ಕರ್ನಾಟಕ

karnataka

ETV Bharat / opinion

ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ, ಮಧ್ಯಮ ವರ್ಗದವರಿಗೆ ಬಂಪರ್​: "ನಿರ್ಮಲಾ" ಬಜೆಟ್​ನಲ್ಲಿ ಇನ್ನೂ ಏನೇನಿವೆ? - Union Budget highlights

ಕೇಂದ್ರ ಬಜೆಟ್​​ನಲ್ಲಿ ರೈತರು, ಮಹಿಳೆಯರು, ಯುವಕರು, ಬಡವರನ್ನು ಪರಿಗಣಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಮಧ್ಯಮ ವರ್ಗದ ಕ್ಲಾಸಿಕ್​ ಬಜೆಟ್​ ಅನ್ನು ಮಂಡಿಸಿದ್ದಾರೆ. ಇದರಲ್ಲಿನ ಪ್ರಮುಖ ಅಂಶಗಳ ಬಗ್ಗೆ ಲೇಖಕ ಕೃಷ್ಣಾನಂದ್ ಅವರು ಇಲ್ಲಿ ವಿವರಿಸಿದ್ದಾರೆ.

ಕೇಂದ್ರ ಬಜೆಟ್​ 2024
ಕೇಂದ್ರ ಬಜೆಟ್​ 2024 (ETV Bharat)

By ETV Bharat Karnataka Team

Published : Jul 24, 2024, 10:53 PM IST

Updated : Jul 24, 2024, 11:02 PM IST

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಪ್ರಸಕ್ತ ಹಣಕಾಸು ವರ್ಷಕ್ಕೆ 48 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಬಜೆಟ್ ಅನ್ನು ಮಂಡಿಸಿದ್ದಾರೆ. ಯುವಕರ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವ ಗುರಿ ಹೊಂದಲಾಗಿದೆ. ದೇಶದ ಜನಸಂಖ್ಯೆಯ ಸುಮಾರು 3/2 ರಷ್ಟು ಜನರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 16 ರಿಂದ 35 ವರ್ಷ ವಯಸ್ಸಿನವರಿಗೆ ಉದ್ಯೋಗ ಸೃಷ್ಟಿಸುವುದು ಅನಿವಾರ್ಯವಾಗಿದೆ.

ಈ ಗುರಿಯನ್ನು ಸಾಧಿಸುವ ಸಲುವಾಗಿ ಹಣಕಾಸು ಸಚಿವರು ಈ ವರ್ಷದ ಮೊದಲ ಪೂರ್ಣ ಬಜೆಟ್‌ನಲ್ಲಿ ಸರಣಿ ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನು ಆದ್ಯತೆಯ ಗುಂಪುಗಳನ್ನಾಗಿ ಪರಿಗಣಿಸಲಾಗಿದೆ. ಈ ಬಾರಿ ಹೆಚ್ಚಿನ ಯೋಜನೆಗಳು ಯುವಕರಿಗೆ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಯ ಮೇಲಿವೆ. ಬಜೆಟ್‌ನ ನಿರ್ದಿಷ್ಟ ಗಮನವು ಉದ್ಯೋಗ, ಕೌಶಲ್ಯ, ಎಂಎಸ್‌ಎಂಇಗಳು ಮತ್ತು ಮಧ್ಯಮ ವರ್ಗದ ಮೇಲೆ ಕೇಂದ್ರೀಕರಿಸಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ.

ಹೊಸ ಉದ್ಯೋಗಿಗಳಿಗೆ ಸಂಬಳ:5 ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಸೃಷ್ಟಿಸುವ ಪ್ರಧಾನ ಮಂತ್ರಿಯವರ 5 ಯೋಜನೆಗಳನ್ನು ಘೋಷಿಸಲು ನಾನು ಸಂತೋಷ ಪಡುತ್ತೇನೆ. ಈ ಬಜೆಟ್‌ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕಾಗಿ 1.48 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಉದ್ಯೋಗ ಸಂಬಂಧಿತ ಪ್ರೋತ್ಸಾಹಕ್ಕಾಗಿ ಮೂರು ಯೋಜನೆಗಳಿವೆ. ಔಪಚಾರಿಕ ವಲಯದ ಉದ್ಯೋಗಗಳಿಗೆ ಸೇರುವ ಹೊಸ ಉದ್ಯೋಗಿಗಳಿಗೆ ಮೊದಲ ಒಂದು ತಿಂಗಳ ವೇತನವನ್ನು (ಗರಿಷ್ಠ 15 ಸಾವಿರ) ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆಯು 2.1 ಕೋಟಿ ಯುವಕರಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

ಔಪಚಾರಿಕ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ, ಸರ್ಕಾರವು ಮೊದಲ ನಾಲ್ಕು ವರ್ಷಗಳವರೆಗೆ ನಿಗದಿತ ಮಾಪಕಗಳಲ್ಲಿ ಇಪಿಎಫ್ ಕೊಡುಗೆಗಾಗಿ ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡುತ್ತದೆ. ಇಪಿಎಫ್ ಯೋಜನೆಯಲ್ಲಿ ಮೊದಲ ಸಲ ನೋಂದಾಯಿಸಿಕೊಂಡವರಿಗೆ ಅನ್ವಯವಾಗುವ ಯೋಜನೆಯು 30 ಲಕ್ಷ ಯುವಕರಿಗೆ ಪ್ರಯೋಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

ಐಟಿ ಹಬ್​ ನಿರ್ಮಾಣ:ಹೆಚ್ಚು ಔಪಚಾರಿಕ ಉದ್ಯೋಗಗಳನ್ನು ಸೃಷ್ಟಿಸುವ ಸಲುವಾಗಿ, ಎಲ್ಲ ಹೊಸ ನೇಮಕಗಳಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿವರೆಗೆ ಉದ್ಯೋಗದಾತರ EPF ಕೊಡುಗೆಗಳನ್ನು ಸರ್ಕಾರವು ಮರುಪಾವತಿ ಮಾಡುತ್ತದೆ. ಇದರಿಂದ 50 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಕೇಂದ್ರವು ರಾಜ್ಯಗಳು ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ 1,000 ಐಟಿಐಗಳನ್ನು ಹಬ್ ಮತ್ತು ಸ್ಪೋಕ್ ಮಾಡೆಲ್‌ನಲ್ಲಿ ಯುವಜನರ ಕೌಶಲ್ಯಕ್ಕಾಗಿ ಒಂದರಿಂದ ಎರಡು ವರ್ಷಗಳ ಕೋರ್ಸ್‌ಗಳನ್ನು ಒದಗಿಸುವ ಮೂಲಕ 20 ಲಕ್ಷ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ.

ಆದಾಗ್ಯೂ, ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ 20 ಲಕ್ಷ ಯುವಕರಿಗೆ ದೊಡ್ಡ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ನೀಡುವ ಗುರಿ ಹೊಂದಿರುವುದರಿಂದ, ಇಂಟರ್ನ್‌ಶಿಪ್ ಯೋಜನೆ ಜಾರಿ ಮಾಡಲಿದೆ. ಪೂರ್ಣ ಸಮಯದ ಶಿಕ್ಷಣ ಅಥವಾ ಪೂರ್ಣ ಸಮಯದ ಉದ್ಯೋಗದಲ್ಲಿ ಇಲ್ಲದಿರುವ 21-24 ವರ್ಷ ವಯಸ್ಸಿನ ಯುವಕರಿಗೆ ಈ ಯೋಜನೆ ಅನ್ವಯಿಸುತ್ತದೆ. ಯುವಕರಿಗೆ ಮಾಸಿಕ ಭತ್ಯೆಯಾಗಿ ಮಾಸಿಕ 5 ಸಾವಿರ ರೂಪಾಯಿ ನೀಡಲಾಗುತ್ತದೆ.

ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ಭಾರ ಇಳಿಕೆ:ರೈತರು ಮತ್ತು ಯುವಕರನ್ನು ಓಲೈಸುವುದರ ಜೊತೆಗೆ ವಿತ್ತ ಸಚಿವರು, ಮಧ್ಯಮ ವರ್ಗದ ತೆರಿಗೆದಾರರಿಗೂ ಬಂಪರ್​ ನೀಡಿದ್ದಾರೆ. ಹೊಸ ತೆರಿಗೆ ಪದ್ಧತಿಯ ಅಡಿ ತೆರಿಗೆ ಸ್ಲ್ಯಾಬ್‌ಗಳನ್ನು ಮತ್ತಷ್ಟು ಇಳಿಕೆ ಮಾಡಿದರು. ಸಂಬಳದಾರ ತೆರಿಗೆದಾರರಿಗೆ ಒಂದು ವರ್ಷದಲ್ಲಿ 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಕಡಿತ ಮಾಡಿದರು. ಈ ಕ್ರಮಗಳಿಂದ ತೆರಿಗೆದಾರರಿಗೆ ವರ್ಷದಲ್ಲಿ 17,500 ರೂ.ವರೆಗೆ ಪ್ರಯೋಜನವಾಗಲಿದೆ.

ಸ್ಟಾರ್ಟಪ್‌ಗಳ ಮೇಲಿನ ಏಂಜೆಲ್ ಟ್ಯಾಕ್ಸ್ ರದ್ದತಿ:ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಹೆಚ್ಚಿಸುವ ಸಲುವಾಗಿ, ಎಲ್ಲಾ ವರ್ಗದ ಹೂಡಿಕೆದಾರರಿಗೆ 1961 ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2)(viib) ಅಡಿ ತೆರಿಗೆಯನ್ನು ರದ್ದುಗೊಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು. ಏಂಜೆಲ್ ಟ್ಯಾಕ್ಸ್ ಎಂದು ಜನಪ್ರಿಯವಾಗಿರುವ ಈ ತೆರಿಗೆಯನ್ನು 2012 ರಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಹೆಚ್ಚು ವಿವಾದಾಸ್ಪದವಾಗಿತ್ತು. ಇದು ದೇಶದಲ್ಲಿ ಸ್ಟಾರ್ಟ್ಅಪ್ ಬೆಳವಣಿಗೆಗೆ ತೊಡರಾಗಿತ್ತು.

ಮೈತ್ರಿ ಪಕ್ಷಗಳಿಗೆ ಬಂಪರ್​:ಜೆಡಿಯು ಆಡಳಿತವಿರುವ ಬಿಹಾರ ಮತ್ತು ತೆಲುಗು ದೇಶಂ ಪಕ್ಷದ ಆಂಧ್ರ ಪ್ರದೇಶಗಳು ಎನ್​ಡಿಎ ಕೂಟದ ಮಿತ್ರಪಕ್ಷಗಳಾಗಿವೆ. ಈ ರಾಜ್ಯಗಳಿಗೆ ವಿಶೇಷ ಯೋಜನೆಗಳನ್ನು ನೀಡುವ ಮೂಲಕ ಬಂಪರ್​ ನೀಡಿದ್ದಾರೆ. ಮೈತ್ರಿ ಪಾಲುದಾರರು ಬಜೆಟ್‌ನಲ್ಲಿ ತಮ್ಮ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಒತ್ತಾಯಿಸಿದ್ದರು. ಸರ್ಕಾರವು ಒಟ್ಟಾರೆ ಬಜೆಟ್ ಬಂಡವಾಳ ವೆಚ್ಚವನ್ನು 11.11 ಲಕ್ಷ ಕೋಟಿ ರೂ.ಗಳಲ್ಲಿ ಮಧ್ಯಂತರ ಬಜೆಟ್‌ನಲ್ಲಿರುವ ಅದೇ ಮಟ್ಟದಲ್ಲಿ ಮುಂದುವರಿಸಿದೆ.

ಇದನ್ನೂ ಓದಿ:1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್: 2ಕೋಟಿ ಉದ್ಯೋಗ ಸೃಷ್ಟಿ ಭರವಸೆ, ನಿರುದ್ಯೋಗ ನಿವಾರಣೆಗೆ ದಿಟ್ಟ ಹೆಜ್ಜೆ - 1 CRORE INTERNSHIP 2 CRORE JOB

Last Updated : Jul 24, 2024, 11:02 PM IST

ABOUT THE AUTHOR

...view details