ಕರ್ನಾಟಕ

karnataka

ETV Bharat / spiritual

ಶುಕ್ರವಾರದ ರಾಶಿ ಭವಿಷ್ಯ: ಇಂದು ನಿಮ್ಮೆಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವ ಸಾಧ್ಯತೆ! ಎಚ್ಚರ ವಹಿಸಿ - FRIDAY HOROSCOPE

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Horoscope
ರಾಶಿ ಭವಿಷ್ಯ (ETV Bharat)

By ETV Bharat Karnataka Team

Published : Jan 31, 2025, 5:36 AM IST

ಪಂಚಾಂಗ:

31-01-2025, ಶುಕ್ರವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ಉತ್ತರಾಯಣ

ಮಾಸ: ಪುಷ್ಯ

ಪಕ್ಷ: ಶುಕ್ಲ

ತಿಥಿ: ದ್ವಿತೀಯಾ

ನಕ್ಷತ್ರ: ಧನಿಷ್ಠ

ಸೂರ್ಯೋದಯ: ಮುಂಜಾನೆ 06:45 ಗಂಟೆಗೆ

ಅಮೃತಕಾಲ: ಬೆಳಗ್ಗೆ 08:11 ರಿಂದ 09:38 ಗಂಟೆ ತನಕ

ದುರ್ಮುಹೂರ್ತಂ: ಬೆಳಗ್ಗೆ 09:09 ರಿಂದ 09:57 ಮತ್ತು ಮಧ್ಯಾಹ್ನ 03:33 ರಿಂದ 04:21 ಗಂಟೆ ವರೆಗೆ

ರಾಹುಕಾಲ: ಬೆಳಗ್ಗೆ 11:05 ರಿಂದ 12:31 ಗಂಟೆ ತನಕ

ಸೂರ್ಯಾಸ್ತ: ಸಂಜೆ 06:17 ಗಂಟೆಗೆ

ರಾಶಿ ಭವಿಷ್ಯ:

ಮೇಷ :ಇಂದು ನೀವು ಪರಿಸರ ಸ್ನೇಹಿ ಕೆಲಸಗಳನ್ನು ಮಾಡುತ್ತೀರಿ. ನೀವು ಗಿಡ ನೆಡಬಹುದು. ನೆರೆಹೊರೆಯನ್ನು ಸ್ವಚ್ಛವಾಗಿರಿಸಲು ಬೀದಿಯಲ್ಲಿನ ಕಸ ತೆಗೆಯಬಹುದು. ಪರಿಸರಕ್ಕೆ ಒಳ್ಳೆಯ ಹೆಚ್ಚು ಚಟುವಟಿಕೆಗಳನ್ನು ಮಾಡಲು ಬಯಸಿದ್ದೀರಿ, ಆದ್ದರಿಂದ ಒಂದು ಸಲಕ್ಕೆ ಒಂದು ಕೆಲಸ ಮಾಡಿ.

ವೃಷಭ :ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಕಾರ್ಯ ಮತ್ತು ಚಟುವಟಿಕೆ ನಿಧಾನಗೊಳ್ಳುತ್ತವೆ. ಭಾವುಕ ಅಥವಾ ಭಾವನಾತ್ಮಕತೆ ಹೊಂದದೇ ಇರಲು ಪ್ರಯತ್ನಿಸಿ, ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ಸುಲಭವಾಗಿ ಮರೆಯದಂತೆ ಮಾಡುತ್ತದೆ.

ಮಿಥುನ :ನೀವು ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಲೋಚಿಸುತ್ತೀರಿ ಮತ್ತು ಈ ವಿಷಯಗಳನ್ನು ಕುಟುಂಬದ ಸದಸ್ಯರೊಂದಿಗೆ ಚರ್ಚಿಸುತ್ತೀರಿ ಹಾಗೂ ನಿಮ್ಮ ಅಭಿಪ್ರಾಯ ಅವರಿಗೆ ಗೊತ್ತಾಗುವಂತೆ ಮಾಡುತ್ತೀರಿ. ಇದಲ್ಲದೆ ನೀವು ನಿಮಗೆ ಹತ್ತಿರವಾದ ಕಾನೂನು, ಶಿಕ್ಷಣ, ಸಾಮಾಜಿಕ ಹೊಣೆಗಾರಿಕೆಗಳು ಮತ್ತು ಸಂಸ್ಕೃತಿಯ ಕುರಿತೂ ಚರ್ಚೆ ಮಾಡುತ್ತೀರಿ.

ಕರ್ಕಾಟಕ : ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಜಾಹೀರಾತು ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ :ಇಂದು ನಿಮ್ಮ ಸಂಗಾತಿಯನ್ನು ಸಂತೋಷಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೀರಿ. ಆದ್ದರಿಂದ ನೀವು ಜಾರುವ ಸಾಧ್ಯತೆ ಬಹಳ ಕಡಿಮೆ. ನೀವು ಇಂದು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಶಕ್ತರಾಗುತ್ತೀರಿ. ಇಂದು ನಿಮ್ಮ ಎಲ್ಲ ಹಣಕಾಸು ವ್ಯವಹಾರಗಳಲ್ಲೂ ಎಚ್ಚರಿಕೆ ವಹಿಸಬೇಕು.

ಕನ್ಯಾ :ಇಂದು ನಿಮಗೆ ತಿರುವಿನ ದಿನವಾಗಿದೆ. ನೀವು ಹಣ ಪಡೆಯುವ ಅವಕಾಶಗಳನ್ನು ಅನ್ವೇಷಿಸುತ್ತೀರಿ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಬಾಂಧವ್ಯಗಳಿಗೆ ಸಂಬಂಧಿಸಿದ ವಿಷಯಗಳು ಇಂದು ನಿಮ್ಮ ಆದ್ಯತೆಯ ಪಟ್ಟಿಯಲ್ಲಿ ಮೊದಲಲ್ಲಿವೆ. ನೀವು ಆಧ್ಯಾತ್ಮಿಕತೆಯತ್ತ ವಾಲಿದ್ದೀರಿ ಮತ್ತು ನೀವು ಧ್ಯಾನ ಮತ್ತು ಯೋಗವನ್ನೂ ಪ್ರಯತ್ನಿಸಬಹುದು.

ತುಲಾ :ನೀವು ಇಂದು ವಿಭಿನ್ನ ವ್ಯಕ್ತಿಯಾಗಿದ್ದೀರಿ, ಸಂಪೂರ್ಣ ಹುರುಪು ಮತ್ತು ಉತ್ಸಾಹ. ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ನಿಮ್ಮ ಸೃಜನಶೀಲ ಕೌಶಲ್ಯಗಳನ್ನು ಪ್ರದರ್ಶಿಸಲು ಶಕ್ತರಾಗುತ್ತೀರಿ, ಅದೇ ಸಮಯಕ್ಕೆ ನೀವು ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಮುನ್ನಡೆದು ಪ್ರತಿಷ್ಠೆಯನ್ನೂ ಸಂಪಾದಿಸುತ್ತೀರಿ. ನೀವು ವಿದೇಶದಲ್ಲಿ ಉನ್ನತ ಶಿಕ್ಷಣ ಕುರಿತು ನಿರ್ಧರಿಸಬೇಕಾಗುತ್ತದೆ.

ವೃಶ್ಚಿಕ :ಇದು ನಿಮ್ಮ ಎಲ್ಲ ಶಕ್ತಿಗಳೂ ಪ್ರೀತಿಯ ವಸ್ತುವಿನತ್ತ ತಿರುಗಿವೆ. ಸಂಶೋಧನೆ ಆಧರಿತ ಕೆಲಸ ಒಂದು ಆಯ್ಕೆಯೂ ಆಗಿದೆ. ನೀವು ಹಳೆಯ ಒಳ್ಳೆಯ ಸಮಯದ ಬಗ್ಗೆ ಮಾತನಾಡಲು ಮತ್ತು ಮಹತ್ತರ ಸಮಯ ಕಳೆಯಲು ವಿಶೇಷ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ.

ಧನು :ಪರೋಪಕಾರ ಇಂದು ನಿಮ್ಮ ಮಧ್ಯದ ಹೆಸರು. ನೇರ ಹಾಗೂ ಮುಕ್ತ ಮನಸ್ಸು ಹೊಂದಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ. ನೀವು ನಿಮ್ಮ ಜೀವನಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತೀರಿ. ಇದು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ ಎಂಬ ಭಾವನೆ ತರುತ್ತದೆ.

ಮಕರ :ಕಠಿಣ ಪರಿಸ್ಥಿತಿಯಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದು ಸುಲಭ. ಆದರೆ ನೀವು ನಿಮ್ಮ ತಾಳ್ಮೆಯನ್ನು ಉಳಿಸಿಕೊಳ್ಳುವುದು ನಿಮ್ಮ ಗುರಿ ತಲುಪಲು ನೆರವಾಗುತ್ತದೆ. ಕೆಲಸದಲ್ಲಿ ಯಾರೊಂದಿಗೂ ವಾಗ್ಯುದ್ಧ ಮಾಡಬೇಡಿ, ಅದು ನಿಮ್ಮನ್ನು ಗಂಭೀರವಾಗಿ ಹಾನಿಯುಂಟು ಮಾಡುತ್ತದೆ. ವೈಯಕ್ತಿಕವಾಗಿ, ನೀವು ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿರುತ್ತೀರಿ ಮತ್ತು ಅವರು ವಿಶೇಷ ವ್ಯಕ್ತಿ ಎಂದು ಭಾವಿಸುವಂತೆ ಮಾಡುತ್ತೀರಿ.

ಕುಂಭ :ನೀವು ನಿಮ್ಮ ವೇಳಾಪಟ್ಟಿ ಅಸ್ತವ್ಯಸ್ತವಾಗುವುದನ್ನು ಕಾಣುತ್ತೀರಿ! ನಿಮ್ಮ ಕಾರ್ಯದೊತ್ತಡ ಅದರಲ್ಲೂ ನೀವು ಆಡಳಿತಗಾರರಾಗಿ ಅಪಾರವಾಗಿದೆ. ಆದರೆ ನಿಮ್ಮ ವಿವೇಚನೆ ಮತ್ತು ಬದ್ಧತೆ ನಿಮ್ಮನ್ನು ಮುನ್ನಡೆಸುತ್ತವೆ. ಅಲ್ಲದೆ ನೀವು ಸಂಜೆಗೆ ಪಾರ್ಟಿಗೆ ಸಜ್ಜಾಗಿದ್ದೀರಿ. ಎಂಥಾ ಶಕ್ತಿ!

ಮೀನ :ನೀವು ಹೆಚ್ಚು ಹಣದ ಬೆನ್ನು ಹತ್ತಿದ ವ್ಯಕ್ತಿಯಲ್ಲ. ಭವಿಷ್ಯಕ್ಕೆ ನಿಮ್ಮ ಹಣ ಯೋಜಿಸುವುದು ನಿಜಕ್ಕೂ ಸುಲಭವಲ್ಲ. ಪ್ರತಿದಿನವನ್ನೂ ಅದು ಬಂದಂತೆ ತೆಗೆದುಕೊಳ್ಳುತ್ತೀರಿ. ಆದರೆ, ಇಂದು ನಿಮಗೆ ಒಂದು ಬಗೆಯ ಸಾಕ್ಷಾತ್ಕಾರವಾಗುತ್ತದೆ ಮತ್ತು ಜೀವನ ಕುರಿತು ಹೆಚ್ಚು ಗಂಭೀರವಾಗುತ್ತೀರಿ. ಅಂತಿಮವಾಗಿ ನೀವು ನಿಮ್ಮ ಹಣಕಾಸಿನ ಯೋಜನೆಯ ಮೌಲ್ಯ ಕಂಡುಕೊಳ್ಳುತ್ತೀರಿ. ಅದನ್ನು ಅಪಮೌಲ್ಯ ಮಾಡದಿರಿ.

ABOUT THE AUTHOR

...view details