ಮೇಷ :ಅವಿವಾಹಿತರಿಗೆ ಈ ವಾರವು ಒಳ್ಳೆಯದು. ಅವರಿಗೆ ಮದುವೆಯ ಪ್ರಸ್ತಾವನೆ ಬರಬಹುದು. ಪ್ರೇಮ ಜೀವನವು ಎಂದಿನಂತೆಯೇ ಮುಂದುವರಿಯಲಿದೆ. ಇತರರೊಂದಿಗೆ ಉಂಟಾಗುವ ಸಂಘರ್ಷದ ಕಾರಣ ವಿವಾಹಿತರು ಮನೆಯಲ್ಲಿ ಸವಾಲುಗಳನ್ನು ಎದುರಿಸಬಹುದು. ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ. ಆದರೆ ಖರ್ಚುವೆಚ್ಚ ಮಾಡುವಾಗ ಬಜೆಟ್ ಅನ್ನು ಪಾಲಿಸುವುದು ಒಳ್ಳೆಯದು. ನೀವು ಎಲ್ಲಾದರೂ ಹೂಡಿಕೆ ಮಾಡಿದ್ದರೆ ಅದಕ್ಕೆ ತಕ್ಕುದಾದ ಪ್ರತಿಫಲ ದೊರೆಯಲಿದೆ. ಉದ್ಯೋಗದಲ್ಲಿರುವ ವ್ಯಕ್ತಿಗಳು ಹಿರಿಯ ಅಧಿಕಾರಿಗಳಿಂದ ಧನಾತ್ಮಕ ಸುದ್ದಿಯನ್ನು ಪಡೆಯಲಿದ್ದಾರೆ. ಉದ್ಯಮಿಗಳಿಗೆ ವ್ಯವಹಾರದಲ್ಲಿ ಹೊಸ ಸಂಪರ್ಕಗಳು ದೊರೆಯಲಿವೆ. ಉನ್ನತ ಶಿಕ್ಷಣವನ್ನು ಮುಂದುವರಿಸಲು ಈ ಅವಧಿಯು ಸೂಕ್ತ ಸಮಯವಾಗಿದ್ದು, ನಿಮ್ಮ ಅಧ್ಯಯನದ ಮೇಲೆ ಹೆಚ್ಚಿನ ಗಮನ ಹರಿಸುತ್ತಾ ನಿಮ್ಮ ನಿರೀಕ್ಷೆಯ ಯಶಸ್ಸನ್ನು ನೀವು ಗಳಿಸಲಿದ್ದೀರಿ. ನಿಮ್ಮ ಕುಟುಂಬದ ಸದಸ್ಯರಿಂದ ನಿಮಗೆ ಉತ್ತೇಜನ ದೊರೆಯಲಿದ್ದು, ಇದರಿಂದ ನಿಮ್ಮ ವೃತ್ತಿಪರ ಕಾರ್ಯಗಳಲ್ಲಿ ಸಹಕಾರ ದೊರೆಯಲಿದೆ. ಗೆಳೆಯರೊಂದಿಗೆ ಹೊರಗೆ ಹೋಗುವುದು ಒಳ್ಳೆಯದು. ಅದರೆ ಹೆಚ್ಚಿನ ಸಾಲವನ್ನು ಮಾಡಬೇಡಿ.
ವೃಷಭ :ವೃಷಭ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ಪ್ರೇಮ ಸಂಬಂಧವು ಪ್ರೀತಿ ಮತ್ತು ವಾತ್ಸಲ್ಯದಿಂದ ತುಂಬಿರಲಿದ್ದು, ನಿಮ್ಮ ಸಂಗಾತಿಯ ಜೊತೆಗೆ ಸಮಯವನ್ನು ಚೆನ್ನಾಗಿ ಕಳೆಯಲಿದ್ದೀರಿ. ಈ ಸಂಬಂಧದಲ್ಲಿ ಪರಸ್ಪರ ಸಂತಸ ಮತ್ತು ಗೌರವ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತೃಪ್ತಿ ಮತ್ತು ನೆಮ್ಮದಿ ನೆಲೆಸಲಿದ್ದು, ಕುಟುಂಬದ ಸದಸ್ಯರ ನೆರವು ಸಹ ದೊರೆಯಲಿದೆ. ಕುಟುಂಬದ ಜೊತೆಗೆ ತೊಡಗಿಸಿಕೊಂಡರೆ ಹಾಗೂ ಅವರೊಂದಿಗೆ ಹಣಕಾಸಿನ ವಿವರಗಳನ್ನು ಚರ್ಚಿಸಿಕೊಂಡರೆ ಹಣದ ಉಳಿತಾಯದಲ್ಲಿ ಅಗತ್ಯ ಒಳನೋಟ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನೀವು ವ್ಯವಹಾರದಲ್ಲಿ ಹೊಸ ಸಂಪರ್ಕಗಳನ್ನು ಸಾಧಿಸುವ ಸಾಧ್ಯತೆ ಇದೆ. ಉದ್ಯೋಗದಲ್ಲಿರುವವರಿಗೆ ಪ್ರಗತಿ ಸಾಧಿಸಲು ಅವಕಾಶ ಲಭಿಸಲಿದ್ದು, ಅವರ ಒಟ್ಟಾರೆ ಯೋಗಕ್ಷೇಮ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಯತ್ತ ಗಮನ ನೀಡಬೇಕು. ಏಕೆಂದರೆ ಗೆಳೆಯರಿಂದಾಗಿ ಅವರ ಗಮನಭಂಗ ಉಂಟಾಗಬಹುದು. ನಿಮ್ಮ ಒಡಹುಟ್ಟಿದವರ ಶಿಕ್ಷಣಕ್ಕಾಗಿ ನೀವು ಹಣವನ್ನು ನೀಡಲಿದ್ದು, ಮನೆಯ ದುರಸ್ತಿ ಮತ್ತು ನಿರ್ವಹಣೆಗಾಗಿಯೂ ವೆಚ್ಚ ಮಾಡಲಿದ್ದೀರಿ.
ಮಿಥುನ :ಈ ವಾರದಲ್ಲಿ ವಿವಾಹದ ಮೂಲಕ ನೀವು ಸಂಗಾತಿಯನ್ನು ಪಡೆಯುವ ಸಾದ್ಯತೆ ಇದ್ದು, ಪ್ರಣಯಭರಿತ ಸಂಬಂಧಕ್ಕೆ ನೀವು ಕಾಲಿಡುವ ಸಾಧ್ಯತೆ ಇದೆ. ಸೂಕ್ತ ಜೀವನ ಸಂಗಾತಿಯನ್ನು ಹುಡುಕಲು ಇದು ಸಕಾಲವಾಗಿದ್ದು, ಬದುಕಿನಲ್ಲಿ ಸಂತಸ ಮತ್ತು ಯಶಸ್ಸು ನೆಲೆಸಲಿದೆ. ವಿವಾಹಿತ ಜೋಡಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಸಂತೃಪ್ತಿ ಅನುಭವಿಸಲಿದ್ದು, ಸಾಕಷ್ಟು ಆರ್ಥಿಕ ಲಾಭದ ಸೂಚನೆಯನ್ನು ಸಹ ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ. ಆದರೆ ನಿಮ್ಮ ವೆಚ್ಚವನ್ನು ನೀವು ನಿಭಾಯಿಸಬೇಕು ಮತ್ತು ಬಜೆಟ್ ಅನ್ನು ಎಚ್ಚರಿಕೆಯಿಂದ ಯೋಜಿಸಬೇಕು. ನಿಮ್ಮ ಆರ್ಥಿಕ ಸ್ಥಿರತೆಯ ಮೇಲೆ ಗಮನ ಹರಿಸಬೇಕಾದ ಅಗತ್ಯವಿದೆ. ಈ ಅವಧಿಯು ಮುಖ್ಯವಾಗಿ ವಿದ್ಯಾರ್ಥಿಗಳ ಪಾಲಿಗೆ ಅನುಕೂಲಕರವಾಗಿದೆ. ಅಧ್ಯಯನಕ್ಕೆ ನೀವು ಹೆಚ್ಚಿನ ಗಮನ ನೀಡಲಿದ್ದು, ನಿಮ್ಮ ಬದುಕಿನಲ್ಲಿ ಅದ್ಭುತ ಸಾಧನೆ ಮಾಡಲಿದ್ದೀರಿ. ಉನ್ನತ ಶಿಕ್ಷಣ ಮುಂದುವರಿಸಲು ಇದು ಸಕಾಲವಾಗಿದ್ದು, ನಿಮ್ಮ ಆಯ್ಕೆಯ ವಿಷಯಗಳನ್ನು ಆರಿಸಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಗಮನ ನೀಡಬೇಕು. ಈಗ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಯಿಂದ ನಿಮಗೆ ಮುಕ್ತಿ ದೊರೆಯಲಿದೆ. ನಿಮ್ಮ ಪೋಷಕರ ನೆರವು ನಿಮಗೆ ಲಭಿಸಲಿದ್ದು, ನಿಮ್ಮ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡಲು ಅವರು ನಿಮ್ಮನ್ನು ಉತ್ತೇಜಿಸಲಿದ್ದಾರೆ.
ಕರ್ಕಾಟಕ :ಈ ವಾರದಲ್ಲಿ ಏಕಾಂತದ ಕ್ಷಣಗಳನ್ನು ಹಾಗೂ ನಿಮ್ಮ ಪ್ರೇಮಿಯೊಂದಿಗೆ ಅನುರಾಗದ ಕ್ಷಣಗಳನ್ನು ಕಳೆಯಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನಾ ಸ್ಥಳಕ್ಕೆ ಭೇಟಿ ನೀಡುವುದನ್ನು ನೀವು ಪರಿಗಣಿಸಲಿದ್ದು, ಇದರಿಂದ ನಿಮಗೆ ಆತ್ಮತೃಪ್ತಿ ದೊರೆಯಲಿದೆ ಮಾತ್ರವಲ್ಲದೆ ಕುಟುಂಬದ ಸದಸ್ಯರೊಂದಿಗೆ ಸಂಬಂಧವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಪ್ರೇಮ ಸಂಬಂಧಕ್ಕೆ ಸಂಬಂಧಿಸಿದಂತೆ ಈ ವಾರವು ತೃಪ್ತಿದಾಯಕವಾಗಿದ್ದು, ನಿಮ್ಮಿಬ್ಬರ ನಡುವಿನ ಅನುರಾಗವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ಸಂಪತ್ತನ್ನು ಗಳಿಸಲು ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನಿಮ್ಮ ಬದ್ಧತೆಗಳನ್ನು ಈಡೇರಿಸಲು ನಿಮಗೆ ಅವಕಾಶ ಲಭಿಸಲಿದೆ. ಆದರೆ ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ಒಂದಷ್ಟು ಸವಾಲುಗಳು ಎದುರಾಗಬಹುದು. ಹೀಗಾಗಿ ವೃತ್ತಿಪರ ಕೆಲಸಗಳಲ್ಲಿ ಸಮರ್ಪಣಾಭಾವದ ಅಗತ್ಯತೆ ಕಂಡುಬರಬಹುದು. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸುವ ಕ್ಷಣವು ಎದುರಾಗಿದೆ. ನಿಮ್ಮ ಆಯ್ಕೆಯ ಅಧ್ಯಯನ ಕ್ಷೇತ್ರವನ್ನು ಆರಿಸಿಕೊಳ್ಳುವ ಅವಕಾಶವು ನಿಮಗೆ ಲಭಿಸಲಿದ್ದು, ಹೊಸ ಸಂಗಾತಿಗಳನ್ನು ಪಡೆಯುವುದರಿಂದ ನಿಮ್ಮ ಶೈಕ್ಷಣಿಕ ಪ್ರಯಾಣದಲ್ಲಿ ಪ್ರಗತಿ ಉಂಟಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯಕ್ಕೆ ಗಮನ ನೀಡಿದರೆ ಒಳ್ಳೆಯದು.
ಸಿಂಹ :ಈ ವಾರದಲ್ಲಿ ವಿವಾಹಿತರ ಬದುಕಿನಲ್ಲಿ ಸಂತಸ ಮತ್ತು ಪರಮಾನಂದದ ಸುಖ ಲಭಿಸಲಿದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಕಳೆಯಲು ಅವಕಾಶ ಲಭಿಸಲಿದೆ. ಇದರಿಂದ ನಿಮ್ಮ ಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಾಗಲಿದೆ. ಆದರೆ ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡುವುದು ಒಳ್ಳೆಯದು. ಯಾವುದೇ ಆರ್ಥಿಕ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಪರ್ಯಾಲೋಚನೆ ನಡೆಸಿ. ಏಕೆಂದರೆ ಇದು ನಿಮ್ಮ ವೃತ್ತಿಪರ ಬದುಕಿನ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರವು ಅನುಕೂಲಕರವಾಗಿದೆ. ಕೆಲಸದ ಸ್ಥಳದಲ್ಲಿ ವಿವಿಧ ಬದಲಾವಣೆಗಳು ಉಂಟಾಗುವ ಸಾಧ್ಯತೆ ಇದೆ. ಅಲ್ಪಕಾಲೀನ ಮತ್ತು ದೀರ್ಘಕಾಲೀನ ವಿಹಾರಕ್ಕೆ ಹೋಗುವ ಅವಕಾಶಗಳಿದ್ದು, ವ್ಯವಹಾರ ಪಾಲುದಾರರೊಂದಿಗಿನ ನಿಮ್ಮ ಸಂಬಂಧವು ಗಟ್ಟಿಗೊಳ್ಳಲಿದೆ. ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸವನ್ನು ತೋರದೆ ತಮ್ಮ ಶೈಕ್ಷಣಿಕ ಕಾರ್ಯವನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಈ ವಾರದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ನಿಯಮಿತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಹಾಗೂ ಆರೋಗ್ಯದಾಯಕ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ಅಲ್ಲದೆ ತಾಯಿಯೊಂದಿಗೆ ಸಮಯವನ್ನು ಕಳೆದು ಅವರಿಗೆ ಅಗತ್ಯ ಗೌರವವನ್ನು ನೀಡುವುದು ಒಳ್ಳೆಯದು.
ಕನ್ಯಾ :ಕನ್ಯಾ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಅನುಭವಿಸಲಿದ್ದೀರಿ. ಈ ಬದುಕನ್ನು ಆನಂದಿಸಲು ನಿಮಗೆ ಸಾಧ್ಯವಾಗಲಿದೆ. ಆದರೆ ನಿಮ್ಮ ಜೀವನ ಸಂಗಾತಿಯ ಆರೋಗ್ಯಕ್ಕೆ ನೀವು ಗಮನ ನೀಡಬೇಕು. ಏಕೆಂದರೆ ಅವರ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಪ್ರೇಮ ಸಂಬಂಧವು ಎಂದಿನಂತೆ ಮುಂದುವರಿಯಲಿದ್ದು, ಹೆಚ್ಚೇನೂ ವಿಶೇಷತೆ ಕಾಣಿಸಿಕೊಳ್ಳದು. ವ್ಯವಹಾರದಲ್ಲಿರುವ ಜನರು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳು ಒಳ್ಳೆಯ ಉದ್ಯೋಗವನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇದ್ದು, ನಿಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ. ಸ್ಪರ್ಧೆಯಲ್ಲಿ ಈ ವಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದ್ದು, ರಾಜಕೀಯದಲ್ಲೂ ನಿಮಗೆ ಯಶಸ್ಸು ಲಭಿಸಲಿದೆ. ನಿಮ್ಮ ಗಮನಭಂಗ ಉಂಟಾಗದಂತೆ ನೋಡಿಕೊಳ್ಳಿ. ಸಹೋದರ ಮತ್ತು ಸಹೋದರಿಯ ನಡುವಿನ ಕಲಹವು ಕೊನೆಗೊಳ್ಳಲಿದೆ. ಕೆಟ್ಟವರ ಸಹವಾಸದಿಂದ ನೀವು ಸಮಸ್ಯೆಯನ್ನು ಎದುರಿಸಬಹುದು. ಆದರೆ ನೀವು ಪೋಷಕರ ಇಚ್ಛೆಯನ್ನು ಈಡೇರಿಸಲಿದ್ದೀರಿ. ಮಕ್ಕಳೊಂದಿಗೆ ನೀವು ಉದ್ಯಾನವನ ಅಥವಾ ಪಿಕ್ನಿಕ್ ಗೆ ಹೋಗುವುದನ್ನು ಆನಂದಿಸಬಹುದು.