ಕರ್ನಾಟಕ

karnataka

ETV Bharat / spiritual

ಭವಿಷ್ಯ: ವಾರದ ಆರಂಭದಲ್ಲಿ ಹೂಡಿಕೆಯಲ್ಲಿ ಭಾರೀ ಯಶಸ್ಸು; ಅಂತ್ಯದಲ್ಲಿ ಕೌಟುಂಬಿಕ ಸಂಘರ್ಷ - Weekly Horoscope - WEEKLY HOROSCOPE

ಈ ವಾರದ ರಾಶಿ ಭವಿಷ್ಯ ಹೀಗಿದೆ..

Weekly Horoscope
ವಾರದ ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Jun 9, 2024, 6:50 AM IST

ಮೇಷ :ಈ ವಾರದಲ್ಲಿ ನಿಮ್ಮ ಮಾತಿನ ಮೂಲಕ ಇತರರಿಂದ ನಿಮ್ಮ ಕೆಲಸವನ್ನು ಮಾಡಿಸಲು ನಿಮಗೆ ಸಾಧ್ಯವಾಗಲಿದೆ. ನೀವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ನಿಮ್ಮ ಕುಟುಂಬವು ನಿಮ್ಮನ್ನು ಬೆಂಬಲಿಸಲಿದೆ. ಗೊತ್ತುಗುರಿಯಿಲ್ಲದೆ ಕೆಲಸ ಹುಡುಕುತ್ತಿರುವವರು ಈ ವಾರದಲ್ಲಿ ಅಂತಿಮವಾಗಿ ಸೂಕ್ತ ಅವಕಾಶವನ್ನು ಪಡೆಯಲಿದ್ದಾರೆ. ವಿದೇಶದಲ್ಲಿ ಕೆಲಸ ಮಾಡುವುದರಿಂದ ಅನಿರೀಕ್ಷಿತ ಲಾಭ ದೊರೆಯಲಿದೆ. ವಾರದ ದ್ವಿತೀಯಾರ್ಧದಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸುದ್ದಿ ದೊರೆಯಲಿದ್ದು, ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಲಾಭದಾಯಕ ಯೋಜನೆಗಳನ್ನು ರೂಪಿಸುವ ಸಾಧ್ಯತೆ ಇದೆ. ನಿಮ್ಮ ಪ್ರಣಯ ಸಂಬಂಧಕ್ಕೆ ಕುರಿತಂತೆ ಈ ವಾರವು ಅದೃಷ್ಟದಿಂದ ಕೂಡಿರಲಿದೆ. ಯಾರೊಂದಿಗಾದರೂ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು ನೀವು ಇಚ್ಛಿಸುವುದಾದರೆ ಯಶಸ್ಸು ದೊರೆಯಲಿದೆ. ಈಗಾಗಲೇ ಪ್ರಣಯ ಸಂಬಂಧದಲ್ಲಿರುವ ವ್ಯಕ್ತಿಗಳು ತಮ್ಮ ಸಮಯವನ್ನು ಆನಂದಿಸಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಾಮರಸ್ಯ ಮತ್ತು ಪ್ರೀತಿ ನೆಲೆಸಲಿದೆ. ಆರೋಗ್ಯದ ವಿಚಾರದಲ್ಲಿ ಎಲ್ಲವೂ ಸುಗಮವಾಗಿರಲಿದೆ.

ವೃಷಭ :ಈ ವಾರದಲ್ಲಿ ನಿಮ್ಮ ಪ್ರಯತ್ನಗಳಿಗೆ ಗೌರವ ದೊರೆಯಲಿದೆ. ಹಿರಿಯರು ಹಾಗೂ ಕಿರಿಯರು ನಿಮಗೆ ಸಾಕಷ್ಟು ನೆರವು ಒದಗಿಸಲಿದ್ದಾರೆ. ವಾರದ ನಡುವೆ ಪ್ರಯಾಣ ಮತ್ತು ಐಷಾರಾಮಿ ವಸ್ತುಗಳ ಖರೀದಿಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡಲಿದೆ. ವಾರದ ಉತ್ತರಾರ್ಧದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಾಕಷ್ಟು ಪರಿಶೀಲನೆ ನಡೆಸಿ. ಈ ಅವಧಿಯಲ್ಲಿ ಭೂಮಿ, ಕಟ್ಟಡ ಅಥವಾ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿಚಾರಗಳು ನಿಮಗೆ ಸಾಕಷ್ಟು ತೊಂದರೆ ನೀಡಬಹುದು. ಈ ಅವಧಿಯಲ್ಲಿ ವ್ಯವಹಾರದಲ್ಲಿರುವವರು ಹಣದ ವಿನಿಮಯದ ವಿಚಾರದಲ್ಲಿ ವಿಪರೀತ ಎಚ್ಚರಿಕೆ ವಹಿಸಬೇಕು. ಯಾವುದೇ ಯೋಜನೆಯನ್ನು ಹೂಡಿಕೆ ಮಾಡುವ ಯೋಚನೆ ಇದ್ದಲ್ಲಿ, ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಜಾಗರೂಕತೆಯಿಂದ ಓದಿರಿ. ನಿಮ್ಮ ಪ್ರೇಮಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಹೆಚ್ಚಿನ ಅವಕಾಶ ದೊರೆಯಲಿದ್ದು, ಪ್ರೇಮ ಸಂಬಂಧವು ಇನ್ನಷ್ಟು ಗಟ್ಟಿಯಾಗಿ ಬೆಳೆಯಲಿದೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ಮಿಥುನ :ನಿಮ್ಮ ವೃತ್ತಿಪರ ಅಥವಾ ವ್ಯಾವಹಾರಿಕ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಈ ವಾರದಲ್ಲಿ ನೀವು ದೂರದ ಅಥವಾ ಹತ್ತಿರದ ಪ್ರಯಾಣವನ್ನು ಮಾಡಬೇಕಾದೀತು. ಉದ್ಯೋಗದಲ್ಲಿರುವವರ ಪಾಲಿಗೆ ಹೆಚ್ಚುವರಿ ಆದಾಯದ ಮೂಲಗಳು ದೊರೆಯಲಿವೆ. ಆದರೆ ಖರ್ಚು ಆದಾಯಕ್ಕಿಂತಲೂ ಹೆಚ್ಚಿರಲಿದೆ. ಈ ವಾರದಲ್ಲಿ ಉದ್ಯೋಗದಲ್ಲಿರುವವರಿಗೆ ಅಥವಾ ಉದ್ಯೋಗದಲ್ಲಿ ಬದಲಾವಣೆಯನ್ನು ಎದುರು ನೋಡುವವರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ನ್ಯಾಯಾಲಕ್ಕೆ ಸಂಬಂಧಿಸಿದ ವಿಚಾರದಲ್ಲಿ ತೀರ್ಪು ನಿಮ್ಮ ಪರವಾಗಿ ಹೊರಬೀಳಲಿದೆ. ಈ ವಾರದಲ್ಲಿ ಪ್ರಣಯ ಸಂಬಂಧದಲ್ಲಿ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಬಹುದು. ನಿಮ್ಮ ಪ್ರಣಯ ಸಂಬಂಧದಲ್ಲಿ ನಿಮ್ಮ ನಡುವೆ ತಪ್ಪು ಗ್ರಹಿಕೆ ಉಂಟಾಗಬಹುದು. ಭಾವನೆಗಳು ಅಥವಾ ಕೋಪವನ್ನು ಆಧರಿಸಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಪರಸ್ಪರ ಹೊಂದಾಣಿಕೆಯಿಂದ ಸಂಘರ್ಷವನ್ನು ಬಗೆಹರಿಸಿ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀವು ಪರಿತಪಿಸಬೇಕಾದೀತು.

ಕರ್ಕಾಟಕ :ನೀವು ಈ ಹಿಂದೆ ಯಾವುದಾದರೂ ಯೋಜನೆ ಅಥವಾ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದ್ದರೆ ಈ ವಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನೀವು ಯಾವುದಾದರೂ ದೊಡ್ಡ ಕಾಮಗಾರಿಗಾಗಿ ಕೆಲಸ ಮಾಡುತ್ತಿದ್ದರೆ ಈ ವಾರವು ನಿಮ್ಮ ಪಾಲಿಗೆ ಯಶಸ್ವಿಯಾಗಲಿದೆ. . ನೀವು ವ್ಯವಹಾರಕ್ಕೆ ಸಂಬಂಧಿಸಿದಂತೆ ನಡೆಸುವ ಪ್ರಯಾಣವು ಪ್ರಗತಿ ಮತ್ತು ಆನಂದವನ್ನು ತರಲಿದೆ. ವಿದೇಶದಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಲು ಬಯಸುವವರಿಗೆ ಯಶಸ್ಸು ದೊರೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಈ ಸಮಯದಲ್ಲಿ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ಪ್ರಣಯ ಸಂಬಂಧದ ವಿಚಾರದಲ್ಲಿ ನೀವು ಈ ವಾರದಲ್ಲಿ ಅದೃಷ್ಟಶಾಲಿ ಎನಿಸಲಿದ್ದೀರಿ. ನಿಮ್ಮ ಕುಟುಂಬದಲ್ಲಿ ವಿವಾಹ ಬಂಧವು ನಿಮ್ಮ ಪ್ರೇಮವನ್ನು ಇಮ್ಮಡಿಗೊಳಿಸಲಿದೆ. ಸಂತಸದಾಯಕ ವೈವಾಹಿಕ ಬದುಕು ಮುಂದುವರಿಯಲಿದೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯು ದೂರದ ಅಥವಾ ಸಮೀಪದ ತಾಣಕ್ಕೆ ಒಟ್ಟಿಗೆ ಪ್ರಯಾಣಿಸಲಿದ್ದೀರಿ. ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಕುಟುಂಬದ ಸದಸ್ಯರು ಪ್ರತಿ ಬಾರಿಯೂ ನಿಮ್ಮ ನೆರವಿಗೆ ಬರಲಿದ್ದಾರೆ.

ಸಿಂಹ :ನಿಮ್ಮ ಕೆಲಸವನ್ನು ನೀವು ಸಕಾಲದಲ್ಲಿ ಮುಂದುವರಿಸಲಿದ್ದೀರಿ. ನಿರೀಕ್ಷಿತ ಭಡ್ತಿ ಅಥವಾ ವರ್ಗಾವಣೆಯ ನಿಮ್ಮ ವಿನಂತಿಗೆ ವಾರದ ಆರಂಭದಲ್ಲಿ ಒಪ್ಪಿಗೆ ಸಿಗಲಿದೆ. ವೃತ್ತಿಪರವಾಗಿ ಮತ್ತು ವಾಣಿಜ್ಯಿಕವಾಗಿ ಬೆಳೆಯಲು ಹೊಸ ಅವಕಾಶಗಳು ನಿಮಗೆ ಲಭಿಸಲಿವೆ. ನಿಮ್ಮ ಕೆಲಸದಲ್ಲಿ ನಿಮಗೆ ಗೆಳೆಯರ ಸಹಕಾರ ಲಭಿಸಲಿದೆ. ನಿಮ್ಮ ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗಿ ನಿಮ್ಮ ಕುಟುಂಬದ ಸದಸ್ಯರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. ಈ ವಾರದ ಉತ್ತರಾರ್ಧದಲ್ಲಿ ಹೆಚ್ಚಿನ ಸಮಯವನ್ನು ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಕಳೆಯಲಿದ್ದೀರಿ. ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಗೌರವ ದೊರೆಯಲಿದೆ. ಪ್ರಣಯ ಸಂಬಂಧದ ವಿಚಾರದಲ್ಲಿ ಈ ವಾರವು ಅದೃಷ್ಟದಿಂದ ಕೂಡಿದೆ. ಈ ವಾರದಲ್ಲಿ ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವೆ ಸಂಘರ್ಷ ಉಂಟಾಗಬಹುದು. ಆದರೆ ಎಲ್ಲಾ ತಪ್ಪು ಗ್ರಹಿಕೆಗಳು ದೂರಗೊಂಡು ಸಂಬಂಧವು ಮರಳಿ ಸಹಜ ಸ್ಥಿತಿಗೆ ಬರಲಿದೆ. ಒಟ್ಟಾರೆಯಾಗಿ ನಿಮ್ಮ ಜೀವನ ಸಂಗಾತಿಯೊಂದಿಗೆ ಸಂತಸದ ಕ್ಷಣಗಳನ್ನು ಕಳೆಯಲು ನಿಮಗೆ ಸಾಕಷ್ಟು ಅವಕಾಶಗಳು ಲಭಿಸಲಿವೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ಕನ್ಯಾ :ವಾರದ ಪೂರ್ವಾರ್ಧವು ನಿಮ್ಮ ಪಾಲಿಗೆ ಸಾಕಷ್ಟು ಅದೃಷ್ಟ ಮತ್ತು ಲಾಭದಿಂದ ಕೂಡಿರಲಿದೆ. ಈ ಅವಧಿಯಲ್ಲಿ ಹಿರಿಯ ಹಾಗೂ ಕಿರಿಯ ಉದ್ಯೋಗಿಗಳಿಂದ ನಿಮಗೆ ಸಾಕಷ್ಟು ನೆರವು ದೊರೆಯಲಿದೆ. ಈ ಎರಡು ಉದ್ದೇಶಗಳಿಗಾಗಿ ಮಾಡಿದ ಪ್ರಯಾಣವು ಫಲದಾಯಕ ಮತ್ತು ಯಶಸ್ವಿ ಎನಿಸಲಿದೆ. ಕೆಲಸದ ಸ್ಥಳದಲ್ಲಿ ಮಾತ್ರವಲ್ಲದೆ ನಿಮ್ಮ ಕುಟುಂಬ, ಮನೆ ಮತ್ತು ಸಮುದಾಯದಿಂದಲೂ ನೀವು ಸಾಕಷ್ಟು ಗೌರವಾದಾರ ಪಡೆಯಲಿದ್ದೀರಿ. ವಾರದ ಉತ್ತರಾರ್ಧದಲ್ಲಿ ಆಧ್ಯಾತ್ಮ ಮತ್ತು ಧರ್ಮದಲ್ಲಿ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಈ ಅವಧಿಯಲ್ಲಿ ತೀರ್ಥಯಾತ್ರೆಗೆ ಹೋಗುವ ಸಂಭವವಿದ್ದು, ಋತುಮಾನಕ್ಕೆ ಸಂಬಂಧಿಸಿದ ಮತ್ತು ದೀರ್ಘಕಾಲೀನ ಕಾಯಿಲೆಯಿಂದಾಗಿ ದೈಹಿಕ ಸಮಸ್ಯೆ ಎದುರಾಗಬಹುದು. ಪ್ರಣಯ ಸಂಬಂಧದ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಪ್ರಣಯ ಸಂಗಾತಿಯೊಂದಿಗೆ ಸಮಯವನ್ನು ಚೆನ್ನಾಗಿ ಆನಂದಿಸಲು ನಿಮಗೆ ಅವಕಾಶ ದೊರೆಯಲಿದೆ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವುದಕ್ಕಾಗಿ ನಿಮ್ಮ ಪ್ರೇಮ ಸಂಗಾತಿಯು ನಿಮಗೆ ಎಲ್ಲಾ ಬೆಂಬಲವನ್ನು ನೀಡಲಿದ್ದಾರೆ. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ತುಲಾ :ಆತ್ಮೀಯ ಗೆಳೆಯರ ಸಹಕಾರದಿಂದ ಈ ವಾರದಲ್ಲಿ ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಅನೇಕ ಅವಕಾಶಗಳು ಲಭಿಸಲಿವೆ. ಆದರೆ ಸಮಯದ ಅಭಾವ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗಬಹುದು. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಲಕ್ಷ್ಯ ಮಾಡಿದರೆ ಆಸ್ಪತ್ರೆಗೆ ದಾಖಲಾಗಬೇಕಾದೀತು. ವಾರದ ನಡುವೆ ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದಂತೆ ನಿಮ್ಮನ್ನು ಸಮಸ್ಯೆಗಳು ಕಾಡಬಹುದು. ಆದರೆ ನಿಮ್ಮ ಸಂಗಾತಿಯು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದು, ಈ ಸಮಸ್ಯೆಯನ್ನು ಬಗೆಹರಿಸುವಾಗ ನಿಮ್ಮ ನೆರಳಾಗಿ ನಿಮ್ಮ ಹಿಂದೆ ನಿಲ್ಲಬಹುದು. ಈ ವಾರದಲ್ಲಿ ಪ್ರಣಯ ಸಂಬಂಧಕ್ಕೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಪ್ರಣಯ ಸಂಬಂಧದ ಕುರಿತು ಕುಟುಂಬದ ಸದಸ್ಯರು ಬೇಸರ ವ್ಯಕ್ತಪಡಿಸಬಹುದು. ನಿಮ್ಮ ಪ್ರೇಮಿಯು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲದಿದ್ದರೆ, ನೀವಾಗಿಯೇ ನಿಮ್ಮ ಕೆಲಸವನ್ನು ಮುಗಿಸಲಿದ್ದೀರಿ. ಇಂತಹ ವಿಚಾರ ಬಂದಾಗ ಎಚ್ಚರಿಕೆ ಮತ್ತು ತಾಳ್ಮೆ ವಹಿಸಿ.

ವೃಶ್ಚಿಕ :ವೃಶ್ಚಿಕ ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಅದೃಷ್ಟದ ಬಲವನ್ನು ಹೊಂದಿರಲಿದ್ದಾರೆ. ಬದುಕಿನ ಸವಾಲುಗಳನ್ನು ಎದುರಿಸಲು ಎದುರಿಸಲು ಮುಂದಾದಾಗ ನಿಮ್ಮ ವಿವೇಚನೆ ಮತ್ತು ಜಾಣ್ಮೆಯನ್ನು ಬಳಸಿ. ಪರೀಕ್ಷೆ ಮತ್ತು ಸ್ಪರ್ಧೆಗಳಿಗಾಗಿ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ವಾರದ ಪೂರ್ವಾರ್ಧದಲ್ಲಿ ಅದೃಷ್ಟದ ಬಲ ದೊರೆಯಲಿದೆ. ಅಧಿಕಾರ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ಉಪಕ್ರಮಗಳಲ್ಲಿ ಕೆಲಸ ಮಾಡುವ ಇಚ್ಛೆಯು ಕೈಗೂಡಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ನಿಮ್ಮ ಎದುರಾಳಿಗಳು ನಿಮ್ಮ ಯೋಜನೆಯನ್ನು ಹಾಳು ಮಾಡಲು ಯತ್ನಿಸಬಹುದು ಅಥವಾ ನಿಮ್ಮ ಹಾದಿಯಲ್ಲಿ ಅಡ್ಡ ಬರಬಹುದು. ಪ್ರಣಯ ಸಂಬಂಧದಲ್ಲಿ ಈ ವಾರದಲ್ಲಿ ಅದೃಷ್ಟವು ನಿಮ್ಮ ಪರವಾಗಿದೆ. ದೊಡ್ಡದಾದ ಉಡುಗೊರೆಯ ಮೂಲಕ ನಿಮ್ಮ ಜೀವನ ಸಂಗಾತಿಯು ನಿಮಗೆ ಅಚ್ಚರಿ ಮೂಡಿಸಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ದೊರೆಯಬಹುದು. ವೈವಾಹಿಕ ಬದುಕಿನಲ್ಲಿ ಸಂತಸವು ಮುಂದುವರಿಯಲಿದೆ.

ಧನು :ಧನು ರಾಶಿಯಲ್ಲಿ ಹುಟ್ಟಿದವರು ಈ ವಾರದಲ್ಲಿ ಅಹಂಕಾರ ಮತ್ತು ಸೋಮಾರಿತನದಿಂದ ದೂರವಿರಬೇಕು. ವಾರದ ಆರಂಭಿಕ ದಿನಗಳು ನಿಮ್ಮ ಪಾಲಿಗೆ ಅತ್ಯುತ್ತಮ. ಈ ಅವಧಿಯಲ್ಲಿ ನೀವು ಕಠಿಣ ಶ್ರಮ ಪಟ್ಟರೆ ಹಾಗೂ ನಿಮ್ಮನ್ನು ನೀವು ಮುಡಿಪಾಗಿಟ್ಟರೆ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ನಿಮ್ಮ ಆಪ್ತ ಮಿತ್ರರು ಮತ್ತು ಕುಟುಂಬದ ಸದಸ್ಯರು ನಿಮ್ಮ ನೆರವಿಗೆ ಬರಲಿದ್ದಾರೆ. ನೀವು ಪರೀಕ್ಷೆ ಅಥವಾ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರೆ, ಈ ನಿಟ್ಟಿನಲ್ಲಿ ಕೆಲವೊಂದು ಉಪಯುಕ್ತ ಜ್ಞಾನವನ್ನು ನೀವು ಸಂಪಾದಿಸಲಿದ್ದೀರಿ. ಆಳವಾದ ಪ್ರೇಮ ಸಂಬಂಧವನ್ನು ಬೆಳೆಸುವುದಕ್ಕಾಗಿ ನಿಮ್ಮ ಪ್ರೇಮಿಯ ಅಗತ್ಯತೆಗಳನ್ನು ನೀವು ಅರಿತುಕೊಳ್ಳಬೇಕು. ವೈವಾಹಿಕ ಬದುಕಿನಲ್ಲಿ ಸಂತಸ ಕಾಣಬೇಕಾದರೆ ವಿಪರೀತ ಚಟುವಟಿಕೆಯ ನಡುವೆಯೂ ನಿಮ್ಮ ಜೀವನ ಸಂಗಾತಿಗಾಗಿ ಸಮಯವನ್ನು ಮೀಸಲಿಡಬೇಕು. ವಾರದ ದ್ವಿತೀಯಾರ್ಧದಲ್ಲಿ ನಿಮ್ಮ ಆರೋಗ್ಯಕ್ಕೆ ಸಾಕಷ್ಟು ಗಮನ ನೀಡಿರಿ ಹಾಗೂ ಸೂಕ್ತ ಆಹಾರಕ್ರಮ ಮತ್ತು ದಿನಚರಿಯನ್ನು ಕಾಪಾಡಿ.

ಮಕರ :ಮಕರ ರಾಶಿಯವರು ಈ ವಾರದಲ್ಲಿ ಸಾಕಷ್ಟು ಚಟುವಟಿಕೆಗಳಿಂದ ಕೂಡಿರಲಿದ್ದಾರೆ. ತಮ್ಮ ಸಂಸ್ಥೆಯ ಬೆಳವಣಿಗೆಯನ್ನು ಎದುರು ನೋಡುತ್ತಿರುವವರ ಕನಸು ನನಸಾಗಲಿದೆ. ಕಮಿಷನ್‌ ಆಧಾರದಲ್ಲಿ ಕೆಲಸ ಮಾಡುವವರಿಗೆ ಈ ವಾರವು ಅದೃಷ್ಟದಿಂದ ಕೂಡಿರಲಿದೆ. ಭೂಮಿ, ಕಟ್ಟಡ ಅಥವಾ ಕಾರನ್ನು ಖರೀದಿಸುವುದಾದರೆ, ಈ ವಾರದಲ್ಲಿ ನಿಮ್ಮ ಕನಸು ನನಸಾಗಲಿದೆ. ಯುವಕರು ಮೋಜಿನಿಂದ ಸಮಯ ಕಳೆಯಲಿದ್ದಾರೆ. ಈ ವಾರದಲ್ಲಿ ವಿಪರೀತ ಉತ್ಸಾಹದಿಂದ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ನೀವು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನೀವು ಪರಿತಪಿಸಬೇಕಾದೀತು. ಪ್ರೇಮ ಬಾಂಧವ್ಯವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಪರಸ್ಪರ ನಂಬಿಕೆಯನ್ನು ಬೆಳೆಸಿಕೊಳ್ಳಬೇಕಾದರೆ ನಿಮ್ಮ ಪ್ರಣಯ ಸಂಗಾತಿಯೊಂದಿಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಿರ್ಲಕ್ಷಿಸಿರಿ. ಮೂರನೇ ವ್ಯಕ್ತಿಯ ನೆರವನ್ನು ಪಡೆಯುವುದಕ್ಕಿಂತ ಪರಸ್ಪರ ಸಮಾಲೋಚನೆ ನಡೆಸಿ ಯಾವುದೇ ಸಮಸ್ಯೆಯನ್ನು ಬಗೆಹರಿಸಿ. ಮದುವೆಯ ನಂತರ ಬದುಕು ಲವಲವಿಕೆಯಿಂದ ಕೂಡಿರಲಿದ್ದು, ನಿಮ್ಮ ಜೀವನ ಸಂಗಾತಿಯು ಯಾವಾಗಲೂ ನಿಮ್ಮ ನೆರವಿಗೆ ಧಾವಿಸಲಿದ್ದಾರೆ.

ಕುಂಭ :ಈ ವಾರದಲ್ಲಿ ನಿಮ್ಮ ಉತ್ತೇಜನ ಮತ್ತು ಸ್ವಯಂಪ್ರೇರಣೆಯ ಮಟ್ಟದಲ್ಲಿ ಬದಲಾವಣೆ ಉಂಟಾಗಲಿದ್ದು, ನಿಮ್ಮ ಕೆಲಸವನ್ನು ಪರಿಣಾಮಕಾರಿಯಾಗಿ ಮತ್ತು ಸಕಾಲದಲ್ಲಿ ಮುಗಿಸಲಿದ್ದೀರಿ. ನಿಮ್ಮ ಪ್ರಯತ್ನದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮಗೆ ಅಧಿಕ ಸಹಕಾರ ನೀಡಲಿದ್ದಾರೆ. ಸರ್ಕಾರಿ ಅಧಿಕಾರಿಗಳು ಮತ್ತು ಅಧಿಕಾರವನ್ನು ಹೊಂದಿರುವವರು ಪ್ರಮುಖ ಜವಾಬ್ದಾರಿಯನ್ನು ಪಡೆಯಲಿದ್ದಾರೆ. ನೀವು ಸಾಕಷ್ಟು ಸಮಯದಿಂದ ಕೆಲಸಕ್ಕಾಗಿ ಎದುರು ನೋಡುತ್ತಿದ್ದರೆ, ಈ ವಾರದಲ್ಲಿ ನಿಮಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ಗಳಿಕೆಯ ವಿಚಾರದಲ್ಲಿ ವ್ಯಾಪಾರೋದ್ಯಮಿಗಳ ಪಾಲಿಗೆ ಈ ವಾರವು ಚೆನ್ನಾಗಿರಲಿದೆ. ಅವರು ಸಾಕಷ್ಟು ಆರ್ಥಿಕ ಗಳಿಕೆಯನ್ನು ಮಾಡಲಿದ್ದಾರೆ. ವಾರದ ಉತ್ತರಾರ್ಧದಲ್ಲಿ ಮನೆಯ ನಿರ್ವಹಣೆ ಅಥವಾ ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ಖರ್ಚಾಗಬಹುದು. ನಿಮ್ಮ ಜೀವನ ಸಂಗಾತಿಯನ್ನು ಈ ವಾರದಲ್ಲಿ ನಿಮಗೆ ಭೇಟಿಯಾಗಲು ಸಾಧ್ಯವಾಗದೆ ಇದ್ದರೆ ನೀವು ಈ ವಾರದಲ್ಲಿ ಒಂದಷ್ಟು ಬೇಸರವನ್ನು ಅನುಭವಿಸಬಹುದು. ಇನ್ನೊಂದೆಡೆ ನಿಮ್ಮ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಗೆಳೆಯರೊಬ್ಬರು ನಿಮ್ಮ ನೆರವಿಗೆ ಬರಲಿದ್ದಾರೆ.

ಮೀನ :ಉದ್ಯೋಗ ಅಥವಾ ವ್ಯವಹಾರದಲ್ಲಿ ಮಾಡುವ ದೊಡ್ಡ ಸಾಧನೆಯು ವಾರದ ಆರಂಭದಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಪಾಲಿಗೆ ಸಂತಸವನ್ನು ತರಲಿದೆ. ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನು ಮಾಡುವುದರಿಂದ ನಿಮ್ಮ ಪ್ರಗತಿ ಮತ್ತು ಆರ್ಥಿಕ ಯಶಸ್ಸಿನಲ್ಲಿ ಗಣನೀಯ ಯಶಸ್ಸನ್ನು ಸಾಧಿಸಲಿದ್ದೀರಿ. ಕಲೆ, ಸಂಗೀತ ಮತ್ತು ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಅದೃಷ್ಟದ ನೆರವು ಒದಗಿಸಲಿದೆ. ನಿಮ್ಮ ವ್ಯವಹಾರವನ್ನು ಬೆಳೆಸುವುದಕ್ಕಾಗಿ ದೀರ್ಘ ಕಾಲದಿಂದ ನೀವು ಕಾದು ಕುಳಿತಿದ್ದರೆ ಈ ನಿಟ್ಟಿನಲ್ಲಿ ಈ ವಾರವು ನಿಮ್ಮ ಪಾಲಿಗೆ ಅದೃಷ್ಟಶಾಲಿ ಎನಿಸಲಿದೆ. ಚಾಲ್ತಿಯಲ್ಲಿರುವ ಪ್ರಕರಣದಲ್ಲಿ ನ್ಯಾಯಾಲಯವು ನಿಮ್ಮ ಪರವಾಗಿ ತೀರ್ಪು ನೀಡುವ ಸಾಧ್ಯತೆ ಇದೆ. ಎಲ್ಲಾ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಹಿರಿಯರು ನಿರ್ಣಯವನ್ನು ನೀಡಲಿದ್ದಾರೆ. ವಾರದ ದ್ವಿತೀಯಾರ್ಧದಲ್ಲಿ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ದೂರದ ಅಥವಾ ಹತ್ತಿರದ ಪ್ರಯಾಣವನ್ನು ಮಾಡಬಹುದು. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲ ದೊರೆಯಲಿದೆ. ನಿಮ್ಮ ಪ್ರೇಮ ಸಂಬಂಧವು ಇನ್ನಷ್ಟು ಆಳವಾಗಿ ಬೆಳೆಯುವುದರಿಂದ ನಿಮ್ಮಿಬ್ಬರ ನಡುವೆ ಪರಸ್ಪರ ನಂಬಿಕೆಯು ಬೆಳೆಯಲಿದೆ.

ABOUT THE AUTHOR

...view details