ಕರ್ನಾಟಕ

karnataka

ETV Bharat / opinion

ಸಮುದ್ರ ವಿದ್ಯಮಾನಗಳಾದ ಎಲ್‌ ನಿನೋ-ಲಾ ನಿನೋದಿಂದ ಹವಾಮಾನದ ಮೇಲೇನು ಪರಿಣಾಮ? ತಜ್ಞರ ಮಾತು - ಎಲ್​ ನಿನೋ ಲಾ ನಿನೋ

ಎಲ್ ​ನಿನೋ ಮತ್ತು ಲಾ ನಿನೋ ಎಂಬೆರಡು ಹವಾಮಾನ ವಿದ್ಯಮಾನಗಳು ವಿಶ್ವಾದ್ಯಂತ ಪರಿಸರದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುತ್ತವೆ. ಈ ಕುರಿತು ಬೆಂಗಳೂರಿನ ನ್ಯಾಷನಲ್​ ಇನ್ಸುಟಿಟ್ಯೂಟ್​ ಆಫ್​ ಅಡ್ವಾನ್ಸ್​ನ​ ಸಹಾಯಕ ಪ್ರಾಧ್ಯಾಪಕರಾದ ಸಿ.ಪಿ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಎಲ್​ ನಿನೋ- ಲಾ ನಿನೋ ಪರಿಣಾಮ
how-el-nino-la-nina-impacts-our-climate-patterns

By ETV Bharat Karnataka Team

Published : Feb 12, 2024, 5:51 PM IST

ಹೈದರಾಬಾದ್​: ಎಲ್​ ನಿನೋ ಎಂಬ ಸಾಗರದ ವಿದ್ಯಮಾನ ಇದೀಗ ಎಲ್ಲರ ಆಸಕ್ತಿ ಹೆಚ್ಚಿಸುತ್ತಿದೆ. ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದ ಉಷ್ಣತೆಗೆ ಸಂಬಂಧಿಸಿದ ನೈಸರ್ಗಿಕವಾಗಿ ಸಂಭವಿಸುವ ಹವಾಮಾನ ಮಾದರಿಯೇ ಈ ಎಲ್ ನಿನೋ. ಎಲ್ಲೋ ದೂರದ ಸಾಗರದಲ್ಲಿ ನಡೆಯುವ ಇಂಥ ವಿದ್ಯಮಾನದ ಬಗ್ಗೆ ಭಾರತೀಯರು ಯಾಕೆ ಅಷ್ಟೊಂದು ಚಿಂತಿತರರಾಗಿದ್ದಾರೆ?. ಈ ಸಾಗರದ ವಿದ್ಯಮಾನ ಜಾಗತಿಕ ಮಟ್ಟದಲ್ಲಿ ಹವಾಮಾನ ಮಾದರಿ ಮತ್ತು ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಹೊಂದಿದೆ? ಎಂಬೆಲ್ಲಾ ಪ್ರಶ್ನೆಗಳು ಸಹಜ. ಹೌದು. ಫೆಸಿಫಿಕ್​ ಸಾಗರದ ಮೇಲ್ಮೈ ತಾಪಮಾನ ಬೆಚ್ಚಗಾಗುವುದರಿಂದ ಕೋಟ್ಯಂತರ ಜನರ ಜೀವನಾಂಶವಾಗಿರುವ ಆಗ್ನೇಯ ಮಾನ್ಸೂನ್​ ಸೇರಿದಂತೆ ಜಗತ್ತಿನ ವಿವಿಧ ಭಾಗದ ಹವಾಮಾನದ ಮೇಲೆ ಭಾರೀ ಪರಿಣಾಮ ಉಂಟಾಗುತ್ತದೆ.

ಚೀನಾದ ಯಿನ್​ ಆ್ಯಂಡ್​ ಯಂಗ್​​ ಎಂಬ ವಿಷಯ ಕೂಡ ಇದರೊಂದಿಗೆ ಬೆಸೆದಿದೆ. ಇದರ ಶಕ್ತಿ ಮಾತ್ರ ವಿರುದ್ಧ. ಅದೇ ರೀತಿ ಎಲ್​ ನಿನೋ ಒಂದು ಅಂತ್ಯವಾದರೆ ಮತ್ತೊಂದು ಅಂತ್ಯ ಲಾ ನಿನೋ. ಲಾ ನಿನೋದಲ್ಲಿ ಪೂರ್ಣ ಉಷ್ಣವಲಯದ ಫೆಸಿಫಿಕ್​ ಸಾಗರದಲ್ಲಿ ಮೇಲ್ಮೈ ತಾಪಮಾನ ತಂಪಾಗಿರುತ್ತದೆ. ಇದನ್ನು ಮೊದಲಿಗೆ ಪೆರುವಿನ ಮೀನುಗಾರರು ಗುರುತಿಸಿ ಅವರು ಎಲ್​ ನಿನೋ ಮತ್ತು ಲಾ ನಿನೋ ಎಂಬ ಹೆಸರಿಟ್ಟರು. ಸ್ಪಾನಿಷ್​ ಭಾಷೆಯಲ್ಲಿ ಇದರ ಅರ್ಥ ಸಣ್ಣ ಹುಡುಗ ಮತ್ತು ಸಣ್ಣ ಹುಡುಗಿ. ವಿಜ್ಞಾನಿಗಳು ಈ ಹವಾಮಾನದ ಮಾದರಿಯನ್ನು ದಕ್ಷಿಣ ಆಂದೋಲನ ಇಎನ್​ಎಸ್​ಒ ಚಕ್ರ ಎಂದು ಕರೆದಿದ್ದಾರೆ.

ಸಾಮಾನ್ಯ ಸಮಯದಲ್ಲಿ ವಾಣಿಜ್ಯ ಮಾರುತಗಳು ಅಥವಾ ಪೂರ್ವ ರೇಖೆಗಳು ಪೂರ್ವದಿಂದ ಪಶ್ಚಿಮಕ್ಕೆ ಸಮಭಾಜಕ ರೇಖೆಗೆ ಸಮಾನಾಂತರವಾಗಿ ಬೀಸುತ್ತವೆ. ಇದು ದಕ್ಷಿಣ ಅಮೆರಿಕದ ಪೆಸಿಫಿಕ್ ಸಾಗರದಿಂದ ಬೆಚ್ಚಗಿನ ನೀರನ್ನು ಏಷ್ಯಾದೆಡೆಗೆ ಹರಿಯುವಂತೆ ಮಾಡುತ್ತದೆ. ಈ ವಾಣಿಜ್ಯ ಮಾರುತಗಳು ಬೆಚ್ಚಗಿನ ನೀರನ್ನು ತಳ್ಳಿ, ತಣ್ಣನೆಯ ಪೋಷಕಾಂಶ ಸಮೃದ್ದಿಯುತ ನೀರನ್ನು ಕೆಳಗಿನಿಂದ ಮೇಲೇಳುವಂತೆ ಮಾಡುತ್ತದೆ. ಈ ಪ್ರಕ್ರಿಯೆಯು ಸಾಗರ ಜೀವಿಗಳು ಅಭಿವೃದ್ಧಿ ಹೊಂದಲು ಸಹಾಯ ಮಾಡುತ್ತದೆ. ಎಲ್​ ನಿನೋ ಹಂತದಲ್ಲಿ ವಾಣಿಜ್ಯ ಮಾರುತಗಳು ಬೆಚ್ಚಗಿನ ನೀರನ್ನು ಅಮೆರಿಕದ ದಕ್ಷಿಣ ಕರಾವಳಿಗೆ ತಳ್ಳುವಲ್ಲಿ ಮುಂದಾಗುತ್ತದೆ. ಇನ್ನು ಲಾ ನಿನೋದಲ್ಲಿ ವಾಣಿಜ್ಯ ಮಾರುತಗಳು ಬಲಯುತವಾಗಿದ್ದು, ಬೆಚ್ಚಗಿನ ಮತ್ತು ಶೀತ ಹಂತಗಳ ನಡುವಿನ ಪೆಸಿಫಿಕ್ ಚಟುವಟಿಕೆಗಳು ಸಾಗರ ಮತ್ತು ವಾತಾವರಣದ ನಡುವಿನ ಸಂಕೀರ್ಣವಾದ ಪರಸ್ಪರ ಕ್ರಿಯೆಗಳಲ್ಲಿವೆ.

ಈ ವಿದ್ಯಮಾನವನ್ನು ಮೊದಲ ಬಾರಿಗೆ ಗಿಲ್ಬರ್ಟ್​​ ಥಾಮಸ್​ ವಾಕರ್​​​​ ಪತ್ತೆ ಮಾಡಿದ್ದಾರೆ. ಇವರು 1904ರಲ್ಲಿ ಭಾರತದಲ್ಲಿ ಹವಾಮಾನ ಮುನ್ಸೂಚನೆಯ ಪ್ರಧಾನ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರತದ ಮತ್ತು ಜಗತ್ತಿನ ಇತರ ಭಾಗದಲ್ಲಿನ ಹವಾಮಾನ ದತ್ತಾಂಶ ಪರಸ್ಪರ ಸಂಬಂಧದ ನಿಯತಾಂಕಗಳನ್ನು ಅಭಿವೃದ್ಧಿಪಡಿಸಲು ಅವರು ಅಗಾಧ ಗಣಿತದ ಜ್ಞಾನವನ್ನು ಬಳಸಿದರು. ಭಾರತ ಮತ್ತು ಪೆಸಿಫಿಕ್ ಮಹಾಸಾಗರದ ನಡುವಿನ ವಾಯುಮಂಡಲದ ಒತ್ತಡದ ಪರ್ಯಾಯ ಮಾದರಿ ಮತ್ತು ಉಷ್ಣವಲಯದ ಪ್ರದೇಶಗಳಲ್ಲಿನ ತಾಪಮಾನ ಬದಲಾವಣೆ ಮತ್ತು ಮಳೆಯ ಮಾದರಿಯನ್ನು ವರದಿ ಮಾಡಿದವರಲ್ಲಿ ಮೊದಲಿಗರು. ಆದರೆ, ವಾಕರ್​ ಅವರ ಸಂಶೋಧನೆ ಕುರಿತು ಅಂದಿನ ದಿನದಲ್ಲಿ ಯಾರೂ ಕೂಡ ಹೆಚ್ಚು ಗಮನ ನೀಡಲಿಲ್ಲ.

ವಾಕರ್​ ಸರ್ಕ್ಯೂಲೇಷನ್​​ ಎಂಬ ಹೆಸರಿನಲ್ಲಿ ಗಿಲ್ಬರ್ಟ್​​ ವಾಕರ್​ ಅವರ ಅಧ್ಯಯನವನ್ನು ಪುನರ್‌ಆವಿಷ್ಕಾರವನ್ನು 1960ರಲ್ಲಿ ಮಾಡಲಾಯಿತು. ಈ ವೇಳೆ ಸಾಗರ ಮತ್ತು ವಾತಾವರಣ ಕುರಿತ ಸ್ಯಾಟಲೈಟ್​ ಗ್ರಹಿಕೆ ಸಹಾಯ ಮಾಡುತ್ತದೆ. ಅಭಿವೃದ್ಧಿದ ಸ್ಯಾಟಲೈಟ್​ ತಂತ್ರಜ್ಞಾನಗಳು ಅಡ್ವಾನ್ಸ್ಡ್​​ ಹೈ ರೆಸ್ಯೂಲೂಷನ್​​ ರೆಡಿಯೋಮೀಟರ್​​ ಸಂಗ್ರಹಿಸಿದ ದತ್ತಾಂಶಗಳು ಸಾಗರದ ಮೇಲ್ಮೈ ತಾಪಮಾನ ವೈಪರೀತ್ಯವನ್ನು ಅರಿಯಲು ಸಹಾಯ ಮಾಡಿತು. ಇದೀಗ ನಾವು ಜಾಗತಿಕ ಮಳೆಯ ದತ್ತಾಂಶವನ್ನು ಅನೇಕ ಸ್ಯಾಟಲೈಟ್​ನೊಂದಿಗೆ ತಾಳೆ ಮಾಡಬಹುದು. ಈ ಎಲ್​ನಿನೋವೂ ಸಾಮಾನ್ಯವಾಗಿ ಎರಡುರಿದ ಏಳುವರ್ಷಕ್ಕೆ ಒಮ್ಮೆ ಸಂಭವಿಸಬಹುದು.

ಹೊಸ ಅಧ್ಯಯನವನ್ನು ಜಿಯೋಫಿಸಿಕಲ್​ ರಿಸರ್ಚ್​ ಲೆಟರ್ಸ್​​ನಲ್ಲಿ ಪ್ರಕಟಿಸಲಾಗಿದೆ. ಆದಾಗ್ಯೂ ನೈಸರ್ಗಿಕ ಬದಲಾವಣೆಗಳಾದ ಸೂರ್ಯನ ಶಾಖವೂ ಕೂಡ ಎಲ್​ ನಿನೋ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಮಾನವನ ಕೊಡುಗೆ ಇದೆ ಎಂಬುದು ಗೊತ್ತಿರುವ ಅಂಶ. 1970ರಿಂದ ಹಸಿರು ಮನೆ ಪರಿಣಾಮ ಹೆಚ್ಚಳ ಮತ್ತು ಹವಾಮಾನ ಬವಲಾವಣೆಗಳು ಗರಿಷ್ಠ ಮಟ್ಟದಲ್ಲಿದೆ.

ಇದೀಗ ಎನ್​ಒಎಎ ಹವಾಮಾನ ಕೇಂದ್ರವೂ ಸೂಪರ್​ ಸ್ಟ್ರಾಂಗ್​ ಎಲ್​ನಿನೋ ವರದಿಯಲ್ಲಿ ಫೆಸಿಫಿಕ್​ ಸಾಗರದಲ್ಲಿ ಉಷ್ಣತೆಯು 2 ಡಿಗ್ರಿ ದಾಖಲಾಗಿದ್ದು, ಸಾಮಾನ್ಉಕ್ಕಿಂತ ಹೆಚ್ಚಾಗಿದ್ದು ಇದು ಅಂತಿಮ ಹಂತಕ್ಕೆ ಶೀಘ್ರದಲ್ಲಿ ತಲುಪಲಿದೆ, ಕಾರಣ ಇದು ಎಲ್​ ನಿನೋ ಪರಿಣಾಮವಾಗಿದೆ. ಇನ್ನು ಕಳೆದ ವರ್ಷ ಕೂಡ ಅತ್ಯಂತ ಶಾಖದ ವರ್ಷವಾಗಿ ದಾಖಲಾಗಿದೆ. ಭಾರತವೂ ಕೆಟ್ಟ ಉಷ್ಣದ ಅವಧಿಯಲ್ಲಿದ್ದು, 120 ವರ್ಷದಲ್ಲಿ ಅತಿ ಹೆಚ್ಚು ಶುಷ್ಕತೆಯನ್ನು ಆಗಸ್ಟ್​​ನಲ್ಲಿ ಅನುಭವಿಸಿದೆ. ಅಲ್ಲದೇ, ಮಳೆಯ ಅಸಮಾತೋಲತೆಯು ಒಟ್ಟಾರೆ ಶೇ 6ರಷ್ಟು ಕೊರತೆಯಾಗಿದೆ. ಅಷ್ಟೇ ಅಲ್ಲದೇ, ಶೇ 25ರಷ್ಟು ದೇಶಗಳು ಡಿಸೆಂಬರ್​ವರೆಗೆ ಬರದ ಪರಿಸ್ಥಿತಿಯನ್ನು ಎದುರಿಸಿದೆ.

ಇದರ ಜಗಲ್ಬಂದಿಯಾಗಿರುವ ಲಾನಿನೋ ತಂಪಾದ ವಾತಾವರಣವಾಗಿದ್ದುಮ ಇದು ಶಕ್ತಿಯುತವಾದಾಗ ಇದು ಭಾರತದಲ್ಲಿ ಅತಿ ಹೆಚ್ಚು ಮಳೆ ಮತ್ತು ತಂಪು ವಾತಾವರಣವನ್ನು ತರುತ್ತದೆ. ಸದ್ಯ ಇರುವ ಪ್ರಶ್ನೆ ಲಾ ನಿನೋ ಈ ಹವಾಮಾನ ಮಾದರಿಯಲ್ಲಿ ಬದಲಾವಣೆ ತರಲು ಎಷ್ಟು ಶಕ್ತಿಯಾಲಿಯಾಗಿದೆ ಎಂಬುದಾಗಿದೆ. ಎಲ್​ ನಿನೋದಿಂದ ಭಾರೀ ಪರಿಣಾಮ ಎದುರಿಸಿರುವ ಪ್ರದೇಶ ಇದು ಪರಿಹಾರವಾಗಲಿದೆಯಾ ಅಥವಾ ಲಾ ನಿನೋ ಭಾರೀ ಮಳೆಯೊಂದಿಗೆ ಹಾನಿ ಮಾಡಲಿದೆಯಾ ಎಂಬುದು ಕೂಡ ಪ್ರಮುಖವಾಗಿದೆ. ಶಕ್ತಿಶಾಲಿ ಲಾ ನಿನೋ ಅತಿ ಹೆಚ್ಚಿನ ಮಳೆ ತರುವ ಮೂಲಕ ಬೆಳೆ ಮತ್ತು ಆಸ್ತಿ ಹಾನಿಯನ್ನು ಮಾಡಬಹುದು. ಇದಕ್ಕೆ ಪೂರ್ವ ಮುನ್ನೆಚ್ಚರಿಕೆ ಮತ್ತು ಸಿದ್ದತೆ ನಡೆಸದೇ ಹೋದಲ್ಲಿ ಇದು ಹೆಚ್ಚಿನ ಅಪಾಯ ತರಬಹುದು.

(ಈ ಲೇಖನದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಲೇಖಕರವು.)

ಇದನ್ನೂ ಓದಿ:El Nino ಛಾಯೆ; ಮಳೆ ಕೊರತೆ, ಉಷ್ಣಾಂಶ ಏರಿಕೆ: ಬರಗಾಲ ಸಾಧ್ಯತೆ

ABOUT THE AUTHOR

...view details