ಹೈದರಾಬಾದ್: ಶಿಕ್ಷಣಕ್ಕೆ ಹೊಂದಿಕೊಳ್ಳುವ, ಅಂತರ್ಗತ, ವೈವಿಧ್ಯಮಯ, ಕಲಿಕಾ ಕೇಂದ್ರಿತ, ಸುಲಭ ಮತ್ತು ಜಾಗತಿಕ ಉತ್ತಮ ಅಭ್ಯಾಸಗಳನ್ನು ಜೋಡಿಸುವ ಗುರಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)- 2020ರಲ್ಲಿ ಬಹು ಪ್ರವೇಶ ಮತ್ತು ಬಹು ನಿರ್ಗಮನ (ಎಂಇಎಂಇ) ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ.
ಪದವಿ ಜೊತೆ ವಿಷಯಗಳ ಸೇರ್ಪಡೆ, ಬಹು ಪ್ರವೇಶದ ಮೂಲಕ ಅಧ್ಯಯನಕ್ಕೆ ವಿಷಯಗಳ ಆಯ್ಕೆ ಮತ್ತು ನಿರ್ಗಮನ, ಸರಳೀಕರಣದಂತಹ ಹಲವು ವಿಷಯಗಳ ಮೂಲಕ ಎನ್ಇಪಿ 2020 ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಂದಿನ ಶಿಕ್ಷಣ ಸಚಿವರಾಗಿದ್ದ ಸುಭಾಸ್ ಸರ್ಕಾರ್ ಚಳಿಗಾಲದ ಅಧಿವೇಶನದಲ್ಲಿ ತಿಳಿಸಿದ್ದರು.
ಆಂಧ್ರ ಪ್ರದೇಶದ ಎಲೂರು ಸಂಸದ ಶ್ರೀಧರ್ ಕೊಟಗಿರಿ ಅವರು, ಎನ್ಇಪಿಯಲ್ಲಿ ಬಹು ಪ್ರವೇಶ ಮತ್ತು ಬಹು ನಿರ್ಗಮನ (ಎಂಎಸ್ಎಂಇ) ಗಾಗಿ ಹೊಸ ಆಯ್ಕೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂಬ ಪ್ರಶ್ನೆಗೆ ಸಚಿವರು ಉತ್ತರಿಸಿದ್ದರು.
ಯುಜಿಸಿಯಿಂದ ಎಂಇಎಂಇ ಹೆಚ್ಚು ಅರ್ಥೈಸಿಕೊಳ್ಳುವುದಕ್ಕಾಗಿ ಉತ್ತಮ ಮಾರ್ಗದರ್ಶನ ನೀಡಲಾಗುತ್ತಿದೆ ಎಂದಿದ್ದರು.
ಸಾಧನೆಯ ಗುರಿ:
- ಯುಜಿಸಿ ಎಂಇಎಂಇ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಏಳು ಪ್ರಮುಖ ಅಂಶದ ಮಾರ್ಗಸೂಚಿಯನ್ನು ಪ್ರಕಟಿಸಿದೆ.
- ಇದು ಕಲಿಕೆಯ ಹಾದಿ ಸುಗಮ ಮಾಡಿ, ಕಟ್ಟುನಿಟ್ಟಿನ ಗಡಿ ತೆಗೆದುಹಾಕುತ್ತದೆ. ಜೊತೆಗೆ ಡ್ರಾಪ್ಔಟ್ ದರವನ್ನು ಕಡಿಮೆ ಮಾಡಲು ಮತ್ತು ಒಟ್ಟು ದಾಖಲಾತಿ ದರವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಎಂಇಎಂಇ ಅಧ್ಯಯನದ ವಿಭಾಗಗಳಲ್ಲಿ ಸೃಜನಶೀಲ ಸಂಯೋಜನೆಗಳನ್ನು ನೀಡುತ್ತದೆ.
- ಇದು ಕೇವಲ ಅವರ ಔಪಚಾರಿಕ ಪದವಿಗಾಗಿ ಅಲ್ಲದೇ, ವಿದ್ಯಾರ್ಥಿಗಳು ನಿರ್ದಿಷ್ಟ ವಿಷಯದಲ್ಲಿ ನೈಪುಣ್ಯತೆ ಪಡೆಯುವ ಆಯ್ಕೆಯನ್ನು ಸರಳಗೊಳಿಸುತ್ತದೆ.
- ಇದು ಔಪಚಾರಿಕ ಪದವಿಯ ಜೊತೆಗೆ ಅಜೀವ ಕಲಿಕೆಯನ್ನು ಉತ್ತೇಜಿಸುತ್ತದೆ.
- ವಿದ್ಯಾರ್ಥಿ ತನ್ನ ಅಧ್ಯಯನದ ಕಾರ್ಯಕ್ರಮಗಳನ್ನು ಪುನಾರಂಭಿಸಿದಾಗ ಗಳಿಸಿದ ಈ ಕಲಿಕೆಯನ್ನು ಮತ್ತೆ ಆರಂಭಿಸಲು ಕೂಡ ಅವಕಾಶ ನೀಡುತ್ತದೆ.
- ಎನ್ಇಪಿಯಲ್ಲಿನ ಹಲವಾರು ವಿಷಯಗಳ ಅನುಷ್ಠಾನಕ್ಕೆ ಎನ್ಇಪಿಗೆ ಒತ್ತಾಯ ಮಾಡುತ್ತಿರುವ ಹೊತ್ತಿನಲ್ಲಿ ಈ ಎಂಇಎಂಇ ಆಯ್ಕೆ ಒಂದು ಹೊಸ ಅವಕಾಶವಾಗಿದೆ. ಇದು ಅನೇಕ ಅಡೆತಡೆಗಳನ್ನು ನಿವಾರಿಸುತ್ತದೆ.
ಪಠ್ಯಗಳ ಪುನರ್ವಿನ್ಯಾಸ;ಸರಳೀಕೃತ ಮತ್ತು ಮಾದರಿ ಕೋರ್ಸ್ಗಳಿಗೆ ಸಂಸ್ಥೆಗಳು ಪಠ್ಯವನ್ನು ಮರು ವಿನ್ಯಾಸ ಮಾಡಬೇಕಿದೆ. ಇದಕ್ಕೆ ಕೂಲಂಕಷ ಪರೀಕ್ಷೆಯ ಅಗತ್ಯವಿದೆ. ಹಾಗೇ ಸಾಂಪ್ರದಾಯಿಕ ಪದವಿಯನ್ನು ಪ್ರಮಾಣಪತ್ರದ ಕೋರ್ಸ್ ಮತ್ತು ಡಿಪ್ಲೋಮಾಗಳಾಗಿ ವಿಭಜಿಸುವ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಇವುಗಳಿಂದ ವಿವಿಧ ಹಂತಗಳಲ್ಲಿ ನಿರ್ಗಮಿಸಿದಾಗಲೂ ಮರು ಪ್ರವೇಶಿಸಲು ಅನುಮತಿ ನೀಡುತ್ತದೆ.
ವರ್ಗಾವಣೆ ವ್ಯವಸ್ಥೆ:ಎಂಇಎಂಇ ದೃಢವಾದ ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ ಅವಲಂಬಿಸಿದೆ. ಇಲ್ಲಿ ವಿದ್ಯಾರ್ಥಿಗಳು ಸಂಸ್ಥೆಗಳಾದ್ಯಂತ ಕ್ರೆಡಿಟ್‌ಗಳನ್ನು ಸಂಗ್ರಹಿಸಿ, ವರ್ಗಾಯಿಸಬಹುದು. ಸಾರ್ವತ್ರಿಕವಾಗಿ ಅಂಗೀಕರಿಸುವ ಸಮಗ್ರ ಮತ್ತು ಪಾರದರ್ಶಕ ಕ್ರೆಡಿಟ್ ವರ್ಗಾವಣೆ ವ್ಯವಸ್ಥೆಯನ್ನು ಅಭಿವೃದ್ಧಿ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ರೂಪಿಸುತ್ತದೆ.