ಕರ್ನಾಟಕ

karnataka

ETV Bharat / photos

ವಿಶ್ವದ ಅತಿ ಎತ್ತರದ ಮತಗಟ್ಟೆಯಲ್ಲಿಂದು ವೋಟಿಂಗ್​; ಈ ಬಾರಿಯೂ ಶೇ 100ರಷ್ಟು ಮತದಾನದ ಗುರಿ! - World highest polling booth - WORLD HIGHEST POLLING BOOTH

World highest polling booth Tashigang : ಇಂದು (ಜೂನ್ 1) ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದ್ದು, ಹಿಮಾಚಲ ಪ್ರದೇಶದ ಮತಗಟ್ಟೆಯೊಂದು ಗಮನ ಸೆಳೆದಿದೆ. ಅದಕ್ಕೆ ಕಾರಣ ಈ ಮತಗಟ್ಟೆ ಸಮುದ್ರ ಮಟ್ಟದಿಂದ 15,256 ಅಡಿ ಎತ್ತರದಲ್ಲಿದ್ದು, ವಿಶ್ವದಲ್ಲೇ ಅತಿ ಎತ್ತರದ ಮತಗಟ್ಟೆ ಎಂಬ ದಾಖಲೆ ಸೃಷ್ಟಿಸಿದೆ. ಆ ವಿಶೇಷ ಮತಗಟ್ಟೆಯ ಬಗ್ಗೆ ತಿಳಿಯೋಣ ಬನ್ನಿ.. (ಕೃಪೆ: ETV Bharat)

By PTI

Published : Jun 1, 2024, 7:50 AM IST

ಹಿಮಾಚಲ ಪ್ರದೇಶ ಜೊತೆಗೆ ಇನ್ನೂ ಕೆಲವು ರಾಜ್ಯಗಳಲ್ಲಿ ಇಂದು (ಜೂ.1) ಅಂತಿಮ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. (ಕೃಪೆ: ETV Bharat)
ಹಿಮಾಚಲ ಪ್ರದೇಶದ ಸಂಕೀರ್ಣ ಭೌಗೋಳಿಕ ಪರಿಸ್ಥಿತಿಗಳಿಂದಾಗಿ ಇಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗಕ್ಕೆ ಸವಾಲಾಗಿ ಪರಿಣಮಿಸಿದೆ. (ಕೃಪೆ: ETV Bharat)
ಪ್ರಜಾಪ್ರಭುತ್ವದ ಹಬ್ಬವೆಂದೇ ಪರಿಗಣಿಸಲಾಗಿರುವ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರನ್ನೂ ಭಾಗಿಗಳನ್ನಾಗಿ ಮಾಡಲು ಚುನಾವಣಾ ಆಯೋಗ ಶ್ರಮಿಸುತ್ತಿದೆ. (ಕೃಪೆ: ETV Bharat)
ದೂರದ ಪ್ರದೇಶಗಳಲ್ಲೂ ಮತದಾನ ಕೇಂದ್ರಗಳು ಲಭ್ಯವಾಗುವಂತೆ ಮಾಡುವುದು ಚುನಾವಣೆ ಆಯೋಗದ ಜವಾಬ್ದಾರಿಯಾಗಿದೆ. (ಕೃಪೆ: ETV Bharat)
ಮತದಾನದಿಂದ ಒಬ್ಬರೇ ಮತದಾರರು ದೂರವಾಗದಂತೆ ಚುನಾವಣಾ ಆಯೋಗ ಕಾಳಜಿ ವಹಿಸುತ್ತಿದ್ದು, ಒಬ್ಬರೇ ಮತದಾರರಿದ್ದರೂ ವಿಶೇಷ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. (ಕೃಪೆ: ETV Bharat)
ಈ ಕ್ರಮದಲ್ಲಿ, ಹಿಮಾಚಲ ಪ್ರದೇಶದ ಲಾಹೋಲ್ ಸ್ಪಿತಿ ಜಿಲ್ಲೆಯ ತಾಶಿಗಾಂಗ್‌ನಲ್ಲಿ ವಿಶ್ವದ ಅತಿ ಎತ್ತರದ ಮತಗಟ್ಟೆಯನ್ನು ಸ್ಥಾಪಿಸಿದ್ದಾರೆ. (ಕೃಪೆ: ETV Bharat)
ತಾಶಿಗಾಂಗ್ ಮತಗಟ್ಟೆ ಸಮುದ್ರ ಮಟ್ಟದಿಂದ 15,256 ಅಡಿ ಎತ್ತರದಲ್ಲಿದೆ. (ಕೃಪೆ: ETV Bharat)
ಆದರೆ 62 (ಪುರುಷ 37, ಮಹಿಳೆ 25) ಮತದಾರರಿರುವ ತಾಶಿಗಾಂಗ್ ಮತಗಟ್ಟೆ ಸ್ಪಿತಿ ಉಪವಿಭಾಗದಿಂದ 35 ಕಿ.ಮೀ ದೂರದಲ್ಲಿದೆ. (ಕೃಪೆ: Associated Press)
ಇಲ್ಲಿ ಚುನಾವಣಾಧಿಕಾರಿಗಳು 168 ಪೊಲೀಸರು ಮತ್ತು ಅರೆಸೇನಾ ಪಡೆಗಳೊಂದಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. (ಕೃಪೆ: ANI)
8 ಆರ್‌ಟಿಸಿ ಬಸ್‌ಗಳು ಮತ್ತು ಮೂರು ಟೆಂಪೊಗಳಲ್ಲಿ ಮತಗಟ್ಟೆಗಳನ್ನು ಸ್ಥಳಾಂತರಿಸಲಾಯಿತು. (ಕೃಪೆ: ETV Bharat)
ಆದರೆ ಇಲ್ಲಿಗೆ ತಲುಪಲು ಚುನಾವಣಾ ಸಿಬ್ಬಂದಿ ಹಲವು ಅಡೆತಡೆಗಳನ್ನು ದಾಟಬೇಕು (ಕೃಪೆ: ETV Bharat)
ಈ ಹಿಂದೆ ತಾಶಿಗಾಂಗ್‌ನ ಜನರು 14,567 ಅಡಿ ಎತ್ತರದಲ್ಲಿರುವ ಸಮೀಪದ ಹಿಕ್ಕಿಮ್ ಗ್ರಾಮಕ್ಕೆ ಮತ ಹಾಕಲು ಹೋಗುತ್ತಿದ್ದರು. (ಕೃಪೆ: ETV Bharat)
2019 ರ ಚುನಾವಣೆಯಿಂದ EC ತಾಶಿಗಾಂಗ್‌ನಲ್ಲಿ ಮತಗಟ್ಟೆಯನ್ನು ಸ್ಥಾಪಿಸಿತು. ಆದ್ರೆ ಈ ಬಾರಿಯೂ ಶೇ 100ರಷ್ಟು ಮತದಾನದ ಗುರಿ ಹೊಂದಿದೆ ಆಯೋಗ. (ಕೃಪೆ: ETV Bharat)
ಚುನಾವಣಾ ಆಯೋಗವು ಈ ಬಾರಿ ತಾಶಿಗಾಂಗ್ ಮತಗಟ್ಟೆಯನ್ನು ಮಾದರಿ ಮತಗಟ್ಟೆಯಾಗಿ ಬದಲಾಯಿಸಿದೆ. (ಕೃಪೆ: ETV Bharat)

ABOUT THE AUTHOR

...view details