ವರ್ಷಾಂತ್ಯದಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ರಂಗು ಪಡೆದಿದೆ. ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣಕ್ಕಿಳಿಯುತ್ತಿದ್ದರೆ, ಡೆಮಾಕ್ರೆಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ಅವರು ಅಭ್ಯರ್ಥಿಯಾಗಿ ಪ್ರಸ್ತಾಪವಾಗಿದ್ದಾರೆ. ಟ್ರಂಪ್ ಮೇಲೆ ಇತ್ತೀಚೆಗೆ ಗುಂಡಿನ ದಾಳಿ ನಡೆದ ಘಟನೆ ಭಾರಿ ಸದ್ದು ಮಾಡಿತ್ತು.
ಈ ನಡುವೆ, ಟ್ರಂಪ್ ಅವರು ತಮ್ಮ ಉಪಾಧ್ಯಕ್ಷರನ್ನಾಗಿ ಓಹಿಯೋದ ಸೆನೆಟರ್ ಆಗಿರುವ ಜೆ.ಡಿ. ವ್ಯಾನ್ಸ್ ಅವರನ್ನು ಘೋಷಿಸಿದ್ದಾರೆ. ಈ ಮೂಲಕ ಅವರು ದೇಶಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ವಿದೇಶಾಂಗ ನೀತಿ, ವ್ಯಾಪಾರ, ಬಲಪಂಥವಾದಿ, ಉದಾರವಾದಿ ಮತ್ತು ನಿಷ್ಠಾವಂತ ವ್ಯಾನ್ಸ್ರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚಿಸಿದ್ದು ಟ್ರಂಪ್‌ರ ಬುದ್ಧಿವಂತಿಕೆಯ ನಡೆಯಾಗಿದೆ. ಚುನಾವಣೆಯಲ್ಲಿ ಇದು ತಮ್ಮ ಪರ ಅಲೆಗೆ ಕಾರಣವಾಗಲಿದೆ ಎಂಬುದು ದೂರದೃಷ್ಟಿಯೂ ಇದರಲ್ಲಿದೆ.
ಟ್ರಂಪ್‌ರ ನಿಷ್ಠಾವಂತ ವ್ಯಾನ್ಸ್:ಕಾರ್ಮಿಕ ವರ್ಗದ ಹಿನ್ನೆಲೆಯಿಂದ ಬೆಳೆದು ಬಂದಿರುವ ಸೆನೆಟರ್ ವ್ಯಾನ್ಸ್ ತಮ್ಮ ಉದಾರವಾಗಿ ಕೆಲಸಗಳಿಂದ ಹೆಸರುವಾಸಿ. ಟ್ರಂಪ್‌ರ ವಿರೋಧಿ ಬಣವನ್ನು ಮನವೊಲಿಸಿದ ನಾಯಕರಾಗಿದ್ದಾರೆ. ಹಲವಾರು ಅಭಿವೃದ್ಧಿ ದೂರದೃಷ್ಟಿ ಹೊಂದಿರುವ ಇವರು ಟ್ರಂಪ್‌ರ ನಿಷ್ಠಾವಂತರಾಗಿದ್ದಾರೆ. ಚುನಾವಣೆಯಲ್ಲಿ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದರೂ, ಅವರಿಗಿಂತಲೂ ಹೆಚ್ಚು ಪ್ರಚಲಿತದಲ್ಲಿರುವ ನಾಯಕ ವ್ಯಾನ್ಸ್ ಆಗಿದ್ದಾರೆ.
ಯುವ ರಾಜಕಾರಣಿಯಾಗಿರುವ ವ್ಯಾನ್ಸ್, ರಿಪಬ್ಲಿಕನ್ ಪಕ್ಷದ ಮುಂಚೂಣಿ ನಾಯಕರೂ ಹೌದು. ಅವರ ತೀವ್ರ ಬಲಪಂಥೀಯ ನಿಲುವುಗಳು ಟೀಕೆಗೆ ಗುರಿಯಾಗಿದ್ದರೂ, ಜಾಣ್ಮೆಯನ್ನು ಟೀಕಾಕಾರರು ಕೂಡ ಒಪ್ಪಿಕೊಳ್ಳುತ್ತಾರೆ. ಎಡಪಂಥೀಯರೊಂದಿಗಿನ ಅವರ ಸಂಬಂಧವೂ ರಾಜಕೀಯ ವಲಯದಲ್ಲಿ ಅವರನ್ನು ಪ್ರಮುಖ ನಾಯಕನನ್ನಾಗಿ ಗುರುತಿಸಿದೆ. ಪ್ರಮುಖವಾಗಿ ರಿಪಬ್ಲಿಕನ್ ಪಕ್ಷದಲ್ಲಿ ಮುನ್ನೆಲೆಯಲ್ಲಿದ್ದಾರೆ.