Masala Nippattu in kannada: ಸಂಜೆಯಾದರೆ ಸಾಕು ಎನಾದರು ತಿಂಡಿ ತಿನಬೇಕು ಎಂದು ಅನಿಸುವುದು ಸಾಮಾನ್ಯವಾಗಿದೆ. ಬಹುತೇಕರು ಅಂಗಡಿಯಿಂದ ಖರೀದಿಸಿ ಮಸಾಲೆ ನಿಪ್ಪಟ್ಟು ಸೇವಿಸುತ್ತಾರೆ. ಆದ್ರೆ, ಹಲವರಿಗೆ ಇವುಗಳನ್ನು ಸರಿಯಾಗಿ ತಯಾರಿಸುವುದು ಹೇಗೆ ಎಂದು ತಿಳಿದಿಲ್ಲ. ಕೆಲವರು ಮನೆಯಲ್ಲಿ ಸಿದ್ಧಪಡಿಸಿದರೂ ಅವು ಗಟ್ಟಿಯಾಗಿ ಬರುತ್ತದೆ. ಈ ಸಲಹೆಗಳನ್ನು ಅನುಸರಿಸಿ ಈ ಮಸಾಲಾ ನಿಪ್ಪಟ್ಟು ಸಿದ್ಧಪಡಿಸಿದರೆ, ತುಂಬಾ ಟೇಸ್ಟಿ ಮತ್ತು ಗರಿಗರಿಯಾದ ಬರುತ್ತವೆ. ಹಾಗಾದ್ರೆ, ಮಸಾಲಾ ನಿಪ್ಪಟ್ಟು ಅನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ನಿಪ್ಪಟ್ಟು ರೆಡಿ ಮಾಡಲು ಬೇಕಾಗುವ ಪದಾರ್ಥಗಳು:
- ಅಕ್ಕಿ ಹಿಟ್ಟು - 4 ಕಪ್
- ಹೆಸರು ಬೇಳೆ - ಕಾಲು ಕಪ್
- ಕಡಲೆ ಕಾಳು - ಕಾಲು ಕಪ್
- ಖಾರದ ಪುಡಿ - 1 ಟೀಸ್ಪೂನ್
- ಅರಿಶಿನ - ಚಿಟಿಕೆ
- ಉಪ್ಪು - ರುಚಿಗೆ ತಕ್ಕಷ್ಟು
- ಕರಿಬೇವು - 6 ಎಲೆಗಳು
- ಬೆಣ್ಣೆ - ಕಾಲು ಕಪ್
- ಎಣ್ಣೆ - ಹುರಿಯಲು ಸಾಕಾಗುವಷ್ಟು