ಕರ್ನಾಟಕ

karnataka

ETV Bharat / photos

27 ವರ್ಷಗಳ ಬಳಿಕ ಬಿಜೆಪಿಗೆ ದಿಲ್ಲಿ ಗದ್ದುಗೆ : ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು - ಫೋಟೋಗಳಲ್ಲಿ ನೋಡಿ - DELHI ELECTIONS 2025

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲೂ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರೀ ಬಹುಮತದಿಂದ ಗೆದ್ದು ಆಡಳಿತ ನಡೆಸಿದ್ದ ಆಮ್‌ ಆದ್ಮಿ ಪಕ್ಷವು ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ. ಒಟ್ಟು 70 ಸ್ಥಾನಗಳನ್ನು ದೆಹಲಿ ವಿಧಾನಸಭೆ ಹೊಂದಿದ್ದು, ಬಿಜೆಪಿ ಈ ಬಾರಿ, 48 ಸ್ಥಾನಗಳನ್ನು ಜಯಿಸಿದೆ. 27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆ ಏರುತ್ತಿದ್ದು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. (IANS)

By ETV Bharat Karnataka Team

Published : Feb 8, 2025, 8:22 PM IST

ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟ. (IANS)
ರಾಷ್ಟ್ರ ರಾಜಧಾನಿಯಲ್ಲಿ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿ ಯಶಸ್ವಿ. (IANS)
ಕಳೆದ ಚುನಾವಣೆಗಳಲ್ಲಿ ಭಾರೀ ಬಹುಮತದಿಂದ ಗೆದ್ದಿದ್ದ ಆಪ್​ ಅಧಿಕಾರಕ್ಕೇರುವಲ್ಲಿ ವಿಫಲ. (IANS)
70 ಸ್ಥಾನಗಳನ್ನು ಹೊಂದಿರುವ ದೆಹಲಿ ವಿಧಾನಸಭೆಯಲ್ಲಿ 48 ಕ್ಷೇತ್ರಗಳಲ್ಲಿ ಅರಳಿದ ಕಮಲ. (IANS)
27 ವರ್ಷಗಳ ಬಳಿಕ ದಿಲ್ಲಿ ಗದ್ದುಗೆ ಏರುತ್ತಿರುವುದರಿಂದ ಕಮಲ ಪಾಳೆಯದಲ್ಲಿ ಹೆಚ್ಚಿದ ಸಂಭ್ರಮ. (IANS)
ಪರಸ್ಪರ ಸಿಹಿ ತಿನ್ನಿಸಿ ವಿಜಯೋತ್ಸವ ಆಚರಿಸಿದ ಬಿಜೆಪಿ ಕಾರ್ಯಕರ್ತರು. (IANS)
ಆಡಳಿತಾರೂಢ ಆಪ್ ಪಕ್ಷದ ಸೋಲಿನಿಂದ ನಿರಾಸೆಯಲ್ಲಿ ಕಾರ್ಯಕರ್ತರು. (IANS)
ಐತಿಹಾಸಿಕ ಜನಾದೇಶ ನೀಡಿದ್ದಕ್ಕಾಗಿ ದೆಹಲಿ ಜನರಿಗೆ ಧನ್ಯವಾದ ಹೇಳಿದ ಪ್ರಧಾನಿ. (IANS)
1998ರಲ್ಲಿ ಬಿಜೆಪಿ ಕೊನೆಯದಾಗಿ ದೆಹಲಿಯಲ್ಲಿ ಅಧಿಕಾರ ನಡೆಸಿತ್ತು. (IANS)
1998ರಲ್ಲಿ ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಸಿಎಂ ಆಗಿ ಇತಿಹಾಸ ಬರೆದಿದ್ದರು. (IANS)
ಕಾರಣಾಂತರಗಳಿಂದ ದಿಲ್ಲಿ ಗದ್ದುಗೆ ಕಳೆದುಕೊಂಡ ಬಿಜೆಪಿ 27 ವರ್ಷಗಳ ಬಳಿಕ ಇದೀಗ ಮತ್ತೆ ಅಧಿಕಾರಕ್ಕೆ. (IANS)
ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು (IANS)
ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತರು (IANS)

ABOUT THE AUTHOR

...view details