ಕರ್ನಾಟಕ

karnataka

ETV Bharat / photos

ಎತ್ತ ಕಣ್ಣಾಯಿಸಿದರೂ ಹಿಮರಾಶಿ: ಹಿಮಪಾತಕ್ಕೆ ನಡುಗಿದ ಅಮೆರಿಕ ಜನತೆ

US Winter Storm: ಅಮೆರಿಕದ ಈಶಾನ್ಯ ಪ್ರದೇಶದಲ್ಲಿ ಹಿಮ ಚಂಡಮಾರುತ ಅಬ್ಬರಿಸುತ್ತಿದೆ. ಪರಿಣಾಮ, ಹಲವೆಡೆ ಭಾರಿ ಹಿಮಪಾತವಾಗಿದೆ. ಈ ಹಿನ್ನೆಲೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ನ್ಯೂಯಾರ್ಕ್ ಮತ್ತು ಬೋಸ್ಟನ್‌ನಲ್ಲಿ ಸುಮಾರು 1,200 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. 2,700 ವಿಮಾನಗಳ ಸಂಚಾರದಲ್ಲಿ ವಿಳಂಬವಾಗಿವೆ. ಭಾರಿ ಹಿಮಪಾತದಿಂದ ಸರಿಸುಮಾರು ಐದು ಕೋಟಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

By ETV Bharat Karnataka Team

Published : Feb 15, 2024, 9:28 AM IST

ಅಮೆರಿಕದ ಈಶಾನ್ಯ ಪ್ರದೇಶದಲ್ಲಿ ಹಿಮಪಾತ.
ಹಿಮಪಾತದಿಂದಾಗಿ ಪ್ರಯಾಣಿಕರು, ಸ್ಥಳೀಯರು ತೀವ್ರ ತೊಂದರೆಗೊಳಗಾಗಿದ್ದಾರೆ.
1 ಲಕ್ಷದ 50 ಸಾವಿರ ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಈಶಾನ್ಯ ಭಾಗದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ.
ನ್ಯೂಯಾರ್ಕ್, ಮೆಸಾಚ್ಯುಸೆಟ್ಸ್​ ಮತ್ತು ಪೆನ್ಸಿಲ್ವೇನಿಯಾದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಈಶಾನ್ಯ ಅಮೆರಿಕದ ಕೆಲವೆಡೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ನ್ಯೂಯಾರ್ಕ್ ಮತ್ತು ಬೋಸ್ಟನ್‌ನಲ್ಲಿ ಸರಿಸುಮಾರು 1,200 ವಿಮಾನಗಳನ್ನು ರದ್ದುಗೊಳಿಸಲಾಗಿದೆ.
2,700 ವಿಮಾನಗಳು ವಿಳಂಬವಾಗಿವೆ.
ನ್ಯೂಯಾರ್ಕ್ ನಗರದಲ್ಲಿ 744 ದಿನಗಳ ನಂತರ ಹಿಮಪಾತ ಆಗಿದೆ.
ಸ್ಥಳೀಯರು ತಮ್ಮ ಸುತ್ತಲಿನ ಸ್ಥಳಗಳಲ್ಲಿ ಹಿಮ ತೆರೆವುಗೊಳಿಸುವ ಕಾರ್ಯ ಮುಂದುವರಿಸಿದ್ದಾರೆ.
ಯಂತ್ರೋಪಕರಣಗಳ ಸಹಾಯದಿಂದ ರಸ್ತೆಗಳಲ್ಲಿ ಸಂಗ್ರಹವಾದ ಹಿಮವನ್ನು ತೆರವುಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.
ಹಿಮ ತೆರವುಗೊಳಿಸುತ್ತಿರುವ ಸಿಬ್ಬಂದಿ..
ಸೂಕ್ತ ಕ್ರಮಗಳು ಜಾರಿಗೆ..
ಹಿಮ ತೆರೆವು ಕಾರ್ಯಾಚರಣೆ..
ಅಮೆರಿಕ ಹಿಮಪಾತ..

ABOUT THE AUTHOR

...view details