ಚಳಿಗಾಲದಲ್ಲಿ ಸಖತ್ ಹಾಟ್ 'ಪೆಪ್ಪರ್ ಸೂಪ್': ಕೆಮ್ಮು & ಶೀತಕ್ಕೆ ಉತ್ತಮ ಮನೆ ಮದ್ದು - HOW TO MAKE PEPPER RASAM
How to Make Pepper Rasam in Winter: ಪೆಪ್ಪರ್ ರಸಂ ಅಥವಾ ಸೂಪ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರುಚಿಗೆ ರುಚಿ ಮತ್ತು ಆರೋಗ್ಯಕ್ಕೆ ಆರೋಗ್ಯ ಇಲ್ಲಿದೆ ನೋಡಿದೆ ಸೂಪರ್ ರೆಸಿಪಿ..
How to Make Pepper Rasam in Winter:ಕರ್ನಾಟಕ ರಾಜ್ಯದಲ್ಲಿ ಚಳಿ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಚಳಿಗಾಲದಲ್ಲಿ ಅನೇಕ ಜನರು ಬಿಸಿ ಸೂಪ್ ಮತ್ತು ರಸಂ ಸೇವಿಸಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ನಾವು ನಿಮಗಾಗಿ ಕಾಳುಮೆಣಸಿನ ರಸಂ ತಂದಿದ್ದೇವೆ.
ಈ ಸೂಪ್ ಅಥವಾ ರಸಂ ತುಂಬಾ ರುಚಿಕರವಾಗಿರುವುದು ಮಾತ್ರವಲ್ಲದೆ ಈ ಋತುವಿನಲ್ಲಿ ಬರುವ ಶೀತ ಮತ್ತು ಕೆಮ್ಮು ಸಮಸ್ಯೆಗಳಿಂದ ರಕ್ಷಿಸಲು ಚೆನ್ನಾಗಿ ಕೆಲಸ ಮಾಡುತ್ತದೆ. ಈ ಸೂಪ್ನ್ನು ತಯಾರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ರಸಂ ಕೇವಲ 5 ನಿಮಿಷಗಳಲ್ಲಿ ಸಿದ್ಧವಾಗುತ್ತದೆ. ಈ ರೆಸಿಪಿಗೆ ಕಾಂಬಿನೇಷನ್ ಆಗಿ ಆಲೂಗಡ್ಡೆ ಫ್ರೈ ಸೇರಿದಂತೆ ವಿವಿಧ ಫ್ರೈಗಳು ತುಂಬಾ ರುಚಿಕರವಾಗಿರುತ್ತದೆ. ಈ ರುಚಿಕರವಾದ ಪೆಪ್ಪರ್ ರಸಂ ಮಾಡುವುದು ಹೇಗೆ ಎಂಬುದನ್ನು ಈ ಸ್ಟೋರಿಯಲ್ಲಿ ತಿಳಿಯೋಣ.
ಪೆಪ್ಪರ್ ರಸಂ ಬೇಕಾಗುವ ಸಾಮಗ್ರಿಗಳು..
ಕಾಳುಮೆಣಸು - 1 ಟೀಸ್ಪೂನ್
ಜೀರಿಗೆ - 1 ಟೀಸ್ಪೂನ್
ಬೆಳ್ಳುಳ್ಳಿ ಎಸಳು - 10-12
ಎಣ್ಣೆ - 1 ಟೀಸ್ಪೂನ್
ಸಾಸಿವೆ - 1 ಟೀಸ್ಪೂನ್
ಅರಿಶಿನ - ಕಾಲು (1/4) ಚಮಚ
ಒಣ ಮೆಣಸಿನಕಾಯಿ - 3
ಟೊಮೆಟೊ - 1 (ದೊಡ್ಡದು)
ಉಪ್ಪು - ರುಚಿಗೆ ಬೇಕಾಗುವಷ್ಟು
ಹುಣಸೆಹಣ್ಣು - ದೊಡ್ಡ ನಿಂಬೆಹಣ್ಣಿನ ಗಾತ್ರ (ನೆನಸಿಟ್ಟುಕೊಂಡು ರಸವನ್ನು ತಯಾರಿಸಿಕೊಳ್ಳಿ)
ಕರಿಬೇವಿನ ಎಲೆಗಳು - 3
ಕೊತ್ತಂಬರಿ - ಸಣ್ಣ ಕಟ್
ಇಂಗು - 2 ಚಿಟಿಕೆ
ಪೆಪ್ಪರ್ ರಸಂ ತಯಾರಿಕೆಯ ವಿಧಾನ:
ಮೊದಲು ನಿಂಬೆ ಗಾತ್ರದ ಹುಣಸೆಹಣ್ಣನ್ನು ನೆನೆಸಿ, ಅದರಿಂದ ರಸವನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ. 600 ಮಿಲಿ ಲೀಟರ್ ನೀರನ್ನು ಸೇರಿಸಿ ಮತ್ತು ಅದನ್ನು ಪಕ್ಕಕ್ಕೆ ಇರಿಸಿಕೊಳ್ಳಿ.
ಈಗ ಮಿಕ್ಸಿಂಗ್ ಜಾರಿಗೆ ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿ ರುಬ್ಬಿಕೊಳ್ಳಿ.
ಈಗ ಒಲೆ ಆನ್ ಮಾಡಿ ಬಾಣಲೆ ಇಡಿ.. ಅದಕ್ಕೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಾಸಿವೆ, ಅರಿಶಿನ ಹಾಗೂ ಒಣಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ.
ನಂತರ ತೆಳುವಾಗಿ ಕತ್ತರಿಸಿದ ಟೊಮೆಟೊ ತುಂಡುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.
ಇದಾದ ನಂತರ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಹಾಗೂ ಟೊಮೆಟೊ ಪೀಸ್ಗಳನ್ನು ಮೃದುವಾಗುವವರೆಗೆ ಕುದಿಸಿ.
ನಂತರ ಮೊದಲು ತಯಾರಿಸಿದ ಹುಣಸೆಹಣ್ಣಿನ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಪುಡಿಮಾಡಿದ ಕಾಳುಮೆಣಸಿನ ಮಿಶ್ರಣವನ್ನು ಸೇರಿಸಿ ಹಾಗೂ ಮತ್ತೆ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಇದೀಗ ಕಡ್ಡಿಯ ಜೊತೆಗೆ ಕರಿಬೇವಿನ ಸೊಪ್ಪು, ಸಣ್ಣಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪು ಹಾಗೂ ಇಂಗು ಸೇರಿಸಿ.
ರಸಂ ಚೆನ್ನಾಗಿ ಬೇಯಿಸಬೇಕಾಗುತ್ತದೆ, ಮಧ್ಯಮ ಉರಿಯಲ್ಲಿಟ್ಟರೆ ಒಳ್ಳೆಯದು. 10 ನಿಮಿಷಗಳ ನಂತರ, ಸ್ಟವ್ ಆಫ್ ಮಾಡಿ ಕುದಿಯಲು ಬಿಡಬೇಕಾಗುತ್ತದೆ. ಆಗ ತುಂಬಾ ರುಚಿಕರವಾದ ಕಾಳುಮೆಣಸಿನ ಸಾರು ಸವಿಯಲು ಸಿದ್ಧವಾಗುತ್ತದೆ.
ಈ ಕಾಳುಮೆಣಸಿನ ರಸಂ ಅನ್ನದ ಜೊತೆಗೆ ಇಡ್ಲಿ ಮತ್ತು ವಡಾದಂತಹ ಉಪಹಾರದೊಂದಿಗೆ ತುಂಬಾ ಒಳ್ಳೆಯದು.
ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿರುವವರು.. ಇದನ್ನು ಸೋಸಿಕೊಂಡು ರಸಂ ಅನ್ನು ಕುಡಿದರೆ ತುಂಬಾ ಒಳ್ಳೆಯದು.
ಈ ಸಲಹೆಗಳು ಕಡ್ಡಾಯ:
ಕಾಳುಮೆಣಸು, ಜೀರಿಗೆ ಮತ್ತು ಬೆಳ್ಳುಳ್ಳಿಯನ್ನು ಒಳ್ಳಿನಲ್ಲಿ ರುಬ್ಬಿಕೊಂಡರೆ, ರಸಂ ತುಂಬಾ ರುಚಿಯಾಗಿರುತ್ತದೆ. ಮಿಕ್ಸಿಗೆ ಹಾಕಿದರೆ ಅಷ್ಟೊಂದು ಸುವಾಸನೆ ಬರುವುದಿಲ್ಲ.
ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪು ಇದ್ದರೆ ಅದರ ರುಚಿ ಹೆಚ್ಚಿರುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ.. 10 ನಿಮಿಷ ಬೇಯಿಸಿದರೆ ಸಾಕು, ಹೆಚ್ಚು ಹೊತ್ತು ಕುದಿಸಿದರೆ ಪರಿಮಳ ಕಡಿಮೆಯಾಗುತ್ತದೆ.