Onion Bajji Recipe in Kannada:ಸಂಜೆ ಟೀ ವೇಳೆಯಲ್ಲಿ ಸಮೋಸ, ಮಿರ್ಚಿ ಬಜ್ಜಿ ಸೇರಿದಂತೆ ವಿವಿಧ ತಿಂಡಿಗಳನ್ನು ತಿನ್ನಲು ಅನೇಕರು ಇಷ್ಟಪಡುತ್ತಾರೆ. ಸ್ವಲ್ಪ ಖಾರದ ತಿಂಡಿಗಳನ್ನು ತಿಂದು ಟೀ ಅಥವಾ ಕಾಫಿ ಕುಡಿದರೆ ಮನಸ್ಸಿಗೆ ಸಮಾಧಾನ ಲಭಿಸುತ್ತದೆ. ಹಾಗಾದರೆ, ನೀವು ಮನೆಯಲ್ಲಿ ಸಂಜೆಯ ವಿವಿಧ ತಿಂಡಿಗಳನ್ನು ಪ್ರಯತ್ನಿಸುತ್ತೀರಾ? ಇದೀಗ 10 ನಿಮಿಷದಲ್ಲಿ ಈರುಳ್ಳಿ ಬಜ್ಜಿ ಮಾಡುವುದು ಹೇಗೆ? ಈರುಳ್ಳಿ ಬಜ್ಜಿ ಮಾಡಿದರೆ ಗರಿಗರಿಯಾಗಿ ಮತ್ತು ಒಳಗೆ ಮೃದುವಾಗಿ, ತುಂಬಾ ರುಚಿಯಾಗಿರುತ್ತದೆ. ಇದೀಗ ತಡಮಾಡದೇ ಈರುಳ್ಳಿ ಬಜ್ಜಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಈರುಳ್ಳಿ ಬಜ್ಜಿಗೆ ಬೇಕಾಗುವ ಪದಾರ್ಥಗಳೇನು?:
- ಮೊಸರು- 1 ಕಪ್
- ಗೋಧಿ ಹಿಟ್ಟು - 1 ಅರ್ಧ ಕಪ್
- ಅಕ್ಕಿ ಹಿಟ್ಟು - ಅರ್ಧ ಕಪ್
- ರುಚಿಗೆ ತಕ್ಕಷ್ಟು ಉಪ್ಪು
- ಆಲೂಗಡ್ಡೆ- 2
- ಹಸಿಮೆಣಸಿನಕಾಯಿ- 4
- ಈರುಳ್ಳಿ - 2
- ಕರಿಬೇವಿನ ಎಲೆಗಳು- 2
- ಜೀರಿಗೆ- ಟೀಸ್ಪೂನ್
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಶುಂಠಿ ಚೂರುಗಳು- 2 ಚಿಕ್ಕದು
- ಅಡಿಗೆ ಸೋಡಾ- ಚಿಟಿಕೆ
ತಯಾರಿಸುವುದು ಹೇಗೆ ಗೊತ್ತಾ?:
- ಮೊದಲು ಆಲೂಗಡ್ಡೆಯನ್ನು ನೀರಿನಲ್ಲಿ ತೊಳೆದು ಸಿಪ್ಪೆಯನ್ನು ತೆಗೆದುಹಾಕಿ. ನಂತರ ತೆಳುವಾದ ಚೂರುಗಳಾಗಿ ಕತ್ತರಿಸಿ.
- ಹಸಿರು ಮೆಣಸಿನಕಾಯಿ, ಈರುಳ್ಳಿಯನ್ನು ಸಹ ಸಣ್ಣಗೆ ಕತ್ತರಿಸಿಕೊಳ್ಳಬೇಕು.
- ಶುಂಠಿ, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕಾಗುತ್ತದೆ.
- ಈಗ ಮಿಕ್ಸಿಂಗ್ ಬೌಲ್‌ಗೆ ಮೊಸರು, ಆಲೂಗಡ್ಡೆ ತುಂಡುಗಳನ್ನು ಹಾಕಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಬೇಕಾಗುತ್ತದೆ.
- ನಂತರ ಗೋಧಿ ಹಿಟ್ಟು ಹಾಗೂ ಅಕ್ಕಿ ಹಿಟ್ಟು ಸೇರಿಸಿ ಮತ್ತೆ ಚೆನ್ನಾಗಿ ರುಬ್ಬಿಕೊಳ್ಳಿ. (ಹಿಟ್ಟಿನ ಅವಶ್ಯಕತೆಗೆ ಅನುಗುಣವಾಗಿ, ರುಬ್ಬುವಾಗ ಸ್ವಲ್ಪ ನೀರು ಸೇರಿಸಿ. ಗೋಧಿ ಹಿಟ್ಟಿನ ಬದಲಿಗೆ ಮೈದಾ ಹಿಟ್ಟನ್ನು ಸಹ ಬಳಸಬಹುದು.)
- ಈಗ ಮಿಕ್ಸರ್‌ನಿಂದ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ತೆಗೆದುಕೊಳ್ಳಿ. ಗೋಧಿ ಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ನಂತರ ತುರಿದ ಶುಂಠಿ, ಕರಿಬೇವು, ಧನಿಯಾ ಪುಡಿ, ಈರುಳ್ಳಿ, ಹಸಿರು ಮೆಣಸಿನಕಾಯಿ ತುಂಡುಗಳು, ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಹಿಟ್ಟನ್ನು ಕಲಸಿ.
- ನಂತರ ಈರುಳ್ಳಿ ಬಜ್ಜಿ ಹುರಿಯಲು.. ಒಲೆಯ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಈರುಳ್ಳಿ ಬಜ್ಜಿಯನ್ನು ಸಣ್ಣ ತುಂಡುಗಳಾಗಿ ಫ್ರೈ ಮಾಡಿ.
- ಸ್ಟವ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಬಜ್ಜಿಗಳನ್ನು ಡೀಪ್ ಫ್ರೈ ಮಾಡಿ.
- ಈರುಳ್ಳಿ ಬೋಂಡಾಗಳನ್ನು ಈ ರೀತಿ ಮಾಡಿದರೆ ಕುರುಕಲು ಹಾಗೂ ತುಂಬಾ ರುಚಿಯಾಗಿರುತ್ತದೆ. ಈ ಬಜ್ಜಿಯ ಜೊತೆಗೆ ಶೇಂಗಾ ಚಟ್ನಿ ಮತ್ತು ಟೊಮೆಟೊ ಚಟ್ನಿಯೊಂದಿಗೆ ಸಖತ್ ಟೇಸ್ಟ್ ಕೊಡುತ್ತದೆ.
- ನಿಮಗೆ ಇಷ್ಟವಾದಲ್ಲಿ, ಈ ರೀತಿಯ ಈರುಳ್ಳಿ ಬಜ್ಜಿಯನ್ನು ಸಹ ನೀವು ಪ್ರಯತ್ನಿಸಬಹುದು.
ಇವುಗಳನ್ನೂ ಓದಿ: |