ಹೈದರಾಬಾದ್:ಕೋಲ್ಕತ್ತಾದ ಕ್ರೂರ ಅತ್ಯಾಚಾರ ಮತ್ತು ಕೊಲೆ ಪ್ರಕರಣವೂ ಮತ್ತೊಮ್ಮೆ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿಸಿದೆ. ಈ ಹಿಂದೆ ಮಹಿಳೆಯರ ಸುರಕ್ಷತೆ ಬಗ್ಗೆ ಹಲವು ಬಾರಿ ಧ್ವನಿ ಎತ್ತಲಾಗಿದೆಯಾದರೂ ಇದರಿಂದ ಯಾವುದೇ ರೀತಿ ಬದಲಾವಣೆ ಕಂಡಿಲ್ಲ. ಹೆಣ್ಣು ಮಕ್ಕಳ ಕುರಿತಾದ ಯೋಜನೆಗಳು ಕೇವಲ ಪ್ರಚಾರ ಮತ್ತು ಅಭಿಮಾನ, ಕೆಲವೊಮ್ಮೆ ಭಾಷಣಕ್ಕೆ ಸೀಮಿತವಾಗಿಯೇ ಹೊರತು ಇದರಿಂದ ಯಾವುದೂ ಬದಲಾಗಿಲ್ಲ. ಮಹಿಳೆಯರು ನಿರಂತವಾಗಿ ಕಿರುಕುಳ, ದೌರ್ಜನ್ಯ ಅತ್ಯಾಚಾರದಂತಹ ಕೃತ್ಯಗಳಿಗೆ ಬಲಿಯಾಗುತ್ತಿದ್ದಾರೆ.
ಕೌಟುಂಬಿಕ ದೌರ್ಜನ್ಯ ಎಂಬುದು ನಮ್ಮ ಸಮಾಜದಲ್ಲಿ ಆಳವಾಗಿದ್ದು, ಇದು ಕೆಲವೊಮ್ಮೆ ಬೀದಿಗೆ ಬರುತ್ತದೆ. ಇಂತಹ ಘಟನೆಗಳು ನಗರದ ಸಿಸಿಟಿವಿಯಲ್ಲಿ ಸೆರೆಯಾಗಿ, ಎಲ್ಲೆಡೆ ವಿಶಾಲವಾಗಿ ಪ್ರಸರಣಗೊಳ್ಳುತ್ತವೆ. ಈ ವಿಡಿಯೋಗಳನ್ನು ನೋಡುತ್ತೇವೆ. ಬಳಿಕ ಏನಾಗುತ್ತದೆ? ಯುವತಿ, ಪುರುಷನನ್ನು ತಿರಸ್ಕರಿಸಿದಾಗ, ಆತ ಪ್ರತೀಕಾರವಾಗಿ ಆಕೆಯನ್ನು ಕೊಲ್ಲುವಂತಹ ಕೆಲವು ಪ್ರಕರಣದಲ್ಲಿ ನಾವು ನೋಡುತ್ತೇವೆ. ಕೆಳೆದೆರಡು ವಾರದ ಹಿಂದೆ ಕೂಡ ರಾಜಸ್ಥಾನದಲ್ಲಿ ಕೇವಲ 15 ವರ್ಷದ ಬಾಲಕಿ ಸ್ನೇಹಿತರ ದಿನದಂದು ಯುವಕನನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಘಟನೆ ವರದಿಯಾಗಿತ್ತು. ಇನ್ನು ಇದೇ ವರ್ಷದ ಜೂನ್ನಲ್ಲಿ ಮಥುರಾದಲ್ಲಿ ಯುವತಿ ಫೇಸ್ಬುಕ್ನಲ್ಲಿ ಸ್ನೇಹ ತಿರಸ್ಕರಿಸಿಳು ಎಂಬ ಕಾರಣಕ್ಕೆ ಕೊಲೆಯಾದಳು. ಇಂತಹ ಹಲವು ಪ್ರಕರಣಗಳು ನಡೆಯುತ್ತಿದ್ದು, ಇದರಲ್ಲಿ ಕೆಲವು ಮಾತ್ರ ವರದಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ಸಮಾಜ ಕೂಡ ಒಮ್ಮೆ ಧ್ವನಿ ಎತ್ತಿ ಹಾಗೇ ಸುಮ್ಮನಾಗುತ್ತದೆ.
ಕೋಲ್ಕತ್ತಾದ ಸಂತ್ರಸ್ತೆ ವಯಸ್ಕಳಾಗಿರಲಿ ಅಥವಾ ರಾಜಸ್ಥಾನದ ಹದಿಹರೆಯದ ಅಥವಾ ಮಥುರಾದ ಪ್ರಕರಣದಲ್ಲಿ ಕೊಲೆ ಎಂಬುದು ನಿಸ್ಸಂಶಯವಾಗಿ ಭಯಾನಕ. ಅಪ್ರಾಪ್ತ ಅಥವಾ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವೂ ಮತ್ತಷ್ಟು ಭೀಕರ. ಇತ್ತೀಚೆಗೆ ಮಹಾರಾಷ್ಟ್ರದ ಬದ್ಲಾಪುರ ಶಾಲೆಯಲ್ಲಿ 3 ಮತ್ತು 4 ವರ್ಷದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆಘಾತಕಾರಿ ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ ನಿವೃತ್ತ ನ್ಯಾಯಮೂರ್ತಿ ಲೋಕೂರ್.
ಮಕ್ಕಳ ಮೇಲಿನ ದೌರ್ಜನ್ಯ: ಮಕ್ಕಳ ಮೇಲಿನ ಅಪರಾಧಗಳು ಮಕ್ಕಳು ಮಾಡುವ ಅಪರಾಧಗಳಂತೆ ಮುಖ್ಯ ಸುದ್ದಿಯಾಗುವುದಿಲ್ಲ. ಉದಯಪುರದಲ್ಲಿ 10ನೇ ತರಗತಿ ಬಾಲಕ ಹಳೆ ವೈಷಮ್ಯದ ಹಿನ್ನೆಲೆ ತಮ್ಮ ಸಹಪಾಠಿಯನ್ನು ಇರಿದು ಕೊಂದ ಘಟನೆ ನಮ್ಮನ್ನು ಆಘಾತಕ್ಕೆ ಒಳಗಾಗಿಸಿತು. ಇದೇ ರೀತಿಯ ವಯಸ್ಕ ಮಕ್ಕಳನ್ನು ಕೊಂದಾಗ ಅಥವಾ ಅತ್ಯಾಚಾರಕ್ಕೆ ಒಳಗಾದಾಗ ಜನರು ಆಘಾತಗೊಳ್ಳುತ್ತಾರೆಯೇ ಎಂಬುದು ಮುಖ್ಯ. ಒಂದು ವೇಳೆ ಆಘಾತಗೊಂಡರೂ ಈ ರೀತಿಯ ಎಷ್ಟು ಅಪರಾಧಗಳನ್ನು ನಾವು ಚರ್ಚೆ ಮಾಡುತ್ತೇವೆ ಅಥವಾ ವರದಿಯಾಗುತ್ತವೆ? 2022ರಲ್ಲಿ ಎನ್ಸಿಆರ್ಬಿ ಪ್ರಕಟಿಸಿದ ಅಪರಾಧ ಪ್ರಕರಣಗಳ ಅಂಕಿ ಅಂಶಗಳು ಬೆಚ್ಚಿಬೀಳಿಸುತ್ತವೆ. 2021ರ ಪ್ರಕರಣಗಳಿಗೆ ಹೋಲಿಸಿದಾಗ 2022ರಲ್ಲಿ ಈ ಅಪರಾಧಗಳು ಶೇ 8.7ರಷ್ಟು ಹೆಚ್ಚಾಗಿದ್ದು, 1,62,449 ವರದಿಯಾಗಿವೆ. ಮಕ್ಕಳ ಮೇಲಿನ ಅಪರಾಧದಲ್ಲಿ ಎರಡು ವರ್ಗಗಳಿಗೆ ಮೊದಲನೆಯ ಪ್ರಕರಣಗಳು ಭಾರತೀಯ ದಂಡ ಸಂಹಿತೆ ಮತ್ತು ವಿಶೇಷ ಹಾಗೂ ಸ್ಥಳೀಯ ಕಾನೂನಿನ ಅಡಿಯಲ್ಲಿದೆ. ಇದರಲ್ಲಿ ಕೊಲೆ, ಅಪಹರಣ, ಮಾನವ ಕಳ್ಳ ಸಾಗಣೆ ಸೇರಿದಂತೆ ಅನೇಕವು ಇದೆ. ಎರಡನೇ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಗಳಾಗಿದ್ದು, ಇವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ (ಪೋಕ್ಸೊ) ಬರುತ್ತದೆ. ಈ ಅವಧಿಯಲ್ಲಿ ಹೆಣ್ಣು ಮಕ್ಕಳ ಮೇಲೆ 62,000 ಕ್ಕೂ ಹೆಚ್ಚು ಲೈಂಗಿಕ ದೌರ್ಜನ್ಯದ ಪ್ರಕರಣಗಳು ವರದಿಯಾಗಿವೆ. ಇದರ ಅನುಸಾರ ಸರಾಸರಿ ಪ್ರತಿ 10 ನಿಮಿಷಕ್ಕೊಮ್ಮೆ ಹೆಣ್ಣು ಮಗು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಭಯಾನಕ ಸ್ಥಿತಿಯಲ್ಲಿ ಸಮಾಜ ಏನು ಮಾಡುತ್ತಿದೆ?
ಈ ಪ್ರಕರಣದಲ್ಲಿ ಹದಿಹರೆಯದವರು ಪಲಾಯನ (ಓಡಿ ಹೋಗುವುದು) ಪ್ರಕರಣಗಳು ಸೇರಿದ್ದು, ಇವುಗಳ ಈ ಅಂಕಿಅಂಶಗಳ ಬಗ್ಗೆ ಜಾಗ್ರತೆಯಿಂದ ಪದಬಳಕೆ ಮಾಡಬೇಕಿದೆ. ಇಂತಹ ಅಪರಾಧಗಳ ಸಂಖ್ಯೆ ದೊಡ್ಡದಿಲ್ಲದಿದ್ದರೂ, ಪ್ರತಿ ಬಾರಿ ಈ ರೀತಿಯ ಘಟನೆ ನಡೆದಾಗ, ಪ್ರತ್ಯೇಕ ಚರ್ಚೆಗೆ ಕರೆ ನೀಡಲಾಗುವುದು.