ್ಥಿತಿಯು ಸ್ವಲ್ಪ ಸವಾಲಿನಿಂದ ಕೂಡಿರಬಹುದು. ಏನಾದರೂ ತಪ್ಪು ಗ್ರಹಿಕೆಯ ಕಾರಣ ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ಆದರೆ ಯಾರಾದರೂ ಗೆಳತಿಯ ನೆರವಿನಿಂದ ಇದನ್ನು ನೀವು ಬಗೆಹರಿಸಬಹುದು. ವಾರದ ಕೊನೆಗೆ ನಿಮ್ಮ ಸಂಬಂಧವು ಮತ್ತೆ ಹಳಿಯೇರಲಿದೆ. ನಿಮ್ಮ ಜೀವನ ಸಂಗಾತಿಯ ಯೋಗಕ್ಷೇಮದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು.
ಮಿಥುನ: ಈ ವಾರವು ಮಿಥುನ ರಾಶಿಯವರಿಗೆ ಸವಾಲಿನಿಂದ ಕೂಡಿರಲಿದೆ. ಹೀಗಾಗಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಅವರು ಸಾಕಷ್ಟು ಶ್ರಮ ವಹಿಸಬೇಕು. ನಿಮಗೆ ಶೀತ ಅಥವಾ ಬೇರೆ ಯಾವುದಾದರೂ ಗಂಭೀರ ಕಾಯಿಲೆಯು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ನಿಮ್ಮ ಆರೋಗ್ಯಕ್ಕೆ ನೀವು ಗಮನ ನೀಡಬೇಕು. ಉದ್ಯೋಗದಲ್ಲಿರುವವರು, ಹೆಚ್ಚುವರಿ ಕೆಲಸ ಕಾರಣ ಸಾಕಷ್ಟು ದಣಿವನ್ನು ಅನುಭವಿಸಬಹುದು. ವಾರದ ಕೊನೆಗೆ ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಏನಾದರೂ ಶುಭ ಸುದ್ದಿ ಬರಲಿದೆ. ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಅಥವಾ ಗೆಳೆಯರ ಸಂಪೂರ್ಣ ನೆರವು ನಿಮಗೆ ಲಭಿಸಲಿದೆ. ನೀವು ಪ್ರೇಮ ಸಂಬಂಧದಲ್ಲಿದ್ದರೆ, ವೈವಾಹಿಕ ಜೀವನಕ್ಕೆ ಕಾಲಿಡಲು ನಿಮ್ಮ ಕುಟುಂಬವು ನಿಮಗೆ ಸಹಾಯ ಮಾಡಲಿದೆ. ನಿಮ್ಮ ಮಕ್ಕಳ ಕುರಿತು ನಿಮಗೆ ಏನಾದರೂ ಶುಭ ಸುದ್ದಿ ದೊರೆಯಲಿದೆ. ಇದರಿಂದ ಮನೆಯಲ್ಲಿ ಸಂತಸ ನೆಲೆಸಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಒಳ್ಳೆಯ ಆಹಾರವನ್ನು ಸೇವಿಸಲು ಯತ್ನಿಸಿ ಹಾಗೂ ದಿನಚರಿಯನ್ನು ಪಾಲಿಸಿ.
ಕರ್ಕಾಟಕ: ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಾರವು ಸವಾಲಿನಿಂದ ಕೂಡಿದೆ. ಅಲ್ಲದೆ ಹಣದ ಚಲಾವಣೆ ಇಲ್ಲದ ಕಾರಣ ನಿಮ್ಮ ಒತ್ತಡವು ಆವರಿಸಬಹುದು. ಉದ್ಯೋಗದಲ್ಲಿರುವ ಜನರು ಕೆಲಸದ ಸ್ಥಳದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಗಳಿಕೆಗೆ ಪ್ರತಿಯಾಗಿ ನೀವು ಎಷ್ಟು ಖರ್ಚು ಮಾಡುತ್ತೀರಿ ಎಂಬುದನ್ನು ನೀವು ಗಮನಿಸಬಹುದು. ನಿಮ್ಮ ಬಗ್ಗೆ ಕಾಳಜಿ ವಹಿಸಿ ಮತ್ತು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಅನಾರೋಗ್ಯ, ಗಾಯ ಅಥವಾ ಯಾವುದಾದರೂ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ. ಹಳೆಯ ಆರೋಗ್ಯ ಸಮಸ್ಯೆಗಳು ಮತ್ತೆ ಕಾಣಿಸಿಕೊಳ್ಳಬಹುದು. ನಿಮ್ಮ ಪ್ರೇಮ ಜೀವನಕ್ಕೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಿ. ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಿ. ಅಥವಾ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬಹುದು. ಮಕ್ಕಳ ಕುರಿತ ಏನಾದರೂ ವಿಷಯವು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಅದರೆ ಕಠಿಣ ಸಂದರ್ಭದಲ್ಲಿಯೂ ನಿಮ್ಮ ಜೀವನ ಸಂಗಾತಿಯು ನಿಮ್ಮ ನೆರಳಿನಂತೆ ನಿಮ್ಮನ್ನು ಹಿಂಬಾಲಿಸಬಹುದು.
ಸಿಂಹ: ಈ ವಾರದಲ್ಲಿ, ಸಿಂಹ ರಾಶಿಯಲ್ಲಿ ಹುಟ್ಟಿದ ಜನರು ಕೆಲಸದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸಾಕಷ್ಟು ಪ್ರಯತ್ನವನ್ನು ಮಾಡಬೇಕು. ಕಚೇರಿಯಲ್ಲಿ ನಿಮ್ಮ ಕೆಲಸದಲ್ಲಿ ಮೂಗು ತೂರಿಸುವ ಎದುರಾಳಿಗಳ ಕುರಿತು ಜಾಗ್ರತೆ ವಹಿಸಿ. ವಾರದ ನಡುವೆ ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಮಾತುಕತೆಯ ಮೂಲಕ ಸಮಸ್ಯೆಯನ್ನು ಅರಿತುಕೊಂಡು ಬಗೆಹರಿಸಲು ಯತ್ನಿಸಿ. ವಾರದ ಕೊನೆಗೆ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಅದ್ಭುತ ಫಲಿತಾಂಶವನ್ನು ತಂದು ಕೊಡಲಿದೆ. ಅಂದರೆ ಕೆಲವೊಂದು ಲಾಭದಾಯಕ ಅವಕಾಶಗಳು ನಿಮಗೆ ಲಭಿಸಲಿವೆ. ಈ ವಾರದಲ್ಲಿ ನಿಮ್ಮ ಸಂಗಾತಿಯ ಜೊತೆಗೆ ಒಂದಷ್ಟು ಭಿನ್ನಾಭಿಪ್ರಾಯಗಳು ತಲೆದೋರಬಹುದು. ಅದರೆ ವಾದ ಮಾಡುವ ಬದಲಿಗೆ ಪರಸ್ಪರ ಮಾತುಕತೆಯ ಮೂಲಕ ಇದನ್ನು ಬಗೆಹರಿಸಲು ಯತ್ನಿಸಿ. ಇಲ್ಲದಿದ್ದರೆ ನಿಮ್ಮ ಸಂಬಂಧಕ್ಕೆ ಧಕ್ಕೆಯುಂಟಾಗಬಹುದು. ಈ ಸಂಬಂಧವನ್ನು ರೂಪಿಸಲು ನೀವು ಪಟ್ಟ ಶ್ರಮವು ವ್ಯರ್ಥವಾಗಬಹುದು. ನಿಮ್ಮ ಕೌಟುಂಬಿಕ ಜೀವನದಲ್ಲಿ ಸಂತಸವನ್ನು ಕಾಪಾಡಬೇಕಾದರೆ ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ.
ಕನ್ಯಾ: ಈ ವಾರದಲ್ಲಿ ನಿಮ್ಮ ಮನೆ, ಕುಟುಂಬ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅವಸರ ಮಾಡಬೇಡಿ. ಕೆಲಸಕ್ಕಾಗಿ ನೀವು ಪ್ರಯಾಣಿಸಬೇಕಾದೀತು. ಹೀಗಾಗಿ ನೀವು ಮನೆಯಿಂದ ದೂರವಿರುವಾಗ ನಿಮ್ಮ ಆರೋಗ್ಯ ಮತ್ತು ಆಹಾರದ ಕುರಿತು ಗಮನ ನೀಡುವುದು ಅಗತ್ಯ. ಹಳೆಯ ಆಸ್ತಿಯ ಕುರಿತು ಕೌಟುಂಬಿಕ ಕಲಹ ಉಂಟಾಗಬಹುದು. ಹೀಗಾಗಿ ಪರಿಸ್ಥಿತಿ ಬಿಗಡಾಯಿಸದಂತೆ ನೋಡಿಕೊಳ್ಳಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಸವಾಲಿನಿಂದ ಕೂಡಿರಲಿದೆ. ಉದ್ಯೋಗದಲ್ಲಿರುವ ಜನರು ನಿರೀಕ್ಷಿತ ಫಲವನ್ನು ಪಡೆಯಬೇಕಾದರೆ ಕಠಿಣ ಶ್ರಮವನ್ನು ಪಡಬೇಕು. ಗಳಿಕೆಗಿಂತ ಹೆಚ್ಚಿನ ಹಣವನ್ನು ನೀವು ಖರ್ಚು ಮಾಡಲಿದ್ದು, ಇದರಿಂದಾಗಿ ನೀವು ಒತ್ತಡಕ್ಕೆ ಒಳಗಾಗಬಹುದು. ಪ್ರೇಮ ಸಂಬಂಧದಲ್ಲಿ ಮುಕ್ತತೆಯನ್ನು ಕಾಪಾಡಿ ಮತ್ತು ನಿಮ್ಮ ಜೀವನ ಸಂಗಾತಿಯೊಂದಿಗೆ ಜಾಣ್ಮೆಯಿಂದ ವರ್ತಿಸಿ. ಇಲ್ಲದಿದ್ದರೆ ನೀವು ಸಮಸ್ಯೆಗೆ ಒಳಗಾಗಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯ ಅಥವಾ ನಿಮ್ಮ ಮಕ್ಕಳ ಭವಿಷ್ಯದ ಕುರಿತ ಚಿಂತೆಯು ನಿಮ್ಮನ್ನು ಕಾಡಬಹುದು. ಆದರೆ ಈ ಚಿಂತೆಯು ನಿಮ್ಮನ್ನು ಆವರಿಸದಂತೆ ನೋಡಿಕೊಳ್ಳಿ. ಅವರಿಗಾಗಿ ನಿಮ್ಮನ್ನು ಮುಡಿಪಾಗಿಡಿ ಮತ್ತು ಅವರ ಕುರಿತು ಸಾಕಷ್ಟು ಕಾಳಜಿ ವಹಿಸಿ.