ಕ್ರಿಮಿನಲ್ ನ್ಯಾಯ ಸಂಹಿತೆಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಜುಲೈ 1, 2024 ರಿಂದ ಜಾರಿಗೆ ತರಲಾಗಿದೆ. ಈಗ ಕೆಲ ತಿಂಗಳುಗಳಿಂದ ಇವುಗಳ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗುತ್ತಿತ್ತು. ಈ ಕಾನೂನುಗಳ ಸಾಕಷ್ಟು ಮಾಹಿತಿಯನ್ನು ಬರೆಯಲಾಗಿದೆ ಮತ್ತು ಮಾತನಾಡಲಾಗಿದೆ. ಈ ಸಮಯದಲ್ಲಿ ನಾನು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ (ಬಿಎಸ್ಎ) ಇವುಗಳ ಬಗ್ಗೆ ಇಲ್ಲಿ ಹೇಳಲು ಬಯಸುತ್ತೇನೆ. ಕೇಂದ್ರ ಸರ್ಕಾರವು ಕ್ರಮವಾಗಿ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳ ಜಾಗದಲ್ಲಿ ಮೇಲಿನ ಮೂರು ಕಾಯ್ದೆಗಳನ್ನು ಜಾರಿಗೆ ತಂದಿದೆ.
ಈ ಕಾನೂನುಗಳ ಪರಿಣಾಮವನ್ನು ಇಷ್ಟು ಸಣ್ಣ ಲೇಖನದಲ್ಲಿ ಪೂರ್ಣವಾಗಿ ಹೇಳಲು ಸಾಧ್ಯವಿಲ್ಲ. ಆದ್ದರಿಂದ, ನಾನು ಈ ಕಾನೂನುಗಳ ಕೆಲ ಅಂಶಗಳನ್ನು ಮಾತ್ರ ಪ್ರಸ್ತಾಪಿಸುತ್ತೇನೆ. ಅವುಗಳಲ್ಲಿ ಕೆಲವು ವಿಚಿತ್ರವಾಗಿವೆ, ಕೆಲವು ಒಳ್ಳೆಯದಾಗಿವೆ ಮತ್ತು ಕೆಲವೊಂದಕ್ಕೆ ತೀವ್ರ ಬದಲಾವಣೆಯ ಅಗತ್ಯವಿದೆ.
ಹೊಸ ಕಾನೂನುಗಳ ವಿಚಿತ್ರವಾದ ಅಂಶಗಳು: ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕುವುದು ಹೊಸ ಕಾನೂನುಗಳ ಉದ್ದೇಶವಾಗಿತ್ತು. ಆದರೆ, ಹೊಸ ಕಾನೂನುಗಳಲ್ಲಿ ಸುಮಾರು ಶೇ 90 ರಷ್ಟು ಹಳೆಯ ಕಾನೂನುಗಳನ್ನೇ ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ಹೀಗೆ ಮಾಡುವುದಾಗಿದ್ದರೆ ಐಪಿಸಿಯ ಮೂಲ ರಚನೆಯನ್ನೇ ಉಳಿಸಿಕೊಳ್ಳಬಹುದಿತ್ತು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಬಹುದಿತ್ತು. ಬಹುಪಾಲು ವಸಾಹತುಶಾಹಿ ಶಾಸನವಾಗಿ ಮುಂದುವರಿಯುವ ಕಾನೂನುಗಳನ್ನು ಮತ್ತೆ ಜಾರಿಗೆ ತರುವ ಅಗತ್ಯವಿರಲಿಲ್ಲ. ಬಿಎನ್ಎಸ್ ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ ರೀತಿಯಾಗಿವೆ ಅಷ್ಟೇ.
ಐಪಿಸಿಯಲ್ಲಿ ಅತಿ ಹೆಚ್ಚು ದುರುಪಯೋಗಪಡಿಸಿಕೊಳ್ಳಲಾದ ಕಾನೂನು ಎಂದರೆ ಅದು ದೇಶದ್ರೋಹ ವಿರೋಧಿ ಕಾನೂನು. ಏನೋ ತಿಳಿಯದೆ ಒಂದು ಟ್ವೀಟ್ ಮಾಡಿದ ಕಾರಣಕ್ಕೇ ಯುವಕರನ್ನು ದೇಶದ್ರೋಹದ ಕಾನೂನಿನಡಿ ಬಂಧಿಸಲಾಯಿತು. ಕೆಲವು ಸಮಯದ ಹಿಂದೆ, ಈ ವಸಾಹತುಶಾಹಿ ನಿಬಂಧನೆಯನ್ನು ರದ್ದುಗೊಳಿಸಲಾಗುವುದು ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಮತ್ತು ದೇಶಕ್ಕೆ ತಿಳಿಸಲಾಗಿತ್ತು. ಆದರೆ ಈಗ ಇದಕ್ಕೆ ವ್ಯತಿರಿಕ್ತವಾಗಿರುವುದು ಸಂಭವಿಸಿದೆ ಎಂಬುದು ಆಶ್ಚರ್ಯ. ಹೊಸ ನಿಬಂಧನೆ (ಸೆಕ್ಷನ್ 152 ಬಿಎನ್ಎಸ್) ದೇಶದ್ರೋಹದ ಪ್ಲಸ್ ಆಗಿದೆ. ಹೆಚ್ಚು ಕಠಿಣ ಶಿಕ್ಷೆಯೊಂದಿಗೆ ನಿಬಂಧನೆಯ ದುರುಪಯೋಗಕ್ಕೆ ಈಗ ಹೆಚ್ಚಿನ ಅವಕಾಶವಿದೆ. ಕೆಲ ದಿನಗಳ ಹಿಂದೆ, ಪ್ಯಾಲೆಸ್ಟೈನ್ ಧ್ವಜವನ್ನು ಬೀಸಿದ್ದಕ್ಕಾಗಿ ಕೆಲವರನ್ನು ಬಂಧಿಸಲಾಯಿತು. ಈಗ, ಸೆಕ್ಷನ್ 152 ಬಿಎನ್ಎಸ್ ಅಡಿ ವಿಧ್ವಂಸಕ ಚಟುವಟಿಕೆಗೆ ಅನಿರ್ದಿಷ್ಟ ಆರೋಪವನ್ನು ಅವರ ಮೇಲೆ ಹೊರಿಸಬಹುದು.
ಹಾಗೆಯೇ ಐಪಿಸಿಯಲ್ಲಿನ ಮತ್ತೊಂದು ಅತಿಹೆಚ್ಚು ದುರುಪಯೋಗವಾದ ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಅನ್ನು ಮತ್ತೆ ಜಾರಿಗೆ ತರಲಾಗಿದೆ ಮತ್ತು ಸೆಕ್ಷನ್ 196 ಬಿಎನ್ಎಸ್ ಆಗಿ ವಿಸ್ತರಿಸಲಾಗಿದೆ. ಈ ಸೆಕ್ಷನ್ ಅಡಿ ಜಾಮೀನು ರಹಿತ ಅಪರಾಧಕ್ಕಾಗಿ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಅಪಾರ ಅವಕಾಶವನ್ನು ನೀಡಲಾಗಿದೆ. ಆದರೆ, ಹಿಂದಿನಂತೆ, ಇದನ್ನು ದ್ವೇಷ ಹರಡುವವರ ವಿರುದ್ಧ ಬಳಸಲು ಸಾಧ್ಯವಿಲ್ಲ.
ಹೊಸ ಕಾನೂನುಗಳ ಉತ್ತಮವಾದ ಅಂಶಗಳು:ಬಿಎನ್ಎಸ್ಎಸ್ನಲ್ಲಿ ಕೆಲ ಉತ್ತಮ ಅಂಶಗಳೂ ಇವೆ. ಹುಡುಕಾಟದ ಸಂದರ್ಭಗಳಲ್ಲಿ (ಸೆಕ್ಷನ್ 185) ಮೊಬೈಲ್ನಲ್ಲಿಯೇ ವೀಡಿಯೊಗ್ರಫಿ ಮಾಡುವುದು ಇಂಥ ಒಂದು ಒಳ್ಳೆಯ ಅಂಶವಾಗಿದೆ. ಇದು ಅಧಿಕಾರಿಗಳ ಸಾಂದರ್ಭಿಕ ಅತಿರೇಕದ ವರ್ತನೆಗಳನ್ನು ಕಡಿಮೆ ಮಾಡುತ್ತದೆ ಎಂದು ಆಶಿಸಬಹುದು. ಆದರೆ ವೀಡಿಯೊಗ್ರಫಿಗೆ ಯಾವುದೇ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವಿಲ್ಲ ಎಂದು ತೋರುತ್ತದೆ.
ಬಂಧಿತ ವ್ಯಕ್ತಿಗಳ ಪಟ್ಟಿಯನ್ನು ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು (ಸೆಕ್ಷನ್ 37) ಎಂದು ಕಾಯ್ದೆ ಮಾಡಲಾಗಿದೆ. ಇದು ಒಳ್ಳೆಯದು. ಆದರೆ ಅಧಿಕೃತವಾಗಿ ಬಂಧನವನ್ನೇ ತೋರಿಸದಿದ್ದರೆ ಏನು ಮಾಡುವುದು? ಇಂಥ ಆಟಗಳನ್ನು ಪೊಲೀಸರು ಮುಂಚಿನಿಂದ ಆಡುತ್ತಲೇ ಇದ್ದಾರೆ. 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹದಾದ ಅಪರಾಧಗಳಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳನ್ನು (ಸೆಕ್ಷನ್ 35) ಬಂಧಿಸಲು ನಿರ್ಬಂಧಗಳಿವೆ. ಅಂದಹಾಗೆ, ಅಂತಹ ಹೆಚ್ಚಿನ ಅಪರಾಧಗಳು ಜಾಮೀನು ನೀಡಬಹುದಾದವು. ಆದ್ದರಿಂದ ಇದು ನಿಜವಾಗಿಯೂ ಬಹಳ ದೊಡ್ಡ ಸುಧಾರಣೆಯಾಗಿದೆ.
ಅಪರಾಧದ ಸಂತ್ರಸ್ತರಿಗೆ ಬಿಎನ್ಎಸ್ಎಸ್ ಮೇಲ್ನೋಟಕ್ಕೆ ಕೆಲ ಪ್ರಯೋಜನಗಳನ್ನು ಒದಗಿಸುತ್ತದೆ. ಉದಾಹರಣೆಗೆ, ಸೆಕ್ಷನ್ 193 ಲೈಂಗಿಕ ಅಪರಾಧ ಪ್ರಕರಣಗಳಲ್ಲಿ, ತನಿಖೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಲಾಗಿದೆ. ಈ ನಿಬಂಧನೆ ಉತ್ತಮವಾಗಿದ್ದರೂ, ಎರಡು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳದಿದ್ದರೆ, ಸಮಯ ವಿಸ್ತರಣೆಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು. ಹಾಗಾದರೆ ಸಮಯದ ಮಿತಿಯನ್ನು ನಿಗದಿಪಡಿಸಿರುವುದಾದರೂ ಏಕೆ? ಲೈಂಗಿಕ ಅಪರಾಧದ ಪ್ರಕರಣದಲ್ಲಿ, ಪೊಲೀಸರು 90 ದಿನಗಳಲ್ಲಿ ತನಿಖೆಯ ಪ್ರಗತಿ ಬಗ್ಗೆ ಸಂತ್ರಸ್ತೆಗೆ ತಿಳಿಸಬೇಕು. ಆದರೆ, ಪೊಲೀಸರು ಹಾಗೆ ಮಾಡದಿದ್ದರೆ ಏನೂ ಆಗುವುದಿಲ್ಲ. ಪೊಲೀಸರು ನಿಜವಾಗಿಯೂ ಈ ನಿಬಂಧನೆಯನ್ನು ಗೌರವಿಸುತ್ತಾರೆಯೇ? ವಿಚಿತ್ರವೆಂದರೆ, 90 ದಿನಗಳ ನಂತರ ಮಾಹಿತಿ ಒದಗಿಸುವ ಅಗತ್ಯ ಇಲ್ಲದಿರುವುದು. ಕಡ್ಡಾಯವಾಗಿ ಪಾಲನೆ ಮಾಡುವ ನಿಬಂಧನೆ ಇಲ್ಲದಿದ್ದರೆ ಕೆಲ ಉತ್ತಮ ಕಾನೂನುಗಳು ಸಹ ನಿರರ್ಥಕವಾಗಬಹುದು.