ಹೈದರಾಬಾದ್: ಜಗತ್ತಿನಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದರೂ ಸಾಕಷ್ಟು ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇದಕ್ಕೆ ಪ್ರಮುಖವಾಗಿ ಕೈಗಾರಿಕಾ ಕ್ರಾಂತಿಯನ್ನು ಸೃಷ್ಟಿಸಲು ವಿಫಲವಾಗಿರುವುದು. ಆದಾಗ್ಯೂ ನಮ್ಮ ಆಡಳಿತಗಾರರು ಮತ್ತು ನೀತಿ ನಿರೂಪಕರು ಸುಳ್ಳು ಮಿಥ್ಯಗಳ ಯಶಸ್ಸನ್ನು ಬಿಂಬಿಸುತ್ತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ಕಾರ್ಮಿಕ ತೀವ್ರ ವಲಯವಾಗಿ ರೂಪಿಸುವ ಅಗತ್ಯವಿದೆ. ಇದು ಅನೇಕ ಪಾಠಗಳ ಜೊತೆಗೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಕರೆ ನೀಡುತ್ತದೆ.
ಉತ್ಪಾದನೆ ವಿಫಲ: 1991ರಿಂದ 30 ವರ್ಷಗಳಲ್ಲಿ ಭಾರತ ಸುಮಾರು ಶೇ 6ರಷ್ಟು ಬೆಳವಣಿಗೆ ಕಂಡಿದೆ. 450 ಮಿಲಿಯನ್ ಜನರನ್ನು ಬಡತನದಿಂದ ಮೇಲೆತ್ತಿದ್ದು, ಮಧ್ಯಮ ವರ್ಗಗಳ ಜನಸಂಖ್ಯೆ ಶೇ 10ರಿಂದ 30ರಷ್ಟು ವಿಸ್ತರಣೆ ಕಂಡಿದೆ. ಸೇವಾ ವಲಯದಲ್ಲಿ ಭಾರತ ಅತ್ಯುನ್ನತ ಕೆಲಸ ಮಾಡಿದೆ. ಆದರೆ, ಉತ್ಪಾದನೆಯಲ್ಲಿ ವೈಫಲ್ಯತೆ ಕಂಡಿದೆ. ಇದರ ಜಿಡಿಪಿ ಶೇ 15ಕ್ಕಿಂತ ಕಡಿಮೆ ಇದ್ದರೆ, ಶೇ. 11ರಷ್ಟು ಉದ್ಯೋಗಿಗಳಿದ್ದಾರೆ. ಜಾಗತಿಕ ಸರಕನ್ನು ಶೇ 2ರ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಪೂರ್ವ ಏಷ್ಯಾದ ಯಶಸ್ವಿ ದೇಶಗಳಾದ ಜಪಾನ್, ಕೊರಿಯಾ ಮತ್ತು ತೈವಾನ್ ದೇಶಗಳು ಕಾರ್ಮಿಕ ತೀವ್ರ ಉತ್ಪಾದನೆ ರಫ್ತು ಎಂಬ ಒಂದು ಮಂತ್ರದ ಮೂಲಕ ಬಡತನದಿಂದ ಹೊರಬಂದಿವೆ ಎಂಬುದನ್ನು ಮರೆಯಬಾರದು. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಚೀನಾ.
ನಿರುದ್ಯೋಗ ಸಮಸ್ಯೆ ಕಾರಣವಲ್ಲ: ಭಾರತದ ಸಮಸ್ಯೆ ಕಾರಣ ನಿರುದ್ಯೋಗವಲ್ಲ, ಕಡಿಮೆ ಉದ್ಯೋಗವಾಗಿದೆ. ಪಾಕ್ಷಿಕ ಕಾರ್ಮಿಕ ಸಮೀಕ್ಷೆಗಳು ಉದ್ಯೋಗ ಬಿಕ್ಕಟ್ಟಿನ ವ್ಯಾಪ್ತಿಯನ್ನು ಪ್ರತಿಬಿಂಬಿಸುವುದಿಲ್ಲ. ಅನೇಕ ಯುವ ಜನರು ಕಡಿಮೆ ಉತ್ಪಾದನೆಗೆ, ಘಟಕಗಳಲ್ಲಿ ಅನೌಪಚಾರಿಕ ಉದ್ಯೋಗ ಅಥವಾ ಬಜಾರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಗುಣಮಟ್ಟದ ಹೆಚ್ಚು ಉತ್ಪಾದಕ ಕೆಲಸವನ್ನು ಮಾಡುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಸಮೀಕ್ಷೆಯಲ್ಲೂ ಈ ವಿಷಯಗಳನ್ನು ಗುರುತಿಸಲಾಗಿತ್ತು. ಗುಣಮಟ್ಟದ ಉದ್ಯೋಗದ ಆತಂಕವು ಅಚ್ಚರಿ ಚುನಾವಣಾ ಫಲಿತಾಂಶವನ್ನು ಭಾಗಶಃ ಪ್ರತಿಫಲಿಸಿದ್ದವು.
ಉತ್ಪಾದನಾ ಸ್ಥಳವಾಗಿ ರೂಪುಗೊಳ್ಳುತ್ತಿರುವ ಭಾರತ: ಈ ನಡುವೆ ಇರುವ ಖುಷಿ ಸಂಗತಿ ಎಂದರೆ, ಇದೀಗ ಜಾಗತಿಕ ನಾಯಕರು ಭಾರತವನ್ನು ಜಾಗತಿಕ ಪೂರೈಕೆಗಾಗಿ ಎರಡನೇ ಉತ್ಪಾದನಾ ಸ್ಥಳವಾಗಿ ಆಯ್ಕೆ ಮಾಡಿದ್ದಾರೆ. 2021ರ ವರೆಗೆ ಚೀನಾದಲ್ಲಿಯೇ ಆ್ಯಪಲ್ ಕಂಪನಿಯ ಐಫೋನ್ ಸಂಪೂರ್ಣವಾಗಿ ತಯಾರಾಗುತ್ತಿತ್ತು. ಇಂದು ಭಾರತದಲ್ಲಿ ಈ ಸಂಸ್ಥೆ 1,50,000ಕ್ಕೂ ನೇರ ಉದ್ಯೋಗ (ಶೇ70ರಷ್ಟು ಮಹಿಳೆಯರು) ಜೊತೆಗೆ 4,50,000 ಪರೋಕ್ಷ ಉದ್ಯೋಗ ಸೃಷ್ಟಿಸಿದೆ. ಪ್ರತಿ ವರ್ಷ 14 ಬಿಲಿಯನ್ ಫೋನ್ ಉತ್ಪಾದನೆ ಮಾಡುವ ಮೂಲಕ 10 ಬಿಲಿಯನ್ ರಫ್ತನ್ನು ಮಾಡಲಾಗುತ್ತಿದೆ. ಸದ್ಯ ಈ ಅಂಕಿ ಸಂಖ್ಯೆ ಐಫೋನ್ನ ಜಾಗತಿಕ ಉತ್ಪಾದನೆಯಲ್ಲಿ ಶೇ 14ರಷ್ಟಿದ್ದು, 2026ರ ಹೊತ್ತಿಗೆ ಇದರ ಪ್ರಮಾಣ ಶೇ 26 ರಿಂದ 30 ಆಗಲಿದೆ.
ಉತ್ಪಾದನಾ ಮಾರುಕಟ್ಟೆಗೆ ಒತ್ತು: ಭಾರತ ರಫ್ತುಗಾರಿಕೆ ಹಬ್ ಆಗಿ ರೂಪುಗೊಳ್ಳಲು ಶೇ. 85ರಷ್ಟು ಮೌಲ್ಯದ ವೃದ್ಧಿಯನ್ನು ಪ್ರತಿನಿಧಿಸುವ ಐಫೋನ್ ಘಟಕ ತಯಾರಕರನ್ನು ಆಕರ್ಷಿಸುವುದು ಅವಶ್ಯವಾಗಿದೆ. ಅವರು ಬಹುತೇಕ ಚೀನಿಗರಾಗಿದ್ದಾರೆ. ಅವರು ಇನ್ನಷ್ಟು ಉದ್ಯೋಗ ಸೃಷ್ಟಿಸಿ, ಕೌಶಲ್ಯವನ್ನು ಕಲಿಸಿ, ಹೆಚ್ಚಿನ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಾರೆ. ಇದರಿಂದ ಮಾತ್ರ ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಜಾಗತಿಕ ಮೌಲ್ಯದ ಸರಪಳಿ ಸಂಪರ್ಕ ಹೊಂದುತ್ತವೆ. ವರ್ಷಗಳ ಹಿಂದೆ ಮಾರುತಿ ಕಂಪನಿ ಜೊತೆ ಆಗಿದ್ದು ಇದೇ ಕಥೆ. ಚೀನಾದೊಂದಿಗೆ ಭಾರತ ವ್ಯಾಪಾರ ಕಡಿಮೆ ಮಾಡುವುದು ಪ್ರಯೋಜನವಾಗಲಿದೆ. ಇದರಲ್ಲಿ ಭಾರತದ ಹಿತಾಸಕ್ತಿ ಕೂಡ ಹೊಂದಿದೆ. ಇಲ್ಲದೇ ಹೋದಲ್ಲಿ ಭಾರತದಲ್ಲಿ ಮಾರಾಟವಾಗುವ ಪ್ರತಿ ಮೊಬೈಲ್ ಚೀನಾದಲ್ಲಿಯೇ ಉತ್ಪಾದನೆಯಾಗುತ್ತದೆ.
ಕಂಪನಿಗಳ ಪ್ರವೇಶಕ್ಕೆ ದಾರಿ: ಈ ನಿಟ್ಟಿನಲ್ಲಿ ಹಲವು ಪಾಠಗಳನ್ನು ಕಲಿಯಬೇಕಿದೆ. ಮೊದಲನೇಯದಾಗಿ ಭಾರತ ಬಲು ದೊಡ್ಡ ಮಾರುಕಟ್ಟೆ ಎಂಬ ಸುಳ್ಳು ಮಿಥ್ಯವನ್ನು ಬಿಡಬೇಕಿದೆ. ಅತಿ ದೊಡ್ಡ ಜನಸಂಖ್ಯೆಯಿದ್ದು, ಕೊಳ್ಳುವಿಕೆ ಶಕ್ತಿ ಸುಧಾರಣೆ ಕಂಡಿದೆ. ಮತ್ತೊಂದು ಸಾಮಾನ್ಯ ನಂಬಿಕೆ ಎಂದರೆ, ಮೇಕ್ ಇನ್ ಇಂಡಿಯಾ ಎಂದ ಕೂಡಲೇ ಜಾಗತಿಕ ಬ್ರಾಂಡ್ಗಳು ಸಾಲುಗಟ್ಟುತ್ತಾರೆ ಎಂಬುದು ಸುಳ್ಳಾಗಿದೆ. ಭಾರತದಲ್ಲಿನ ಆ್ಯಪಲ್ ಫೋನ್ಗಳ ಜಾಗತಿಕ ಮಾರಾಟ ಕೇವಲ 0.5ರಷ್ಟಿದೆ. ಸರ್ಕಾರದ ಮಟ್ಟದಲ್ಲಿ ಸೂಕ್ಷ್ಮ ಮಾತುಕತೆ ಮೂಲಕ ಕಂಪನಿಯ ಅಗತ್ಯತೆಯಂತಹ ಅಂಶವನ್ನು ಆಲಿಸಿದಾಗ ಐಫೋನ್ ಪ್ರವೇಶ ಸುಲಭ ಸಾಧ್ಯವಾಗುತ್ತದೆ.
ಸುಂಕದ ಹೊರೆ: ಎರಡನೇ ಪಾಠ ಎಂದರೆ, ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ಯಾವುದೇ ದೇಶ ಕೂಡ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಚೀನಾ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದರು ಅದರ ಯಶಸ್ವಿಗೆ ರಫ್ತು ಮಾರುಕಟ್ಟೆ ಅಗತ್ಯವಿದೆ. ಅಧಿಕ ಸುಂಕ ರಕ್ಷಣೆಯೊಂದಿಗೆ ಪರ್ಯಾಯಗಳ ಆಮದು ಅಂಶ 1960ರಿಂದ ಭಾರತೀಯರ ಮನಸ್ಸಿನಲ್ಲಿದೆ. ಆದರೆ ಇದು ಅತ್ಯಂತ ಕೆಟ್ಟ ಯೋಚನೆ. ಇದು ಭಾರತವನ್ನು ಸುಂಕದ ಚಾಂಪಿಯನ್ ಮಾಡುತ್ತದೆಯೇ ಹೊರತು ಸ್ಪರ್ಧಾತ್ಮಕ ಮಟ್ಟದಲ್ಲಿ ಸುಂಕವನ್ನು ಕಡಿಮೆ ಮಾಡುವುದಿಲ್ಲ. ಇದರಿಂದ ಭಾರತ ಜಾಗತಿಕ ಮೌಲ್ಯ ಸರಪಳಿ ಸೇರುವ ಆಶಯವನ್ನು ಹೊಂದಲು ಸಾಧ್ಯವಿಲ್ಲ. ಇದರು 24 ಟ್ರಿಲಿಯನ್ ಡಾಲರ್ ಜಾಗತಿಕ ವ್ಯಾಪಾರ ಸರಕಲ್ಲಿ ಶೇ 70ರಷ್ಟು ಪ್ರತಿನಿಧಿಸುತ್ತದೆ.